Deeksha: ಗಿಚ್ಚಿ ಗಿಲಿಗಿಲಿ ಶೋಗಾಗಿ ಸರ್ಕಾರಿ ಕೆಲಸ ಬಿಟ್ಟ ಟೀಚರ್! ಈಕೆ ನಿಜಕ್ಕೂ ಯಾರು ಗೊತ್ತಾ?

0 15

Deeksha: ನಟನೆಯ ಕ್ಷೇತ್ರದಲ್ಲಿ ಆಸಕ್ತಿ ಇರುವವರನ್ನು, ಶ್ರದ್ಧೆ ಭಕ್ತಿಯಿಂದ ಕೆಲಸ ಕಲಿಯುವವರನ್ನು ಕಲಾದೇವತೆ ಎಂದಿಗೂ ಕೈಬಿಟ್ಟಿಲ್ಲ. ಹಲವು ಕಲಾವಿದರು ತಮ್ಮ ಕೆಲಸ, ಓದು ಇದನ್ನೆಲ್ಲ ಬಿಟ್ಟು ನಟನೆಯ ಕ್ಷೇತ್ರವನ್ನೇ ಅರಸಿ ಬಂದಿದ್ದಾರೆ. ಅಂಥ ಕಲಾವಿದೆಯರಲ್ಲಿ ದೀಕ್ಷಾ ಕೂಡ ಒಬ್ಬರು. ಇವರು ಗಿಚ್ಚಿ ಗಿಲಿಗಿಲಿ ಶೋಗಾಗಿ ತಮ್ಮ ಸರ್ಕಾರಿ ಕೆಲಸವನ್ನೇ ಬಿಟ್ಟು ಬಂದಿದ್ದಾರೆ.

ಹೌದು, ಸೋಷಿಯಲ್ ಮೀಡಿಯಾದಲ್ಲಿ ದೀಕ್ಷಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಕಾಮಿಡಿ ರೀಲ್ಸ್ ಮಾಡುವ ಮೂಲಕ ಜನರಿಗೆ ಇಷ್ಟ ಆಗಿದ್ದಾರೆ ದೀಕ್ಷಾ. ಇವರು ಎಂಎಸ್ಸಿ ಬಿಎಡ್ ಓದಿದ್ದು, ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೈನ್ಸ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೆಯೇ ರಂಗಭೂಮಿಯಲ್ಲಿ ಆಸಕ್ತಿ ಇದ್ದು, 70ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ದೀಕ್ಷಾ ಅವರಿಗೆ ಗಿಚ್ಚಿ ಗಿಲಿಗಿಲಿ ಧಾರವಾಹಿಯಲ್ಲಿ ಸ್ಪರ್ಧಿಯಾಗಿ ಅವಕಾಶ ಸಿಕ್ಕ ಬಳಿಕ ತಮ್ಮ ಮೊರಾರ್ಜಿ ದೇಸಾಯಿ ಶಾಲೆಯ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ನಟನೆಯ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಇಲ್ಲಿಗೆ ಬಂದಿದ್ದಾರೆ. ಇವರಿಗೆ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಚಿಲ್ಲರ್ ಮಂಜು ಮೆಂಟರ್ ಆಗಿ ಸಿಕ್ಕಿದ್ದಾರೆ. ಸೋಷಿಯಲ್ ಮೀಡಿಯಾ ಇಂದ ಫೇಮಸ್ ಅಗಿರುವ ಇವರು ಸೋಷಿಯಲ್ ಮೀಡಿಯಾದಲ್ಲಿ ಹೇಗೆ ಮುಂದುವರೆಯುತ್ತಾರೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.