Deepa Katte: ತಂದೆ ಮಾತು ಕೇಳಿ ಹುಡುಗನಿಗೆ ಪ್ರೊಪೋಸ್ ಮಾಡಿ ಮದುವೆ ಆಗಿದ್ದಂತೆ ಶ್ರೀರಸ್ತು ಶುಭಮಸ್ತು ನಟಿ ದೀಪಾ, ಒಂಥರ ಡಿಫರೆಂಟ್ ಲವ್ ಸ್ಟೋರಿ

0 1

Deepa Katte: ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿ ಇತ್ತೀಚೆಗೆ 300 ಸಂಚಿಕೆಗಳನ್ನು ಪೂರ್ತಿ ಮಾಡಿದೆ. ಈ ಧಾರವಾಹಿಯಲ್ಲಿ ತುಳಸಿ ಅವರ ಮಗಳು ಸಂಧ್ಯಾ ಪಾತ್ರ ನೆಗಟಿವ್ ಶೇಡ್ ಇರುವ ಪಾತ್ರ ಆಗಿದೆ. ದುಡ್ಡಿಗೋಸ್ಕರ ತನ್ನ ಸ್ವಾರ್ಥಕ್ಕೋಸ್ಕರ ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿರುವ ಪಾತ್ರವಿದು. ಧಾರವಾಹಿಯಲ್ಲಿ ದತ್ತಾ ಅವರು ಸಂಧ್ಯಾಗೆ ಓಡಿ ಹೋದವಳು ಎಂದೇ ಕರೆಯುತ್ತಾರೆ.

ಈ ಹೆಸರು ಫೇಮಸ್ ಆಗಿದೆ ಎಂದರೆ ತಪ್ಪಲ್ಲ. ಈ ಪಾತ್ರದಲ್ಲಿ ಮಿಂಚುತ್ತಿರುವ ನಟಿಯ ಹೆಸರು ದೀಪಾ ಕಟ್ಟೆ. ಇವರು ಓದಿದ್ದು ಎಲ್ಲವೂ ಉಜಿರೆಯಲ್ಲಿ. ಇಂಜಿನಿಯರಿಂಗ್ ಓದಿದ ದೀಪಾ ಕಟ್ಟೆ ಅವರು MNC ಕಂಪನಿಯಲ್ಲಿ ಕೆಲಸ ಸಿಕ್ಕಿ ಬೆಂಗಳೂರಿಗೆ ಬಂದರು. ಇಲ್ಲಿ ಕೆಲಸ ಮಾಡುವುದರ ಜೊತೆಗೆ ನಟನೆ ಮೇಲೆ ಕೂಡ ಆಸಕ್ತಿ ಬೆಳೆಯಿತು. ಕೆಲಸಕ್ಕೆ ಹೋಗುತ್ತಲೇ ಅಭಿನಯ ತರಂಗದಲ್ಲಿ 1 ವರ್ಷದ ಡಿಪ್ಲೊಮಾ ಕೋರ್ಸ್ ಮಾಡಿದರು.

ಬಳಿಕ ಶಾಂತಂ ಪಾಪಂ, ಹಿಟ್ಲರ್ ಕಲ್ಯಾಣ, ಜೀವ ಹೂವಾಗಿದೆ ಧಾರವಾಹಿಗಳಲ್ಲಿ ಕೂಡ ನಟಿಸಿದರು. ಈಗ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ರಕ್ಷಿತ್ ಎನ್ನುವವರ ಜೊತೆಗೆ ಇವರ ಮದುವೆ ನಡೆಯಿತು. ರಕ್ಷಿತ್ ಹಾಗೂ ದೀಪಾ ಒಂದೇ ಕಾಲೇಜಿನಲ್ಲಿ ಓದಿದ್ದು, ಇಬ್ಬರಿಗೂ ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸ ಸಿಕ್ಕಿತು, ಬಳಿಕ ಒಂದೇ ಪ್ರಾಜೆಕ್ಟ್ ನಲ್ಲಿ ಜೊತೆಯಾಗಿ ಕೆಲಸ ಕೂಡ ಮಾಡಿದ್ದರಂತೆ.

ಒಮ್ಮೆ ದೀಪಾ ಅವರ ತಂದೆ ರಕ್ಷಿತ್ ಒಳ್ಳೆ ಹುಡುಗ, ಮದುವೆಗೆ ಕೇಳಬಹುದು ನಮ್ಮ ಮನೆಗೆ ಸರಿ ಹೊಂದುತ್ತಾನೆ ಎಂದು ಹೇಳಿದರಂತೆ. ಆಗ ದೀಪಾ ಅವರು ರಕ್ಷಿತ್ ಅವರಿಗೆ ಪ್ರೊಪೋಸ್ ಮಾಡಿದ್ದು, ಬಳಿಕ ಎರಡು ಕುಟುಂಬದವರು ಒಪ್ಪಿ ಮದುವೆ ಮಾಡಿಕೊಂಡಿದ್ದಾರೆ. ಇವರದ್ದು ಒಂಥರ ವಿಭಿನ್ನವಾದ ಲವ್ ಸ್ಟೋರಿ ಎಂದರೆ ತಪ್ಪಲ್ಲ.

Leave A Reply

Your email address will not be published.