Deepika Das: ಕಂಬದ ಮ್ಯಾಲಿನ ಗೊಂಬೆಯೆ ಹಾಡಿಗೆ ಹೆಜ್ಜೆ ಹಾಕಿದ ದೀಪಿಕಾ ದಾಸ್! ಫ್ಯಾನ್ಸ್ ಫಿದಾ!

Written by Pooja Siddaraj

Published on:

Deepika Das: ಜೀಕನ್ನಡ ವಾಹಿನಿಯಲ್ಲಿ ನಾಗಿಣಿ ಸೀರಿಯಲ್ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ದಾಸ್. ನಾಗಿಣಿ ಧಾರಾವಾಹಿಯಲ್ಲಿ ಇವರ ಅಭಿನಯ, ದೀಪಿಕಾ ಧರಿಸುತ್ತಿದ್ದ ಕಾಸ್ಟ್ಯೂಮ್ಸ್, ಆಭರಣಗಳು ಎಲ್ಲವೂ ಕೂಡ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಧಾರಾವಾಹಿ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಕೂಡ ಸ್ಪರ್ಧಿಸಿ, ತಮ್ಮ ಡ್ಯಾನ್ಸ್ ಸ್ಕಿಲ್ಸ್ ಇಂದ ಜಡ್ಜ್ ಗಳಿಂದ ಮೆಚ್ಚುಗೆ ಪಡೆದಿದ್ದರು.

ಜೊತೆಗೆ ಜೀಕನ್ನಡ ವಾಹಿನಿಯಲ್ಲಿ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಸಿದ್ದರು. ನಂತರ ಕಳೆದ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಕೂಡ ಸ್ಪರ್ಧಿಸಿದ್ದರು. ಬಿಗ್ ಬಾಸ್ ಮೂಲಕ ಕರ್ನಾಟಕದ ಜನತೆಗೆ ಇನ್ನಷ್ಟು ಇಷ್ಟವಾದರು. ನಿಜ ಜೀವನದಲ್ಲಿ ದೀಪಿಕಾರ ಸ್ವಭಾವ ಎಂಥದ್ದು, ಎಲ್ಲರೊಡನೆ ಹೇಗಿರುತ್ತಾರೆ ಎಂಬುದು ಬಿಗ್ ಬಾಸ್ ಮನೆಯಲ್ಲಿದ್ದಾಗ ಅವರ ಅಭಿಮಾನಿಗಳಿಗೆ ಗೊತ್ತಾಯಿತು. ಇನ್ನೇನು ದೀಪಿಕಾ ಫಿನಾಲೆ ತಲುಪುತ್ತಾರೆ ಎಂದುಕೊಳ್ಳುವಷ್ಟರಲ್ಲಿ, ಎಲಿಮಿನೇಟ್ ಆಗಿ ಶಾಕ್ ನೀಡಿದ್ದರು.

ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಗಳಿಸಿರುವ ದೀಪಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಫೋಟೋಶೂಟ್ ಗಳು, ರೀಲ್ಸ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ ದೀಪಿಕಾ. ಇದೀಗ ಇವರು ಅಪ್ಪಟ ಕನ್ನಡ ಹುಡುಗಿಯ ಹಾಗೆ ಸೀರೆ ಧರಿಸಿ ಹೊಸದೊಂದ್ ರೀಲ್ ಶೇರ್ ಮಾಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ನಾಗಮಂಡಲ ಸಿನಿಮಾ ಹಾಡಿಗೆ ರೀಲ್ಸ್ ಮಾಡಿದ್ದಾರೆ ದೀಪಿಕಾ.

ಕಂಬದ ಮ್ಯಾಲಿನ ಗೊಂಬೆಯೆ ಹಾಡಿಗೆ ಅಭಿನಯಿಸಿ, ಇದು ನನ್ನ ಮೆಚ್ಚಿನ ಗೀತೆ ಎಂದು ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ. ಹಳದಿ ಮತ್ತು ಹಸಿರುವ ಬಣ್ಣದ ಸೀರೆಯುಟ್ಟು, ಸುಂದರವಾಗಿ ಅಲಂಕಾರ ಮಾಡಿಕೊಂಡಿರುವ ದೀಪಿಕಾ ದಾಸ್ ಅವರ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ದೀಪಿಕಾ ದಾಸ್ ಅವರ ಅಂದವನ್ನು ಹೊಗಳುತ್ತಿದ್ದಾರೆ.

Leave a Comment