Dhanush Gowda: ಸದ್ದಿಲ್ಲದೇ ಎಂಗೇಜ್ ಆದ ಗೀತಾ ಸೀರಿಯಲ್ ಹೀರೋ ಧನುಷ್!

Written by Pooja Siddaraj

Published on:

Dhanush Gowda: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲವು ವರ್ಷಗಳಿಂದ ಪ್ರಸಾರವಾಗಿ ಫೇಮಸ್ ಆಗಿರುವ ಧಾರವಾಹಿ ಗೀತಾ. ಕಿರುತೆರೆಯಲ್ಲಿ ಈ ಧಾರವಾಹಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು ಎಂದರೆ ತಪ್ಪಲ್ಲ. ಧಾರವಾಹಿಯ ಹೀರೋ ಹೀರೋಯಿನ್ ಧನುಷ್ ಹಾಗೂ ಭವ್ಯ ನಿಜವಾಗಲು ಜೋಡಿಗಳೇ ಎಂದು ಎಲ್ಲರೂ ಅಂದುಕೊಳ್ಳುವಷ್ಟು ಇವರ ಜೋಡಿ ಫೇಮಸ್ ಆಗಿತ್ತು..

ಹಾಗೆಯೇ ಇವರಿಬ್ಬರು ಲವ್ ಮಾಡುತ್ತಿದ್ದಾರೆ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು, ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ದೊಡ್ಡ ಫ್ಯಾನ್ ಬೇಸ್ ಕೂಡ ಇದೆ. ಈ ಜೋಡಿಯ ಮುಂದಿನ ಜೀವನದ ಬಗ್ಗೆ ಎಲ್ಲರೂ ಕುತೂಹಲವಾಗಿದ್ದಾಗ ಎಂಗೇಜ್ ಆಗಿ ಶಾಕ್ ಕೊಟ್ಟಿದ್ದಾರೆ ಧನುಷ್ ಗೌಡ.

ಎಲ್ಲರೂ ಭವ್ಯ ಗೌಡ ಅವರ ಜೊತೆಯಲ್ಲೇ ಧನುಷ್ ಮದುವೆ ಆಗುತ್ತೆ ಎಂದುಕೊಂಡಿದ್ದರು. ಆದರೆ ಅದು ಸುಳ್ಳಾಗಿದ್ದು ಈಗ ಬೇರೊಬ್ಬ ಹುಡುಗಿಯ ಜೊತೆಗೆ ಎಂಗೇಜ್ ಆಗಿದ್ದಾರೆ. ಇವರ ಎಂಗೇಜ್ಮೆಂಟ್ ಗೆ ಗೀತಾ ಧಾರವಾಹಿಯ ಹೀರೋಯಿನ್ ಭವ್ಯ ಗೌಡ ಹಾಗೂ ಇನ್ನಿತರರು ಬಂದು ಶುಭ ಕೋರಿದ್ದಾರೆ. ಹುಡುಗಿ ಯಾರು ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ, ಆದರೆ ಎಂಗೇಜ್ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Leave a Comment