ಒಂದೆರಡು ದಿನಗಳಿಂದ ಭಾರಿ ಚರ್ಚೆ ಆಗುತ್ತಿರುವ ವಿಷಯ ನಟರಾದ ದರ್ಶನ್ ಮತ್ತು ಧ್ರುವ ಅವರ ನಡುವೆ ಮನಸ್ತಾಪ ಇದೆಯಾ ಎನ್ನುವುದಾಗಿದೆ. ದರ್ಶನ್ ಅವರು ಚಂದನವನದಲ್ಲಿ ಎಲ್ಲರ ಜೊತೆಗೆ ಪ್ರೀತಿ ಮತ್ತು ಗೌರವದಿಂದ ಇರುತ್ತಾರೆ. ಅರ್ಜುನ್ ಸರ್ಜಾ ಅವರ ಕುಟುಂಬದ ಜೊತೆಗೆ ದರ್ಶನ್ ಅವರಿಗೆ ಒಳ್ಳೆಯ ಒಡನಾಟ ಇತ್ತು, ಆದರೆ ಇತ್ತೀಚೆಗೆ ನಡೆದ ಅದೊಂದು ಘಟನೆಯಿಂದ ಜ್ ಅನುಮಾನ ಶುರುವಾಗಿದೆ.
ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ಕಾರಣ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಮಾಡಲಾಯಿತು. ಬಂದ್ ಗೆ ರಾಜ್ಯದ ಎಲ್ಲಾ ಜನರು ಸಪೋರ್ಟ್ ಮಾಡಿದರು. ಜೊತೆಗೆ ಚಿತ್ರರಂಗದ ಕಲಾವಿದರು ಕೂಡ ಚಲನಚಿತ್ರ ವಾಣಿಜ್ಯ ಮಂಡಳಿಯ ಎದುರಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಸೇರಿ ಹೋರಾಟ ಮಾಡಿದರು. ಈ ಹೋರಾಟ ನಡೆದದ್ದು ಶಿವಣ್ಣ ಅವರ ನೇತೃತ್ವದಲ್ಲಿ, ನಟ ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ ಸಾಕಷ್ಟು ಕಲಾವಿದರು ಬಂದಿದ್ದರು.
ಈ ವೇಳೆ ನಡೆದ ಅದೊಂದು ಘಟನೆ ನಟ ಧ್ರುವ ಸರ್ಜಾ ಮತ್ತು ನಟ ದರ್ಶನ್ ಅವರ ನಡುವೆ ವೈಮನಸ್ಸು ಶುರುವಾಗಿದೆ ಎನ್ನುವ ಅನುಮಾನ ಬರುವ ಹಾಗೆ ಮಾಡಿತ್ತು. ಅಂದು ದರ್ಶನ್ ಅವರು ವೇದಿಕೆ ಮೇಲೆ ಬಂದಾಗ, ಎಲ್ಲರು ಎದ್ದು ನಿಂತು ಮಾತನಾಡಿಸಿದರು ಸಹ, ಧ್ರುವ ಸರ್ಜಾ ಅವರು ಎದ್ದು ನಿಲ್ಲಲಿಲ್ಲ, ನಗಲು ಇಲ್ಲ ಮಾತನಾಡಿಸಲು ಇಲ್ಲ. ಈ ಒಂದು ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ದರ್ಶನ್ ಮತ್ತು ಧ್ರುವ ಸರ್ಜಾ ಅವರ ನಡುವೆ ಮನಸ್ತಾಪ ಇದೆಯಾ ಎನ್ನುವ ಪ್ರಶ್ನೆ ಶುರುವಾಗಿತ್ತು.
ಆ ವಿಚಾರದ ಬಗ್ಗೆ ಇದೀಗ ಧ್ರುವ ಸರ್ಜಾ ಅವರು ಆ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ಇಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬ, ಇಂದು ಮಧ್ಯರಾತ್ರಿ ಇಂದಲೇ ಅಭಿಮಾನಿಗಳು ಬಂದಿದ್ದು, ಮಾಧ್ಯಮದವರು ಕೂಡ ಧ್ರುವ ಅವರ ಮನೆ ಹತ್ತಿರ ಬಂದು, ದರ್ಶನ್ ಅವರ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಧ್ರುವ ಸರ್ಜಾ, ಮನಸ್ತಾಪ ಇರುವುದು ನಿಜ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಧ್ರುವ ಸರ್ಜಾ ಅವರು ಹೇಳಿರುವ ಹಾಗೆ, “ದರ್ಶನ್ ಸರ್ ನಮ್ಮ ಸೀನಿಯರ್, ನಮ್ಮ ಸೀನಿಯರ್ ಮೇಲೆ ಆ ಗೌರವ ನಮಗೆ ಇದೆ. ಆ ಗೌರವ ಅವರು ಎದುರುಗಡೆ ಇದ್ದಾಗ ಮಾತ್ರ ತೋರಿಸೋದಲ್ಲ, ಅವರು ಇಲ್ಲದೆ ಇರು ಆ ಮರಿಯಾದೆ ಕೊಡಬೇಕು, ಕೊಡ್ತೀವಿ. ನನ್ನ ಮನಸ್ಸಲ್ಲಿ ಕೆಲವು ಪ್ರಶ್ನೆಗಳಿವೆ, ಅದನ್ನೆಲ್ಲ ಕೇಳಿ ಉತ್ತರ ಸಿಗಬೇಕು. ಆ ಥರ ಮನಸ್ಸಲ್ಲಿ ಒಂದು ಇಟ್ಟುಕೊಂಡು, ಎದುರುಗಡೆ ಒಂಥರ ಇರೋದು, ಫೇಕ್ ಮಾಡೋದು ನನಗೆ ಬರಲ್ಲ. ಅದು ನನ್ನ ವ್ಯಕ್ತಿತ್ವ ಅಲ್ಲ..”ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ.
ಈ ರೀತಿ ಹೇಳುವ ಮೂಲಕ ದರ್ಶನ್ ಅವರೊಡನೆ ಮನಸ್ತಾಪ ಇರುವುದು ನಿಜ ಎಂದು ಒಪ್ಪಿಕೊಂಡಿದ್ದು, ಧ್ರುವ ಅವರ ಮನಸ್ಸಿನಲ್ಲಿ ಇರೋ ಪ್ರಶ್ನೆಗಳನ್ನ ಮುಕ್ತವಾಗಿ ಕೇಳ್ತಾರ ಅಥವಾ ದರ್ಶನ್ ಅವರೊಡನೆ ಪರ್ಸನಲ್ ಆಗಿ ಕೇಳ್ತಿರ ಎಂದು ಪ್ರಶ್ನೆ ಕೇಳಿದ್ದಕ್ಕೆ, ಉತ್ತರ ಕೊಟ್ಟಿರುವ ಧ್ರುವ ಸರ್ಜಾ ಅವರು, ದರ್ಶನ್ ಸರ್ ನಮ್ಮ ಕುಟುಂಬದ ಹಾಗೆ ನಾವು ಕೂತು ಮಾತಾಡ್ತೀವಿ ಅಂತ ಹೇಳಿದ್ದಾರೆ. ಆದರೆ ಆ ಮನಸ್ತಾಪಕ್ಕೆ ಕಾರಣ ಏನು, ನಡೆದಿರೋದೇನು ಎನ್ನುವ ಬಗ್ಗೆ ಎಂದು ಗೊತ್ತಾಗಿಲ್ಲ.