Dhruva Sarja: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುದ್ದಿನ ಮಗಳ ಹೆಸರೇನು ಗೊತ್ತಾ?

Written by Pooja Siddaraj

Published on:

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು ಕನ್ನಡದ ಸ್ಟಾರ್ ಹೀರೋ ಆಗಿದ್ದಾರೆ. ಧ್ರುವ ಅವರು ಕನ್ನಡ ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ, ನಟ ಅರ್ಜುನ್ ಸರ್ಜಾ ಅವರ ಸಹೋದರಿಯ ಮಗ ಧ್ರುವ ಸರ್ಜಾ, ಇವರು ನಟಿಸಿರುವುದು ಕಡಿಮೆ ಸಿನಿಮಾಗಳಲ್ಲಿ ಆದರೂ ಸಹ ನಟಿಸಿರುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಕೊನೆಯದಾಗಿ ಧ್ರುವ ಸರ್ಜಾ ಅವರು ಪೊಗರು ಸಿನಿಮಾದಲ್ಲಿ ನಟಿಸಿದರು.

ಪ್ರಸ್ತುತ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಟೀಸರ್ ಇಂದಲೇ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಧ್ರುವ ಅವರ ಮುಂದಿನ ಸಿನಿಮಾ KD, ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ನಿರ್ದೇಶಕ ಜೋಗಿ ಪ್ರೇಮ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

KD ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಖ್ಯಾತ ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಇದಿಷ್ಟು ಧ್ರುವ ಅವರ ಸಿನಿಮಾ ಬಗೆಗಿನ ವಿಚಾರವಾದರೆ, ಧ್ರುವ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಇತ್ತೀಚೆಗೆ ಎರಡನೇ ಮಗು ಜನಿಸಿದೆ. ಗಂಡು ಮಗುವಿನ ತಂದೆ ತಾಯಿ ಆಗಿದ್ದಾರೆ ಧ್ರುವ ಪ್ರೇರಣ ದಂಪತಿ.

ಕಳೆದ ವರ್ಷ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಮೊದಲ ಮಗು ಜನಿಸಿತು. ತಮ್ಮ ಮಗಳ ಮೇಲೆ ಧ್ರುವ ಅವರಿಗೆ ಬಹಳ ಪ್ರೀತಿ ಇದೆ, ಧ್ರುವ ಅವರು ಮಗಳಿಗೆ ಏನು ಹೆಸರಿಟ್ಟಿದ್ದಾರೆ ಎನ್ನುವ ಕುತೂಹಲ ಜನರಲ್ಲಿದ್ದು, ಆಕ್ಟೊಬರ್ 4ರಂದು ಧ್ರುವ ಅವರ ಮಗಳ ಮೊದಲ ವರ್ಷದ ಹುಟ್ಟುಹಬ್ಬ ಇತ್ತು, ಈ ವಿಶೇಷ ದಿನದಂದು ಧ್ರುವ ಅವರು ತಮ್ಮ ಮುದ್ದಾದ ಮಗಳ ಜೊತೆಗೆ ಸಮಯ ಕಳೆಯುತ್ತಿರುವ ಸುಂದರವಾದ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಧ್ರುವ ಅವರು ಮಗಳೇ ಎಂದು ಕರೆದಾಗ, ಅವರ ಮಗಳು ಮುದ್ದಾಗಿ ತಿರುಗಿ ನೋಡುವುದನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗಿದೆ. ಇನ್ನು ಧ್ರುವ ಅವರು ಮಗಳಿಗೆ ಏನು ಹೆಸರಿಟ್ಟಿರಬಹುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಶುರುವಾಗಿದೆ, ಆದರೆ ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಧ್ರುವ ಸರ್ಜಾ ಅವರು ಇನ್ನು ತಮ್ಮ ಮಗಳಿಗೆ ಹೆಸರನ್ನು ಇಟ್ಟಿಲ್ಲ..

ಶೀಘ್ರದಲ್ಲೇ ಮಗಳಿಗೆ ಹೆಸರಿಡಬಹುದು ಎಂದು ಹೇಳಲಾಗುತ್ತಿದ್ದು, ಒಟ್ಟಿನಲ್ಲಿ ಧ್ರುವ ಅವರು ನಿನ್ನೆಯಷ್ಟೇ ಮಗಳ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇನ್ನು ಮಗ ಹುಟ್ಟಿದ ಸಂಭ್ರಮ ಕೂಡ ಧ್ರುವ ಅವರ ಮನೆಯಲ್ಲಿದೆ.

Leave a Comment