Dhruva Sarja: ಧ್ರುವ ಸರ್ಜಾ ಮಾಡಿದ ಅದೊಂದು ಕೆಲಸಕ್ಕೆ ಕರ್ನಾಟಕದ ಜನತೆ ಫಿದಾ, ರಿಯಲ್ ಲೈಫ್ ಹೀರೋ ಧ್ರುವ

Written by Pooja Siddaraj

Published on:

Dhruva Sarja: ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದು ಹೆಸರುವಾಸಿ ಆಗಿರುವವರು ನಟ ಧ್ರುವ ಸರ್ಜಾ. ತೆರೆಮೇಲೆ ಇವರ ಡ್ಯಾನ್ಸ್, ಫೈಟ್ಸ್, ಇದೆಲ್ಲವನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಾರೆ. ಮಾಸ್ ಅಂಡ್ ಕ್ಲಾಸ್ ಎರಡು ಥರದ ಅಭಿಮಾನಿಗಳನ್ನು ಸೆಳೆದಿದ್ದಾರೆ ಧ್ರುವ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಧ್ರುವ ಅವರು ನಟಿಸಿದ್ದು ಕೆಲವು ಸಿನಿಮಾಗಳಲ್ಲಿ ಆದರು ಅವರ ಸೆಲೆಕ್ಷನ್ ತುಂಬಾ ಚೆನ್ನಾಗಿದೆ..

ಧ್ರುವ ಅವರು ಈ ಮೊದಲು ಪೊಗರು ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿದೆ. ಇನ್ನು ಧ್ರುವ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್. ಈ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಧ್ರುವ ಅವರ ಮೊದಲ ಸಿನಿಮಾವನ್ನು ಸಹ ಎಪಿ ಅರ್ಜುನ್ ನಿರ್ದೇಶನ ಮಾಡಿದ್ದರು. ಇನ್ನು ಪ್ರೇಮ್ ಅವರ ಕೆಡಿ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ ಧ್ರುವ ಸರ್ಜಾ.

ಧ್ರುವ ಸರ್ಜಾ ಅವರು ತೆರೆಯ ಮೇಲೆ ಮಾತ್ರ ಹೀರೋ ಅಲ್ಲ, ತೆರೆಯ ಹಿಂದೆ ಕೂಡ ಅವರು ಹೀರೋ. ಧ್ರುವ ಅವರು ಕಷ್ಟದಲ್ಲಿರುವ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ಅವರಿಂದ ಸಹಾಯ ಪಡೆಯುವ ಸಾಕಷ್ಟು ಜನರಿದ್ದಾರೆ. ಆದರೆ ತಾವು ಮಾಡುವ ಸಹಾಯದ ಬಗ್ಗೆ ಧ್ರುವ ಸರ್ಜಾ ಅವರು ಎಲ್ಲಿಯೂ ಹೇಳಿಕೊಂಡಿಲ್ಲ, ಅದರಿಂದ ಪ್ರಚಾರ ಕೂಡ ಪಡೆದಿಲ್ಲ.

ಯಾರಿಗೆ ಸಹಾಯ ಮಾಡಿದರು ಕೂಡ, ಅದರ ಬಗ್ಗೆ ಎಲ್ಲಿಯೂ ಹೇಳಬೇಡಿ ಎಂದೇ ಧ್ರುವ ಸರ್ಜಾ ಅವರು ಹೇಳಿರುತ್ತಾರೆ. ಅದೇ ರೀತಿ ಧ್ರುವ ಸರ್ಜಾ ಅವರು ಮಾಡಿರುವ ಒಂದು ಸಹಾಯದ ವಿಚಾರ ಈಗ ವೈರಲ್ ಆಗಿದೆ. ಚಿತ್ರರಂಗದ ವರದಿಗಾರ್ತಿ ರಕ್ಷಾ ಕೂರ್ಗ್ ಅವರ ತಾಯಿಗೆ ಅನಾರೋಗ್ಯ ಉಂಟಾಗಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಸಹಾಯ ಬೇಕು ಎನ್ನುವ ವಿಷಯ ವಾಟ್ಸಾಪ್ ನಲ್ಲಿ ಫಾರ್ವರ್ಡ್ ಆಗಿದೆ.

ಈ ವಿಚಾರ ಧ್ರುವ ಸರ್ಜಾ ಅವರಿಗೆ ಗೊತ್ತಾದ ತಕ್ಷಣವೇ, ರಕ್ಷಾ ಕೂರ್ಗ್ ಅವರ ತಾಯಿಯ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಹಾಗೆಯೇ ತಾವು ಸಹಾಯ ಮಾಡಿದ್ದನ್ನು ಯಾರಿಗೂ ಹೇಳಬಾರದು ಎಂದು ಕೂಡ ಹೇಳಿದ್ದಾರೆ. ಈ ವಿಚಾರ ಗೊತ್ತಾಗಿ ಧ್ರುವ ಅವರ ಅಭಿಮಾನಿಗಳು ಮತ್ತು ಕರ್ನಾಟಕದ ಜನತೆ ಕೂಡ ಫಿದಾ ಆಗಿದ್ದಾರೆ. ಧ್ರುವ ಅವರ ಒಳ್ಳೆಯತನಕ್ಕೆ ಕೈಮುಗಿದು ಹಾರೈಸಿದ್ದಾರೆ.

Leave a Comment