ಅಥಿಯಾ ಧರಿಸಿದ್ದ ಲೆಹಂಗಾ ಸಿದ್ಧವಾಗಲು ಹಿಡಿದ ಸಮಯ ಇಷ್ಟೊಂದಾ? ಡಿಸೈನರ್ ಹೇಳಿದ ಶಾಕಿಂಗ್ ವಿಷಯ

0
33

ಬಾಲಿವುಡ್ ನ ಹಿರಿಯ ನಟ ಸುನೀಲ್ ಶೆಟ್ಟಿ(Sunil Shetty) ಅವರ ಮಗಳು ನಟಿ ಅಥಿಯಾ ಶೆಟ್ಟಿ(Athiya Shetty) ಮತ್ತು ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ (cricketer K.L.Rahul) ಅವರ ಮದುವೆ ಜನವರಿ 23 ರಂದು ಬಹಳ ವೈಭವದಿಂದ ನೆರವೇರಿದೆ. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ಅಗ್ನಿ ಸಾಕ್ಷಿಯಾಗಿ ಸತಿ, ಪತಿಯಾಗಿದ್ದಾರೆ. ಇವರ ಮದುವೆ ನಟ ಸುನೀಲ್ ಶೆಟ್ಟಿ(Sunil Shetty) ಅವರ ಖಂಡಾಲದಲ್ಲಿರುವ(Khandala) ಐಶಾರಾಮೀ ಫಾರ್ಮ್ ಹೌಸ್ ನಲ್ಲಿ(Farm House) ಬಹಳ ಅದ್ದೂರಿಯಾಗಿ ನೆರವೇರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಮದುವೆಯ ಫೋಟೋಗಳು ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆದಿದೆ.

ಮದುವೆ ಫೋಟೋಗಳು(Marriage Photos) ವೈರಲ್ ಆದ ಮೇಲೆ ಅಥಿಯಾ ಮದುವೆಗೆ ಧರಿಸಿದ್ದ ಲೆಹಂಗಾ(Lehenga) ಅನೇಕರ ಗಮನವನ್ನು ತನ್ನ ಕಡೆ ಸೆಳೆದಿದೆ. ಅಷ್ಟೇ ಅಲ್ಲ ಈಗ ಈ ಲೆಹಂಗಾದ ಕುರಿತಾದ ಆಸಕ್ತಿಕರ ವಿಚಾರವೊಂದು ಸುದ್ದಿಯಾಗಿದ್ದು, ಅಚ್ಚರಿ ಯನ್ನು ಮೂಡಿಸಿದೆ. ಹೌದು, ಅಥಿಯಾಗೆ ಮದುವೆಗಾಗಿ ಲೆಹಂಗಾ ಸಿದ್ಧಪಡಿಸಿದ ಡಿಸೈನರ್ ಅನಾಮಿಕ ಖನ್ನಾ(Anamika Khanna) ಒಂದು ಅಚ್ಚರಿಯ ವಿಚಾರವನ್ನು ಹಂಚಿಕೊಂಡಿದ್ದು, ಅವರಿಗೆ ಲೆಹಂಗಾ ಸಿದ್ಧಪಡಿಸಲು ಹಿಡಿದ ಸಮಯ ಬರೋಬ್ಬರಿ ಹತ್ತು ಸಾವಿರ ಗಂಟೆಗಳು ಎನ್ನುವ ಮಾತನ್ನು ಹೇಳಿದ್ದಾರೆ. ಈ ಲೆಹಂಗಾ ರೇಷ್ಮೆಯಿಂದ ಸಿದ್ಧಪಡಿಸಲಾಗಿತ್ತು.

ರೇಷ್ಮೆಯಿಂದ ಸಿದ್ಧ ಮಾಡಲಾದ ಲೆಹಂಗಾ ಗುಲಾಬಿ ಬಣ್ಣದಲ್ಲಿದ್ದು, ಈ ಉಡುಪನ್ನು ಸೂಕ್ಷ್ಮವಾದ ಜರ್ದೋಜಿ ಮತ್ತು ಜಾಲಿ ಕೆಲಸದಿಂದ ಇನ್ನಷ್ಟು ಮೆರುಗನ್ನು ನೀಡಲಾಗಿತ್ತು. ಲೆಹೆಂಗಾ ಆಕರ್ಷಕವಾದ ಮುಸುಕು ಮತ್ತು ರೇಷ್ಮೆ ಆರ್ಗನ್ಜಾ ತುಂಬಿದ ದುಪಟ್ಟಾವನ್ನು ಹೊಂದಿದೆ. ಇದು ಸಂಪೂರ್ಣ ವಧುವಿನ ಲುಕ್ ಗೆ ಹೆಚ್ಚುವರಿ ಆಕರ್ಷಣೆಯನ್ನು ನೀಡಿದ್ದು, ನಿಕಟವಾಗಿ ಹೆಣೆದ ಕರಕುಶಲ ಕೆಲಸವನ್ನು ಇದು ಒಳಗೊಂಡಿದೆ. ಈ ಲೆಹಂಗಾ ಕ್ಕೆ ಸ್ವತಃ ಆಥಿಯಾ ಸ್ಪೂರ್ತಿ ಎಂದಿದ್ದಾರೆ ಅನಾಮಿಕ ಖನ್ನಾ.

ಅಥಿಯಾ(Athiya Shetty) ತಮ್ಮ ಜೀವನದ ಈ ವಿಶೇಷ ದಿನದಂದು ವಿಶೇಷವಾದ ಲುಕ್ ನೊಂದಿಗೆ ಮಿಂಚಲು ಬಯಸಿದ್ದರು, ಅದಕ್ಕಾಗಿಯೇ ಬಹಳ ಶ್ರಮ ವಹಿಸಿ ಲೆಹಂಗಾ ಸಿದ್ಧಪಡಿಸಲಾಗಿತ್ತು. ಆಥಿಯಾ ಶೆಟ್ಟಿ  ಈ ಉಡುಗೆಯನ್ನು ಧರಿಸಿ ಬಹಳ ಸುಂದರವಾಗಿ ಕಂಡಿದ್ದಾರೆ ಎಂದಿರುವ ಅನಾಮಿಕಾ ಖನ್ನಾ ಅವರು ನಟಿ ಅಥಿಯಾ ಅವರ ಫ್ಯಾಷನ್‌ನಲ್ಲಿ ಹೊಂದಿರುವಂತಹ ಉತ್ತಮ ಅಭಿರುಚಿಯನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here