ದಿನ ಭವಿಷ್ಯ ಶುಕ್ರವಾರ 04 ನವೆಂಬರ್ 2022!

0
49

ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.

ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.

ಮೇಷ

ದುಡ್ಡಿದ್ದಾಗ ಒಂದು ರೀತಿಯ ನಡವಳಿಕೆ, ಇಲ್ಲದಿದ್ದಾಗ ಇನ್ನೊಂದು ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಇನ್ನು ಪ್ರಮುಖ ತೀರ್ಮಾನ ಕೈಗೊಳ್ಳುವಾಗ ಆತುರ ಮಾಡಬೇಡಿ. ಈ ದಿನ ನೀವು ಆತುರದಿಂದ ಮಾಡುವ ತೀರ್ಮಾನದಿಂದ ನಷ್ಟವಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಮೆಚ್ಚುಗೆ ಮಾತುಗಳನ್ನು ಕೇಳುವ ಯೋಗವಿದೆ.

ವೃಷಭ

ಗೃಹಿಣಿಯರಿಗೆ ಇಂದು ಬಹಳ ಹೆಚ್ಚಿನ ಕೆಲಸ ಆಗುತ್ತದೆ. ಸಾಮಾಜಿಕ ಕಾರ್ಯಕರ್ತರು ಅಥವಾ ಕಾರ್ಯಕರ್ತೆಯರು ಗೌರವ-ಸನ್ಮಾನ ಪಡೆಯುತ್ತೀರಿ. ನೀವಾಗಿಯೇ ಮನಸಿನಲ್ಲಿ ಸೃಷ್ಟಿ ಮಾಡಿಕೊಂಡಿದ್ದ ಭ್ರಮೆ ದೂರವಾಗುತ್ತದೆ. ಉದ್ಯೋಗ ನಿಮಿತ್ತವಾಗಿ ಪ್ರಯಾಣ ಮಾಡಲಿದ್ದೀರಿ. ಅದರಿಂದ ಅನುಕೂಲ ಆಗಲಿದೆ.

ಮಿಥುನ

ಸಾಮಾಜಿಕವಾಗಿ ಚಟುವಟಿಕೆಯಿಂದ ಇರುವವರಿಗೆ ಸಲ್ಲದ ಅಪವಾದ ಬರುತ್ತದೆ. ಇನ್ನು ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ನಂಬಿಕೆ ಇಟ್ಟು, ಹೆಚ್ಚಿನ ಹಾಗೂ ಮಹತ್ವದ ಜವಾಬ್ದಾರಿ ನೀಡಲಿದ್ದಾರೆ. ಬಂಧುಗಳ-ಸ್ನೇಹಿತರ ಜತೆಗಿನ ಒಡನಾಟದಿಂದ ಸಂತೋಷ ಉಂಟಾಗುತ್ತದೆ. ಮಹತ್ತರವಾದದ್ದನ್ನು ಸಾಧಿಸಿದ ಹೆಮ್ಮೆ ಮೂಡುತ್ತದೆ.‌

ಕರ್ಕಾಟಕ

ನೀವು ಇಷ್ಟಪಟ್ಟವರ ಜತೆಗೆ ಮದುವೆ ಪ್ರಸ್ತಾವ ಮಾಡಲು ಇಂದು ಸೂಕ್ತ ದಿನ. ಮನೆಯಲ್ಲಿ ಶುಭ ಕಾರ್ಯ ತಯಾರಿ ನಡೆಯುತ್ತದೆ. ಉದ್ಯೋಗ ನಿಮಿತ್ತ ಮಾಡುವ ಪ್ರಯಾಣದಿಂದ ಆಯಾಸ ಅನುಭವಿಸುತ್ತೀರಿ. ನಿಮ್ಮ ಶ್ರಮವನ್ನು ಗುರುತಿಸಿ, ಅದಕ್ಕೆ ಸೂಕ್ತ ಮನ್ನಣೆಯನ್ನು ನೀಡಲಾಗುತ್ತದೆ. ಯಾರ ಜತೆಗೂ ನಿಮ್ಮ ರಹಸ್ಯ ಹಂಚಿಕೊಳ್ಳಬೇಡಿ.

ಸಿಂಹ

ದೊಡ್ಡ ಯೋಜನೆಯೊಂದರ ಸಾಕಾರಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ವಿವಿಧೆಡೆಯಿಂದ ಅನುಕೂಲ ಒದಗಿಬರುತ್ತದೆ. ಮನೆ ದೇವರ ದರ್ಶನ ಭಾಗ್ಯ ಇದೆ. ಸರಕಾರಿ ಸೇವೆಯಲ್ಲಿ ಇರುವವರಿಗೆ ಬಹುಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ವರ್ಗಾವಣೆ ಅಥವಾ ಬಡ್ತಿ ದೊರೆಯುವ ಅವಕಾಶ ಇದೆ. ಮಕ್ಕಳ ಏಳ್ಗೆ ಹೆಮ್ಮೆ ತರಲಿದೆ.

ಕನ್ಯಾ

ನಿಮಗೆ ತಿಳಿದ ವಿಚಾರವೇ ಆಗಿದ್ದರೂ ಉನ್ನತ ಹುದ್ದೆಯಲ್ಲಿ ಇರುವವರು ಜತೆ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಿ. ನಿಮ್ಮ ಮೇಲೆ ಸುಖಾಸುಮ್ಮನೆ ಅನುಮಾನ ಪಡುವಂತಾಗುತ್ತದೆ.ಅನಿರೀಕ್ಷಿತವಾಗಿ ನಿಮಗೆ ಬರಬೇಕಿದ್ದ ಬಾಕಿ ಹಣವೊಂದು ಹಿಂತಿರುಗುವ ಸಾಧ್ಯತೆ ಇದೆ. ಆದರೆ ಹಠಮಾರಿ ಧೋರಣೆ ತೋರಿಸಬೇಡಿ.

ತುಲಾ

ನಿಮ್ಮ ಏಳ್ಗೆ ಕಂಡು ಶತ್ರುಗಳು ಕೂಡ ಕರುಬುವಂತಾಗುತ್ತದೆ. ಕೌಟುಂಬಿಕವಾಗಿ ಸಂತೋಷವಾದ ವಾತಾವರಣ ಇರುತ್ತದೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಎಂಬಂತೆ ಸಾಮಾಜಿಕವಾಗಿಯೂ ಮೆಚ್ಚುಗೆ ಪಡೆಯಲಿದ್ದೀರಿ.ಈ ದಿನ ಸಾಲ ನೀಡುವುದು, ಪಡೆಯುವುದು ಅಥವಾ ಮತ್ತೊಬ್ಬರಿಗೆ ಜಾಮೀನು ನೀಡುವುದು ಮಾಡಬೇಡಿ.

ವೃಶ್ಚಿಕ

ಬಾಳಸಂಗಾತಿ ಸಲುವಾಗಿಯೇ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಮನಸ್ತಾಪ- ಭಿನ್ನಾಭಿಪ್ರಾಯಗಳು ಕಳೆದು, ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಹೂಡಿಕೆ ಸಲುವಾಗಿ ಚಿನ್ನ-ಬೆಳ್ಳಿ ಅಥವಾ ವಜ್ರದಂಥದ್ದನ್ನು ಖರೀದಿ ಮಾಡುವ ಸಾಧ್ಯತೆ ಇದೆ. ದೊಡ್ಡ ವ್ಯವಹಾರಗಳನ್ನು ಮಾಡುವ ಮುನ್ನ ಕಾನೂನು ಅಂಶಗಳನ್ನು ಸರಿಯಾಗಿ ಪರಿಶೀಲನೆ ಮಾಡಿ.

ಧನುಸ್ಸು

ಮಕ್ಕಳ ಸಲುವಾಗಿ ಕೆಲವು ಉಳಿತಾಯ ಯೋಜನೆಗಳಲ್ಲಿ ಹಣಾ ತೊಡಗಿಸಲು ಚಿಂತನೆ ಮಾಡಲಿದ್ದೀರಿ. ರುಚಿಕಟ್ಟಾದ ಅಡುಗೆ ಸವಿಯುವ ಯೋಗವಿದೆ. ಸಹೋದರ-ಸಹೋದರಿಯರಿಗೆ ನಿಮ್ಮಿಂದ ನೆರವು ದೊರೆಯಲಿದೆ. ಸರಕಾರಿ ನೌಕರಿಯಲ್ಲಿ ಇರುವವರಿಗೆ ಸಕಾರಾತ್ಮಕ ಬದಲಾವಣೆ ಕಾಣಲಿದೆ.

ಮಕರ

ನಿಮ್ಮ ರಹಸ್ಯವನ್ನು ಯಾರಲ್ಲೂ ಬಿಟ್ಟುಕೊಡಬೇಡಿ. ನೈತಿಕವಾಗಿ ತಪ್ಪು ಎನಿಸಿದಂಥ ಕೆಲಸಗಳನ್ನು ಮಾಡಲೇಬೇಡಿ. ಇಂದು ಶತ್ರುಗಳ ಪ್ರಾಬಲ್ಯ ಹೆಚ್ಚಾಗುವ ಸಾಧ್ಯತೆಗಳಿವೆ.ಸಾಮಾನ್ಯ ಕೆಲಸ ಮಾಡುವುದಕ್ಕೂ ಬಹಳ ಶ್ರಮ ಪಡಬೇಕಾಗುತ್ತದೆ. ದಿನಸಿ ವ್ಯಾಪಾರ ಮಾಡುವವರಿಗೆ ಅಲ್ಪ ಪ್ರಮಾಣದ ಯಶಸ್ಸಿದೆ.

ಕುಂಭ

ಇಷ್ಟು ಸಮಯ ಸಂಬಂಧವೊಂದರ ಬಗ್ಗೆ ನಿಮಗಿದ್ದ ಗೊಂದಲ ನಿವಾರಣೆ ಆಗಲಿದೆ. ಸ್ನೇಹಿತರು-ಬಂಧುಗಳು ಅಚಾನಕ್ ಆಗಿ ಮನೆಗೆ ಬರುವ ಸಾಧ್ಯತೆ ಇದೆ. ನಿಮ್ಮ ಸಂತೋಷದಿಂದ ಉದ್ಯೋಗ ಸ್ಥಳದಲ್ಲಿ ಮುಖ್ಯ ವಿಚಾರಗಳು ಮರೆಯದಂತೆ ನೋಡಿಕೊಳ್ಳಿ. ಸಂಜೆ ಹೊತ್ತಿಗೆ ಔತಣ ಕೂಟಕ್ಕೆ ಆಹ್ವಾನ ಬರುವ ಸಾಧ್ಯತೆ ಇದೆ.

ಮೀನ

ಈ ದಿನ ಯಾರಿಗಾದರೂ ನಿಮ ನೆರವು ಅಗತ್ಯವಿದ್ದು, ಅವರಾಗಿಯೇ ಕೇಳಿದರೆ, ಅ ಸಹಾಯ ಮಾಡಲು ನಿಮ್ಮಿಂದ ಸಾಧ್ಯವಾದರೆ ಆತ್ಮಪೂರ್ವಕವಾಗಿ ನೆರವಾಗಿ. ಅದರಲ್ಲೂ ತಂದೆಯ ಕಡೆ ಸಂಬಂಧಿಕರು ನೆರವು ಕೇಳಿ ಬರುವ ಸಾಧ್ಯತೆ ಇದೆ.ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿಗಿನ ಉದ್ವಿಗ್ನತೆ ಕಂಡುಬರುತ್ತದೆ. ಆದರೆ ನಿಮ್ಮದೇ ಜಾಣ್ಮೆಯಿಂದ ಅದು ನಿವಾರಣೆ ಆಗುತ್ತದೆ.

LEAVE A REPLY

Please enter your comment!
Please enter your name here