ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಶೋ ಬಿಗ್ ಬಸ್ ಶೋ ಇಂದ ಜನಪ್ರಿಯತೆ ಪಡೆದುಕೊಂಡವರು ದಿವ್ಯ ಉರುಡುಗ. ಬಿಗ್ ಬಾಸ್ ಹಿಸ್ಟರಿಯಲ್ಲಿ ಎರಡನೇ ಸಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಿಶೇಷ ಸ್ಪರ್ಧಿಗಳಲ್ಲಿ ದಿವ್ಯ ಕೂಡ ಒಬ್ಬರು. ರಿಯಾಲಿಟಿ ಶೋ ಮತ್ತು ನಟನೆಯಲ್ಲಿ ಬ್ಯುಸಿ ಇದ್ದ ದಿಗ್ಯ ಉರುಡುಗ ಇದೀಗ ದಿಢೀರ್ ಎಂದು ಬ್ಯುಸಿನೆಸ್ ವುಮನ್ ಆಗಿದ್ದಾರೆ. ಹಾಗಿದ್ರೆ ದಿವ್ಯ ಉರುಡುಗ ಅವರು ಶುರು ಮಾಡಿರುವ ಬ್ಯುಸಿನೆಸ್ ಯಾವುದು ಗೊತ್ತಾ?
ದಿವ್ಯ ಉರುಡುಗ ಅವರು ಮೊದಲಿಗೆ ನಟನೆ ಶುರು ಮಾಡಿದ್ದು ಧಾರವಾಹಿ ಮೂಲಕ, ಚಿಟ್ಟೆ ಹೆಜ್ಜೆ ಧಾರವಾಹಿಯಲ್ಲಿ ಮೊದಲ ಸಾರಿ ನಟಿಸಿದ ದಿವ್ಯ ಉರುಡುಗ ಅವರು ನಂತರ ಅಂಬಾರಿ, ಓಂ ಶಕ್ತಿ ಓಂ ಶಾಂತಿ ಸೇರಿದಂತೆ ಇನ್ನು ಕೆಲವು ಧಾರವಾಹಿಗಳಲ್ಲಿ ನಟಿಸಿದರು. ಆದರೆ ದಿವ್ಯ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ ಎಂದರೆ ತಪ್ಪಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ದಿವ್ಯ ಉರುಡುಗ ಎಂಟ್ರಿ ಕೊಟ್ಟರು.
8ನೇ ಸೀಸನ್ ನಲ್ಲಿ ದಿವ್ಯ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವ್ಯ ಅವರು ಫಿನಾಲೆವರೆಗು ತಲುಪಿದ್ದರು. ಬಿಗ್ ಮನೆಯಲ್ಲಿ ದಿವ್ಯ ಮತ್ತು ಅರವಿಂದ್ ಅವರ ಲವ್ ಸ್ಟೋರಿ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು ಎಂದರೆ ತಪ್ಪಲ್ಲ. ಇವರಿಬ್ಬರಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಇದ್ದ ಪ್ರೀತಿ, ಕಾಳಜಿ ಇದೆಲ್ಲವೂ ಜನರಿಗೆ ಇಷ್ಟವಾಗಿತ್ತು. ಬಿಗ್ ಬಾಸ್ ಮನೆಯಿಂದ ಬಂದ ನಂತರ ಕೂಡ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಸ್ನೇಹ ಪ್ರೀತಿ ಇನ್ನು ಹಾಗೆ ಇದೆ.
ಇವರಿಬ್ಬರ ಪ್ರೀತಿ ಅನೇಕ ಜನರಿಗೆ ಮಾದರಿಯಾಗಿದೆ. ರಿಯಾಲಿಟಿ ಶೋ ಇಂದ ಶುರುವಾದ ಈ ಜೋಡಿ ಈಗ ಸಿನಿಮಾದಲ್ಲಿ ಕೂಡ ಜೊತೆಯಾಗಿ ನಟಿಸಿದ್ದಾರೆ, ಸಿನಿಮಾ ಪ್ರಚಾರದಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ಈಗ ದಿವ್ಯ ಉರುಡುಗ ಅವರು ಹೊಸದಾಗಿ ಒಂದು ಬ್ಯುಸಿನೆಸ್ ಅನ್ನು ಕೂಡ ಶುರು ಮಾಡಿದ್ದಾರೆ. ಈ ಹೊಸ ಬ್ಯುಸಿನೆಸ್, ನೇಲ್ ಆರ್ಟ್ ಅಂಡ್ ಲ್ಯಾಶ್ ಸ್ಟುಡಿಯೋ ಆಗಿದೆ. ಈ ಬ್ಯುಸಿನೆಸ್ ಅನ್ನು ಇತ್ತೀಚೆಗೆ ದಿವ್ಯ ಅವರು ಶುರು ಮಾಡಿದ್ದಾರೆ..
ದಿವ್ಯ ಅವರಿಗೆ ನೇಲ್ ಆರ್ಟ್ ಉತ್ತಮವಾಗಿ ಬರುತ್ತದೆ. ಅದರಲ್ಲಿ ಪರಿಣಿತಿ ಮತ್ತು ಆಸಕ್ತಿ ಎರಡು ಇರುವ ಕಾರಣದಿಂದ ಈ ಹೊಸ ಸ್ಟುಡಿಯೋ ಶುರು ಮಾಡಿದ್ದಾರೆ. ನೇಲ್ ಆರ್ಟ್ ನಲ್ಲಿ ಎಕ್ಸ್ಪರ್ಟ್ ಗಳನ್ನು ಕೆಲಸಕ್ಕೆ ಸೇರಿಸಿಕೊಂಡು, ಹೊಸ ಸ್ಟುಡಿಯೋ ಶುರು ಮಾಡಿದ್ದಾರೆ ದಿವ್ಯ. ದಿವ್ಯ ಅವರ ಈ ಹೊಸ ಪ್ರಯತ್ನಕ್ಕೆ ಅಭಿಮಾನಿಗಳಿಂದ ಮತ್ತು ನೆಟ್ಟಿಗರಿಂದ ಶುಭಾಶಯ ವ್ಯಕ್ತವಾಗುತ್ತಿದೆ.
ದಿವ್ಯ ಅವರ ಈ ಹೊಸ ಪ್ರಯತ್ನದ ಸ್ಟುಡಿಯೋ ಲಾಂಚ್ ಗೆ ಸೆಲೆಬ್ರಿಟಿಗಳು ಕೂಡ ಬಂದಿದ್ದರು. ಎಲ್ಲರೂ ಕೂಡ ದಿವ್ಯ ಉರುಡುಗ ಅವರ ಹೊಸ ಬ್ಯುಸಿನೆಸ್ ಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡುತ್ತಿದ್ದಾರೆ. ಇನ್ನು ದಿವ್ಯ ಉರುಡುಗ ಅವರ ಸಿನಿಮಾಗು ಕೂಡ ಅಷ್ಟೇ ಪ್ರೀತಿ ಸಿಗುತ್ತಿದೆ. ಈ ಬ್ಯುಸಿನೆಸ್ ದಿವ್ಯ ಅವರಿಗೆ ದೊಡ್ಡ ಸಕ್ಸಸ್ ಸಿಗಲಿ ಎಂದು ಹಾರೈಸೋಣ.