ಬೆಳಗ್ಗೆ ಎದ್ದ ತಕ್ಷಣ ನೀವು ಈ ತಪ್ಪು ಮಾಡುತ್ತಿದ್ದೀರಾ…?

0
37

Don’t do this early morning :ಬೆಳಗ್ಗೆ ಎದ್ದ ತಕ್ಷಣ ಬ್ರೆಡ್ ತಿಂದರೆ ಅರೋಗ್ಯಕ್ಕೆ ಒಳ್ಳೆಯದಲ್ಲ.ಬೆಳಗಿನ ಉಪಾಹಾರಕ್ಕೆ ಬ್ರೆಡ್ ಸೇವನೆ ಮಾಡುವುದು ಸುಲಭ ಎಂದುಕೊಂಡಿದ್ದೀರಾ, ಕಾಲೇಜು-ಕಚೇರಿಗೆ ತಡವಾಯಿತು ಎಂಬ ಕಾರಣಕ್ಕೆ ಬ್ರೆಡ್ ಅನ್ನೇ ಬ್ರೇಕ್ ಫಾಸ್ಟ್ ಮಾಡಿಕೊಂಡಿದ್ದೀರಾ? ಇವು ದೇಹಕ್ಕೆ ಸರಿಯಾದ ಕಾರ್ಬೋಹೈಡ್ರೇಟ್ ಗಳನ್ನು ನೀಡುವುದಿಲ್ಲ. ಪರಿಣಾಮ ದೇಹ ತೂಕ ವಿಪರೀತ ಹೆಚ್ಚುತ್ತದೆ. ಅದರ ಬದಲು ಬೆಳಗಿನ ಉಪಾಹಾರಕ್ಕೆ ಓಟ್ ಮೀಲ್ಸ್ ಅಥವಾ ಹಣ್ಣುಗಳನ್ನು ತಿನ್ನಿ.

ಯೂರಿಕ್ ಆಸಿಡ್ ಹೆಚ್ಚಾದರೆ ಏನಾಗುತ್ತದೆ ಗೊತ್ತಾ?ಈ ಗಿಡಮೂಲಿಕೆಗಳನ್ನು ಸೇವಿಸಲು ಪ್ರಾರಂಭಿಸಿ, ಶೀಘ್ರದಲ್ಲೇ ನಿಮಗೆ ಪರಿಹಾರ ಸಿಗುತ್ತದೆ

ಬೆಳಗ್ಗೆದ್ದು ಧ್ಯಾನ ಮಾಡಿ. ಇದು ಒತ್ತಡವನ್ನು ಕಡಿಮೆ ಮಾಡಿ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಬೆಳಗ್ಗೆದ್ದು ಮೊದಲಿಗೆ ಕಾಫಿ, ಚಹಾ ಸೇವಿಸುವ ಬದಲು ಬಿಸಿ ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಎಚ್ಚರವಾದ ತಕ್ಷಣ ಮೊಬೈಲ್ ಬಳಸದಿರಿ. ಇದರಿಂದ ಒತ್ತಡ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಬ್ರೇಕ್ ಫಾಸ್ಟ್ ಮಾಡುವಾಗಲೂ ಮೊಬೈಲ್ ಬಳಸುವ ಅಭ್ಯಾಸ ಒಳ್ಳೆಯದಲ್ಲ.

Don’t do this early morning :ತಡವಾಗಿ ಉಪಾಹಾರ ಸೇವನೆ ಮಾಡುವುದರಿಂದ ತೂಕ ಕಳೆದುಕೊಳ್ಳುವುದು ನಿಧಾನವಾಗುತ್ತದೆ. ಉಪಾಹಾರ ಬಿಟ್ಟು ಮಧ್ಯಾಹ್ನದ ಊಟ ಮಾತ್ರ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚುತ್ತದೆ. ಉಪಾಹಾರ ಸರಿಯಾದ ಸಮಯಕ್ಕೆ ಮಾಡಿದರೆ ಮಾತ್ರ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.

LEAVE A REPLY

Please enter your comment!
Please enter your name here