Leelavathi: ನಟಿ ಲೀಲಾವತಿ ಅವರ ಬೆಡ್ ರೂಮ್ ನಲ್ಲಿ ಅಣ್ಣಾವ್ರ ಫೋಟೋ, ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದ ಬ್ರಹ್ಮಾಂಡ ಗುರೂಜಿ!

0 15

Leelavathi: ನಟಿ ಲೀಲಾವತಿ ಅವರು ಡಿಸೆಂಬರ್ 8ರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇಂಥ ಮಹಾನ್ ಚೇತನವನ್ನ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಲ್ಲ. ಇವರೆಲ್ಲರೂ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಗಳು. ಈ ಹಿರಿಯ ಜೀವಗಳು ಅಗಲುತ್ತಿರುವಾಗ ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗುತ್ತಿದೆ. ಡಿಸೆಂಬರ್ 9ರ ಸಂಜೆ ಲೀಲಾವತಿ ಅವರು ವಾಸವಿದ್ದ ಸೋಲದೇವನಹಳ್ಳಿಯ ತೋಟದಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ.

ಲೀಲಾವತಿ ಅವರು ಇನ್ನಿಲ್ಲ ಎನ್ನುವ ಸುದ್ದಿ ಹೊರಬರುತ್ತಿದ್ದ ಹಾಗೆಯೇ ಲೀಲಾವತಿ ಅವರನ್ನು ನೋಡಲು ಚಿತ್ರರಂಗದ ಕಲಾವಿದರು ಮತ್ತು ಗಣ್ಯರು, ಅಭಿಮಾನಿಗಳು ಎಲ್ಲರೂ ಬರುವುದಕ್ಕೆ ಶುರು ಮಾಡಿದ್ದರು. ಸಾರ್ವಜನಿಕ ದರ್ಶನಕ್ಕಾಗಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಕರೆತರಲಾಗಿತ್ತು. ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಕೂಡ ಬಂದು ಅವರ ಅಂತಿಮ ದರ್ಶನ ಪಡೆದರು.

ಲೀಲಾವತಿ ಅವರ ಮಗ ವಿನೋದ್ ರಾಜ್ ಅವರ ಪತ್ನಿ ಮತ್ತು ಮಗ ಕೂಡ ಚೆನ್ನೈ ಇಂದ ಬಂದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. 600ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾ ಅವರ ಸಾಧನೆ ನಿಜಕ್ಕೂ ಅಗಾಧವಾದದ್ದು. ಹಿರಿಯನಟಿ ಲೀಲಾವತಿ ಅವರ ಬಗ್ಗೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಅವರು ಮಾತನಾಡಿದ್ದಾರೆ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿ, ಲೀಲಾವತಿ ಅವರಿಗೆ ಮಗನ ಮೇಲೆ ತುಂಬಾ ಪ್ರೀತಿ ಇತ್ತು, ಮಗ ತಮ್ಮ ಜೊತೆಯಲ್ಲೇ ಇರಬೇಕು ಎಂದು ಬಯಸಿದ್ದರು.

ಮಗನನ್ನು ತಮ್ಮ ಜೊತೆಯಲ್ಲೇ ಇರಿಸಿಕೊಂಡಿದ್ದರು, ಅದರಿಂದ ಇವತ್ತು ವಿನೋದ್ ಗೆ ಧೈರ್ಯ ಕಮ್ಮಿ, ಹೆಂಡ್ತಿ ಮಗ ಚೆನ್ನೈನಲ್ಲಿ ಇದ್ರು ಇಲ್ಲಿ ಎಲ್ಲಾನು ಬಿಟ್ಟು ಅವರ ಜೊತೆಗೆ ಹೋಗಿ ಇರೋಕೆ ಆಗಲ್ಲ ಎಂದಿದ್ದಾರೆ ಗುರೂಜಿ. ಹಾಗೆಯೇ ಒಂದು ಸಾರಿ ಲೀಲಾವತಿ ಅವರ ಹೊಸ ಮನೆಗೆ ಹೋದಾಗ ಮನೆಯಲ್ಲಿ ಇರುವ ಅವರ ಪ್ರಶಸ್ತಿಗಳನ್ನು ತೋರಿಸಿದ್ದರು, ಇಡೀ ಮನೆಯನ್ನು ತೋರಿಸಿದ್ದರು. ಅವರ ಬೆಡ್ ರೂಮ್ ನಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಊಟ ಮಾಡಿಸುತ್ತಿರುವ ಫೋಟೋ ಇದೆ..

ಆ ಫೋಟೋ ನೋಡಿದ್ರೆ ಅವರಿಗೆ ರಾಜ್ ಕುಮಾರ್ ಅವರ ಮೇಲೆ ಎಷ್ಟು ಪ್ರೀತಿ ಇತ್ತು ಅನ್ನೋದು ಗೊತ್ತಾಗುತ್ತೆ.. ಎಂದು ಲೀಲಾವತಿ ಅವರ ಬೆಡ್ ರೂಮ್ ನಲ್ಲಿರುವ ರಾಜ್ ಕುಮಾರ್ ಅವರ ಫೋಟೋ ಬಗ್ಗೆ ಮಾತನಾಡಿದ್ದಾರೆ ನರೇಂದ್ರ ಶರ್ಮ ಗುರೂಜಿ.

Leave A Reply

Your email address will not be published.