Dr Rajkumar: ಅಣ್ಣಾವ್ರು ನಟಿಸಿದ್ದ ಆ ಒಂದು ಪರಭಾಷೆಯ ಸಿನಿಮಾ ಯಾವುದು ಗೊತ್ತಾ?

0 17

Dr Rajkumar: ಡಾ. ರಾಜ್ ಕುಮಾರ್ ಅಂದ್ರೆ ಕನ್ನಡ, ಕನ್ನಡ ಅಂದ್ರೆ ಡಾ. ರಾಜ್ ಕುಮಾರ್ ಎನ್ನುವಷ್ಟರ ಮಟ್ಟಿಗೆ ಅಣ್ಣಾವ್ರ ಹೆಸರು ಕನ್ನಡದ ಜೊತೆಗೆ, ಕರ್ನಾಟಕದ ಜೊತೆಗೆ ಬೆರೆತು ಹೋಗಿದೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ನೂರಾರು ಹೆಸರಿನಲ್ಲಿ ಕರೆಯುತ್ತಾರೆ. ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರು ಎಂದರೆ ತಪ್ಪಲ್ಲ. ಇಂಥ ಅಣ್ಣಾವ್ರು ಅದೊಂದೆ ಒಂದು ಪರಭಾಷೆಯ ಸಿನಿಮಾದಲ್ಲಿ ನಟಿಸಿದ್ರು ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಆ ಒಂದು ಸಿನಿಮಾ ನಂತರ ತಾವು ಇನ್ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಪ್ರತಿಜ್ಞೆ ಮಾಡಿಬಿಟ್ಟರು..

ಹೌದು, ನಮಗೆಲ್ಲ ಗೊತ್ತಿರುವ ಹಾಗೆ ಅಣ್ಣಾವ್ರು ನಟಿಸಿದ ಮೊದಲ ಸಿನಿಮಾ ಬೇಡರ ಕಣ್ಣಪ್ಪ. ಈ ಸಿನಿಮಾದಲ್ಲಿ 1954 ರಲ್ಲಿ ತೆರೆಕಂಡಿತು, ಮೊದಲ ಸಿನಿಮಾದಲ್ಲಿ ಅಣ್ಣಾವ್ರಿಗೆ ನಾಯಕಿ ಆಗಿದ್ದವರು ನಟಿ ಪಂಡರೀಬಾಯಿ. ಈ ಸಿನಿಮಾ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ನಂತರ, ತಮಿಳಿನಲ್ಲಿ ವೇಡನ್ ಕಣ್ಣಪ್ಪ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಬಳಿಕ ತೆಲುಗಿಗೆ ಕಾಳಹಸ್ತಿ ಮಹಾತ್ಯಂ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. ತೆಲುಗು ರಿಮೇಕ್ ನಲ್ಲಿ ಅಣ್ಣಾವ್ರು ನಟಿಸಿದ್ದರು.

ತೆಲುಗು ರಿಮೇಕ್ ನಲ್ಲಿ ಪಾಂಡರೀಬಾಯಿ ಅವರೇ ನಾಯಕಿಯಾಗಿದ್ದು, ಜೀವಿ ಅಯ್ಯರ್ ಅವರು, ನರಸಿಂಹ ರಾಜು ಅವರು ಹಾಗೂ ಇನ್ನಿತರರು ತೆಲುಗು ರಿಮೇಕ್ ನಲ್ಲಿ ನಟಿಸಿದ್ದರು. ಹೆಚ್.ಎಲ್.ಎನ್ ಸಿಂಹ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದರು. ತೆಲುಗಿನಲ್ಲಿ ಕೂಡ ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಬಂದು, ಸಕ್ಸಸ್ ಆಗಿತ್ತು. ಆದರೆ ಅಣ್ಣಾವ್ರು ತೆಲುಗಿನಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ ಬಳಿಕ ಪರಭಾಷೆಯ ಇನ್ಯಾವುದೇ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಇದಕ್ಕೆ ಕಾರಣ ಏನು ಎಂದು ಗೊತ್ತಿಲ್ಲ, ಆದರೆ ಬೇರೆ ಭಾಷೆಯಲ್ಲಿ ನಟಿಸೋದು ಬೇಡ ಎಂದು ನಿರ್ಧಾರ ಮಾಡಿ, ಅದರಂತೆ ತಾವು ಇದ್ದಷ್ಟು ದಿನವೂ ಕನ್ನಡ ಸಿನಿಮಾಗಳಲ್ಲಷ್ಟೇ ನಟಿಸಿದರು, ಕನ್ನಡ ಹಾಡುಗಳನ್ನು ಮಾತ್ರವೇ ಹಾಡಿದರು. ಕನ್ನಡಕ್ಕೆ ಸೀಮಿತವಾಗಿದ್ದ ಅಣ್ಣಾವ್ರು ಕನ್ನಡದ ಜೊತೆಗೆ ಎಷ್ಟು ಬೆರೆತು ಹೋಗಿದ್ದರು ಎಂದರೆ, ಕನ್ನಡ ಚಿತ್ರರಂಗ ಎಂದರೆ, ಎಲ್ಲರೂ ಗುರುತಿಸುವುದು ಅಣ್ಣಾವ್ರು, ಡಾ. ರಾಜ್ ಕುಮಾರ್ ಎಂದು. ಹೀಗಿದೆ ಕರುಣಾಡಿಗೆ, ಕನ್ನಡಕ್ಕೆ ಅಣ್ಣಾವ್ರ ಕೊಡುಗೆ.

ಡಾ. ರಾಜ್ ಕುಮಾರ್ ಅವರು ಒಂದು ಪುಸ್ತಕ ಇದ್ದ ಹಾಗೆ, ಅವರ ಸರಳತೆ, ಸಜ್ಜನಿಕೆ, ನಟನೆ, ಹಾಡುಗಾರಿಕೆ ಇದೆಲ್ಲವೂ ಕರ್ನಾಟಕದ ಜನತೆಯ ಅಚ್ಚುಮೆಚ್ಚು. ಇಂದಿಗೂ ಅಣ್ಣಾವ್ರು ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆಯೇ ಇದ್ದಾರೆ.

Leave A Reply

Your email address will not be published.