Drone Pratap: ಬಿಗ್ ಬಾಸ್ ಮನೆಯಲ್ಲಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಪಟ್ರ ಪ್ರತಾಪ್? ಇಲ್ಲಿದೆ ಅಸಲಿ ಸುದ್ದಿ!

0 16

Drone Pratap: ಡ್ರೋನ್ ಪ್ರತಾಪ್ ಅವರು ಕೆಲವು ವರ್ಷಗಳ ಹಿಂದೆ ಭಾರಿ ವಿವಾದಕ್ಕೆ ಒಳಗಾಗಿದ್ದರು. ಆದರೆ ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ, ಸ್ಪರ್ಧಿಯಾಗಿ ಬಂದ ನಂತರ ಅವರ ಮೇಲಿದ್ದ ಅಭಿಪ್ರಾಯ ಬದಲಾಗುವ ಹಾಗೆ ಮಾಡಿದ್ದಾರೆ. ಈಗ ಪ್ರತಾಪ್ ಅವರಿಗೆ ಭಾರಿ ದೊಡ್ಡ ಅಭಿಮಾನಿ ಬಳಗ ಇದೆ. ಪ್ರತಾಪ್ ವಿನ್ನರ್ ಆಗಬೇಕು ಎಂದು ಬಹಳಷ್ಟು ಜನರು ಇಷ್ಟಪಡುತ್ತಿದ್ದಾರೆ.

ಆದರೆ ಇದೀಗ ಪ್ರತಾಪ್ ಅವರ ಬಗ್ಗೆ ಒಂದು ವಿಷಯ ಜೇಳಿಬರುತ್ತಿದೆ. ಅದೇನು ಎಂದರೆ ಪ್ರತಾಪ್ ಅವರು ಬಿಗ್ ಬಾಸ್ ಮನೆಯ ಒಳಗೆ ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ ಪ್ರತಾಪ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾದ ಕಾರಣ ಪ್ರತಾಪ್ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊನ್ನೆ ಬಿಗ್ ಬಾಸ್ ಮನೆಗೆ ಬಂದ ಗುರುಗಳು ಹೇಳಿದ ಮಾತುಗಳು ಕೂಡ ಪ್ರತಾಪ್ ಅವರಿಗೆ ನೋವಾಗಿತ್ತು ಎನ್ನಲಾಗಿದ್ದು, ಈ ಕಾರಣಕ್ಕೆ ಹಾಗೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಸಲಿ ವಿಚಾರ ಬೇರೆಯೇ ಇದ್ದು, ಪ್ರತಾಪ್ ಆ ರೀತಿ ಏನು ಮಾಡಿಲ್ಲ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ಹೋಗಿದ್ದಾರೆ, ಒಂದು ದಿನ ರೆಸ್ಟ್ ಬೇಕು ಎಂದು ಡಾಕ್ಟರ್ ಹೇಳಿದ್ದಾರೆ ಎನ್ನಲಾಗಿದೆ..

ಪ್ರತಾಪ್ ಅವರ ತಂದೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದು, ಫುಡ್ ಪಾಯಿಸನ್ ಆಗಿರುವ ಕಾರಣ ಪ್ರತಾಪ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಬೇಗ ಬಿಗ್ ಬಾಸ್ ಮನೆಗೆ ವಾಪಸ್ ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಸುದ್ದಿಯೊಂದು ವೈರಲ್ ಆಗಿದೆ.

Leave A Reply

Your email address will not be published.