Drone Pratap: ಪ್ರತಾಪ್ ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗುರೂಜಿ! ಕಣ್ಣೀರಿಟ್ಟ ಪ್ರತಾಪ್!

Written by Pooja Siddaraj

Published on:

Drone Pratap: ಬಿಗ್ ಬಾಸ್ ಮನೆಗೆ ಪ್ರತಾಪ್ ಅವರು ಎಂಟ್ರಿ ಕೊಟ್ಟು ಈಗ 12 ವಾರಗಳ ಕಾಲ ಕಳೆದಿದೆ, ಈಗ 13ನೇ ವಾರ ಸಾಗುತ್ತಿಡದೆ. ಇಷ್ಟು ದಿವಸಗಳಲ್ಲಿ ತಮ್ಮ ತಾಳ್ಮೆ, ಒಳ್ಳೆಯತನ ಇವುಗಳಿಂದ ಪ್ರತಾಪ್ ಅವರು ಹೊರಗಿನ ಜನರ ಮನಸ್ಸು ಗೆದ್ದಿದ್ದಾರೆ. ಹೊರಗಡೆ ಪ್ರತಾಪ್ ಅವರಿಗೆ ಸಪೋರ್ಟ್ ಸಹ ಜಾಸ್ತಿಯಾಗಿದೆ. ಆದರೆ ಪ್ರತಾಪ್ ಅವರು ಕೆಲ ವರ್ಷಗಳ ಹಿಂದೆ ಮಾಡಿಕೊಂಡಿದ್ದ ವಿವಾದದ ಕಾರಣ ಸಾಕಷ್ಟು ಟೀಕೆಗೆ ಒಳಗಾಗಿದ್ದರು, ಅವಮಾನಗಳನ್ನು ಅನುಭವಿಸಿದ್ದರು.

ಇದರಿಂದ ಅವರು ಸ್ನೇಹಿತರು ಮತ್ತು ಕುಟುಂಬ ಎಲ್ಲದರಿಂದ ದೂರವಾಗಿದ್ದರು. ತಂದೆ ತಾಯಿ ಮತ್ತು ತಂಗಿ ಜೊತೆ ಮಾತನಾಡಿಯೇ 3 ವರ್ಷ ಆಗಿದೆ ಎಂದು ಪ್ರತಾಪ್ ತಿಳಿಸಿದ್ದರು. ಹಾಗೆಯೇ ಅವರೆಲ್ಲರ ನಂಬರ್ ಬ್ಲಾಕ್ ಮಾಡಿರುವುದಾಗಿಯೂ ಹೇಳಿದ್ದರು. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲರಿಗೂ ಮನೆಯವರಿಂದ ಊಟ ಮತ್ತು ಪತ್ರ ಬಂದಾಗ, ಪ್ರತಾಪ್ ಅವರಿಗೆ ಪತ್ರ ಓದಲು ಆಗಿಲ್ಲ ಎಂದು ಬೇಸರ ಮಾಡಿಕೊಂಡಿದ್ದರು.

ಪತ್ರ ಸಿಕ್ಕಿದ್ದರೆ ತಂದೆ ತಾಯಿ ಬಗ್ಗೆ ಗೊತ್ತಾಗುತ್ತಿತ್ತು ಎಂದಿದ್ದರು. ಆಗ ಸುದೀಪ್ ಅವರು ಪ್ರತಾಪ್ ಅವರಿಗೆ ತಂದೆಯ ಜೊತೆಗೆ ಫೋನ್ ನಲ್ಲಿ ಮಾತನಾಡುವ ಅವಕಾಶ ಕೊಟ್ಟಿದ್ದರು. ಬಳಿಕ ಫ್ಯಾಮಿಲಿ ವೀಕ್ ನಲ್ಲಿ ಪ್ರತಾಪ್ ಅವರ ತಂದೆ ತಾಯಿ ಬಿಗ್ ಬಾಸ್ ಮನೆಗೆ ಬಂದು, ಮಗನನ್ನು ಮನೆಗೆ ಬಾ ಎಂದು ಕೂಡ ಕರೆದರು, ತಂಗಿಯ ಮದುವೆಯನ್ನು ತಾನೇ ಮಾಡುತ್ತೇನೆ ಎಂದು ಹೇಳಿದರು ಪ್ರತಾಪ್. ಹಳ್ಳಿಗೆ ಹೋಗಿ ಅಮ್ಮ ಅಪ್ಪನ ಜೊತೆಗೆ ಚೆನ್ನಾಗಿರಬೇಕು ಎಂದು ಪ್ರತಾಪ್ ಅಂದುಕೊಂಡಿದ್ದಾರೆ.

ಆದರೆ ಇಂದು ಬಿಗ್ ಬಾಸ್ ಮನೆಗೆ ಬಂದಿರುವ ಗುರೂಜಿ, ಬಿಗ್ ಬಾಸ್ ಮನೆಗೆ ಪ್ರತಾಪ್ ಅವರು ಹೋದರೆ ಮನೆಯವರಿಗೆ ಅವರಿಗೆ ಇಬ್ಬರಿಗೂ ಒಳ್ಳೆಯದಾಗುವುದಿಲ್ಲ, ಹಾಗಾಗಿ ಕುಟುಂಬದಿಂದ ದೂರ ಇರುವುದೇ ಒಳ್ಳೆಯದು ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಪ್ರತಾಪ್ ಕಣ್ಣೀರು ಹಾಕಿದ್ದು, ನಿಜಕ್ಕೂ ಗುರೂಜಿ ಹಾಗೆ ಹೇಳಿದ್ದು ಯಾಕೆ ಎಂದು ಇಂದಿನ ಎಪಿಸೋಡ್ ನಲ್ಲಿ ಕಾದು ನೋಡಬೇಕಿದೆ.

Leave a Comment