Drone Pratap: ಹಳ್ಳಿಯಲ್ಲಿರೋ ಡ್ರೋನ್ ಪ್ರತಾಪ್ ತಂಗಿ ಎಂಥ ಸಾಧನೆ ಮಾಡಿದ್ದಾರೆ ಗೊತ್ತಾ?

0 17

Drone Pratap: ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯಿತು. ಎಲ್ಲಾ ಸ್ಪರ್ಧಿಗಳ ತಂದೆ ತಾಯಿ ಬಿಗ್ ಬಾಸ್ ಮನೆಗೆ ಬಂದು ತಮ್ಮ ಮಕ್ಕಳ ಜೊತೆಗೆ ಸಮಯ ಕಳೆದರು, ಮಕ್ಕಳಿಗೆ ಬುದ್ಧಿ ಹೇಳಿದರು, ಎಲ್ಲಾ ಸ್ಪರ್ಧಿಗಳ ಜೊತೆಗೆ ಮಾತನಾಡಿ ವಿಶ್ ಮಾಡಿದರು. ಡ್ರೋನ್ ಪ್ರತಾಪ್ ಅವರ ತಂದೆ ತಾಯಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದರು..

ಇವರು ಮಗನನ್ನು ಭೇಟಿ ಮಾಡಿದ್ದು 3 ವರ್ಷಗಳ ನಂತರ. ಡ್ರೋನ್ ಪ್ರತಾಪ್ ಅವರ ವಿಚಾರದಲ್ಲಿ ನಡೆದಿದ್ದ ಕೆಲವು ಘಟನೆಗಳ ಕಾರಣ ಮನೆಯವರಿಂದ ದೂರವಾಗಿದ್ದರು ಪ್ರತಾಪ್, ತಂದೆ ತಾಯಿ ಹಾಗೂ ತಂಗಿಯ ನಂಬರ್ ಅನ್ನು ಬ್ಲಾಕ್ ಸಹ ಮಾಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಬಂದ ನಂತರ ಮಾಡಿದ ತಪ್ಪಿನ ಅರಿವಾಗಿ, ತಂದೆ ತಾಯಿ ಜೊತೆಗೆ ಒಂದು ಸಾರಿ ಮಾತನಾಡಬೇಕು, ಕ್ಷಮೆ ಕೇಳಬೇಕು ಎಂದು ಬಯಸಿದ್ದರು.

ಅದೇ ರೀತಿ ಫ್ಯಾಮಿಲಿ ವೀಕ್ ನಲ್ಲಿ ಡ್ರೋನ್ ಪ್ರತಾಪ್ ಅವರ ತಂದೆ ತಾಯಿ ಬಂದು ಮಗನ ಜೊತೆಗೆ ಮಾತನಾಡಿದ್ದಾರೆ. ಹಾಗೆಯೇ ಇಷ್ಟು ವರ್ಷಗಳಲ್ಲಿ ಅವರಿಗೆ ಆದ ತೊಂದರೆಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. 3 ವರ್ಷ ತುಂಬಾ ಥರ ಕಷ್ಟಗಳನ್ನ ನೋಡಿದ್ದೀವಿ ಎಂದು ಕಣ್ಣೀರು ಹಾಕಿದರು ಪ್ರತಾಪ್ ತಂದೆ ಮರಿಮಾದೇಗೌಡ ಹಾಗೂ ತಾಯಿ ಸವಿತಾ. ಹಾಗೆಯೇ ಮನೆಯ ಹೆಣ್ಣುಮಕ್ಕಳಿಗೆ ಸೀರೆಯನ್ನು ಗಿಫ್ಟ್ ಆಗಿ ತಂದಿದ್ದರು, ಮನೆಯವರೆಲ್ಲರಿಗು ಬಾಳೆ ಎಲೆ ಊಟ ಬಡಿಸಿದರು.

ಹಾಗೆಯೇ ಪ್ರತಾಪ್ ಅವರು ಮನೆಯನ್ನು ನೋಡಿಕೊಂಡಿದ್ದು ಯಾರು, ಆರೋಗ್ಯ ಸಮಸ್ಯೆ ಆದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಯಾರು ಎಂದು ಕೇಳಿದರು. ಅದಕ್ಕೆ ಉತ್ತರ ಕೊಟ್ಟ ತಂದೆ ತಾಯಿ, ಪ್ರತಾಪ್ ತಂಗಿಯೇ ಎಲ್ಲವನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಮನೆ ಕಟ್ಟುವಾಗ ಸಾಲ ಮಾಡಿಕೊಳ್ಳಬೇಕಾಯಿತು, ಮೊದಲು ಮನೆ ಕಟ್ಟಬೇಕು, ಆಮೇಲೆ ಮದುವೆ ಅಂತ ಹೇಳಿ ಪುಟ್ಟಿನೇ ಎಲ್ಲಾ ಮಾಡಿ, ಸಾಲ ತೀರಿಸುತ್ತಾ ಇದ್ದಾಳೆ.

ಅವಳು ಚೆನ್ನಾಗಿ ಓದಿ ತನ್ನ ಕಾಲ ಮೇಲೆ ನಿಂತು ಕೊಂಡಿದ್ದಾಳೆ. ನಮಗೆ ಆರೋಗ್ಯ ಸಮಸ್ಯೆ ಆದಾಗ ಅವಳೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅವಳಿಗೆ ಒಂದು ಮದುವೆ ಮಾಡಬೇಕು ಅಷ್ಟೇ. ನೀನು ನಿನ್ನ ಕಾಲಮೇಲೆ ನಿಂತುಕೋಬೇಕು, ಅದೇ ನಮಗೆ ಸಂತೋಷ ಎಂದು ಹೇಳುತ್ತಾರೆ. ಆಗ ಪ್ರತಾಪ್ ತಾವೇ ತಂಗಿ ಮದುವೆ ಮಾಡುವುದಾಗಿ ಭರವಸೆ ನೀಡುತ್ತಾರೆ..

Leave A Reply

Your email address will not be published.