Prathap: ಡ್ರೋನ್ ಪ್ರತಾಪ್, ಈ ವ್ಯಕ್ತಿ ಟ್ರೋಲ್ ಇಂದಲೇ ಹೆಚ್ಚು ಸುದ್ದಿಯಾದವರು. ಒಂದೆರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಅವರು ತಾವು ಒಂದು ಡ್ರೋನ್ ಕಂಡುಹಿಡಿದಿರುವುದಾಗಿ ಹೇಳಿ ಪ್ರಚಾರ ಪಡೆದುಕೊಂಡಿದ್ದರು. ಬಳಿಕ ಅದೆಲ್ಲ ಸುಳ್ಳು ಎಂದು ಗೊತ್ತಾಗಿ, ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಈಗಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಅವರು ಟ್ರೋಲ್ ಆಗುತ್ತಲೇ ಇರುತ್ತಾರೆ..
ಟ್ರೋಲ್ ಅಂತೂ ತಪ್ಪಿಲ್ಲ, ಆದರೆ ಈಗ ಆ ಒಂದು ಕಾರಣಕ್ಕೆ ಜನರಿಹೇ ಇವರ ಮೇಲಿರುವ ಅಭಿಪ್ರಾಯ ಬದಲಾಗಿ ಡ್ರೋನ್ ಪ್ರತಾಪ್ ರನ್ನು ಇಷ್ಟಪಡುವುದಕ್ಕೆ ಶುರು ಮಾಡಿದ್ದಾರೆ. ನಮಗೆಲ್ಲ ಗೊತ್ತಿರುವ ಪ್ರತಾಪ್ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇವರಿಗೆ ಸರಿಯಾದ ವೋಟ್ಸ್ ಬರದೆ, ವೇಟಿಂಗ್ ಲಿಸ್ಟ್ ನಲ್ಲಿದ್ದ ಪ್ರತಾಪ್, ಕೊನೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ಹೋದರು.
ಈಗ ಪ್ರತಾಪ್ ಹಾಗೂ ಇದೇ ರೀತಿ ವೇಟಿಂಗ್ ಲಿಸ್ಟ್ ಇಂದ ಹೋದ 5 ಜನರನ್ನು ಅಸಮರ್ಥರು ಎಂದು ಪರಿಗಣಿಸಲಾಗಿತ್ತು. ಮೊದಲ ಎರಡು ವಾರಗಳ ಕಾಲ ಮನೆಯ ಸ್ಪರ್ಧಿಗಳಿಗೆ ಒಂದು ರೀತಿ ವಿರುದ್ಧವಾಗಿಯೇ ಇದ್ದ ಡ್ರೋನ್ ಪ್ರತಾಪ್ ಅವರು ನಂತರ ಎಲ್ಲರೊಡನೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಹೊರಗಡೆ ಪ್ರತಾಪ್ ಅವರಿಗೆ ಒಳ್ಳೆಯ ಸಪೋರ್ಟ್ ಸಿಕ್ಕಿದೆ. ಜನರು ಪ್ರತಾಪ್ ಅವರನ್ನು ತುಂಬಾ ಇಷ್ಟಪಡುತ್ತಿದ್ದಾರೆ.
ಪ್ರತಾಪ್ ಅವರು ಮನೆಯವರೊಡನೆ ಮಾತನಾಡುತ್ತಿರುವ ವಿಚಾರ, ಮನೆಯವರೊಡನೆ ನಡೆದುಕೊಳ್ಳುತ್ತಿರುವ ರೀತಿ ಅದೆಲ್ಲವು ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ತಂದುಕೊಟ್ಟಿದೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಮನೆಯೊಳಗೆ ಡ್ರೋನ್ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿದ್ದ ಪ್ರತಾಪ್ ಅವರು ನಿಜಕ್ಕೂ ಎಷ್ಟು ಓದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಜನರಲ್ಲಿದೆ. ಆ ಪ್ರಶ್ನೆಗೆ ಇಂದು ಉತ್ತರ ತಿಳಿಸುತ್ತೇವೆ ನೋಡಿ..
ಡ್ರೋನ್ ಪ್ರತಾಪ್ ರೈತರ ಮನೆಯ ಹುಡುಗ, ಇವರು ಬೆಂಗಳೂರಿನ ಜೈನ್ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದು, ಮೈಸೂರಿನ ಜೆ.ಎಸ್.ಎಸ್ ಕಾಲೇಜ್ ಆಫ್ ಸೈನ್ಸ್ ನಲ್ಲಿ ಪದವಿ ಮುಗಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇವರಿಗೆ ಟೆಕ್ನಿಕಲ್ ಸ್ಕಿಲ್ಸ್ ತುಂಬಾ ಚೆನ್ನಾಗಿದೆ ಎಂದರೆ ತಪ್ಪಲ್ಲ. ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಈಗ ಶೈನ್ ಆಗುತ್ತಿದ್ದಾರೆ ಎಂದು ಹೇಳಬಹುದು.