Duniya Vijay: ಎರಡನೇ ಪತ್ನಿ ಕೀರ್ತಿ ಅವರಿಂದ ದೂರ ಇದ್ದಾರಾ ನಟ ವಿಜಯ್? ಇಲ್ಲಿದೆ ನಿಜವಾದ ವಿಚಾರ!

0 1

Duniya Vijay: ನಟ ದುನಿಯಾ ವಿಜಯ್ ಅವರು ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರಾ ಎಂದು ಹೆಸರುವಾಸಿ ಆಗಿರುವವರು. ಇವರು ಈಗ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ವಿಜಯ್ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಸಲಗ ಸೂಪರ್ ಹಿಟ್ ಆಯಿತು. ಈಗ ಇವರು ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಭೀಮ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಹಾಡುಗಳು ಭಾರಿ ಸದ್ದು ಮಾಡುತ್ತಿದೆ..

ಇದರ ನಡುವೆ ದುನಿಯಾ ವಿಜಯ್ ಅವರು ಎರಡನೇ ಪತ್ನಿ ಕೀರ್ತಿ ಅವರಿಂದ ದೂರವಾಗಿದ್ದಾರಾ ಎನ್ನುವ ಒಂದು ವಿಷಯ ಕೂಡ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಈ ಜೋಡಿ ಕೆಲವು ದಿನಗಳಿಂದ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ವಿಜಯ್ ಅವರ ಮಗಳು ವಿದೇಶಕ್ಕೆ ಹೋದರು, ಆಗಲು ಕೀರ್ತಿ ಅವರು ಕಾಣಿಸಿಕೊಂಡಿರಲಿಲ್ಲ. ಇಬ್ಬರನ್ನು ಜೊತೆಯಾಗಿ ನೋಡದೇ ಅಭಿಮಾನಿಗಳಿಗೂ ಆತಂಕ ಆಗಿತ್ತು.

ಇವರಿಬ್ಬರು ಬೇರೆ ಆಗಿಬಿಟ್ಟಿದ್ದಾರಾ ಎನ್ನುವ ಅನುಮಾನ ಹಾಗೂ ಊಹಾಪೋಹಗಳು ಕೂಡ ಶುರುವಾಗಿದ್ದವು. ಅದೆಲ್ಲದಕ್ಕೂ ಈಗ ಖುದ್ದು ಕೀರ್ತಿ ಅವರೇ ಉತ್ತರ ಕೊಟ್ಟಿದ್ದಾರೆ. ಫೇಸ್ ಬುಕ್ ನಲ್ಲಿ ಕೀರ್ತಿ ಅವರ ಪೋಸ್ಟ್ ಗೆ ಅಭಿಮಾನಿ ಒಬ್ಬರು ಕಮೆಂಟ್ ಮಾಡಿದ್ದರು, ನೀವು ದುನಿಯಾ ವಿಜಯ್ ಅವರ ಜೊತೆಗೆ ಇದ್ದೀರಾ ಎಂದು ಕೇಳಿದ್ದರು, ಅದಕ್ಕೆ ಉತ್ತರಿಸಿರುವ ಕೀರ್ತಿ ಅವರು Always and Forever ಎಂದು ಉತ್ತರ ಕೊಟ್ಟಿದ್ದಾರೆ.

ಹಾಗೆಯೇ ಇನ್ನೊಬ್ಬರು, ದುನಿಯಾ ವಿಜಯ್ ಅವರ ಜೊತೆಗಿರೋ ಫೋಟೋಗಳನ್ನು ಹಾಕಿ, ನಿಮ್ಮಿಬ್ಬರನ್ನ ಜೊತೆಯಾಗಿ ನೋಡಿ ತುಂಬಾ ಸಮಯ ಆಗಿದೆ ಎಂದು ಬರೆದಿದ್ದ ಕಮೆಂಟ್ ಗೆ ಕೀರ್ತಿ ಅವರು ರಿಪ್ಲೈ ಮಾಡಿ, ಆದಷ್ಟು ಬೇಗ ಪೋಸ್ಟ್ ಮಾಡುತ್ತೇನೆ, ಈಗ ಸಂಗೀತದ ಬಗ್ಗೆ ಗಮನ ಕೊಡುತ್ತಿದ್ದೇನೆ.. ಎಂದು ಹೇಳಿದ್ದಾರೆ. ಪ್ರಸ್ತುತ ಕೀರ್ತಿ ಅವರು ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದು, ಅದನ್ನು ಅದರ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಹಾಗಾಗಿ ಪತಿಯ ಜೊತೆಗಿರುವ ಫೋಟೋಸ್ ಹಾಕಲು ಆಗಿಲ್ಲ ಎಂದು ತಿಳಿಸಿದ್ದಾರೆ.

Leave A Reply

Your email address will not be published.