ಕನ್ನಡ ಬಿಗ್ ಬಾಸ್ ಸೀಸನ್(Big Boss Kannada) ಒಂಬತ್ತು ಕೊನೆಯ ಹಂತವನ್ನು ಬಂದು ತಲುಪಿದೆ. ಇಂದು ಮತ್ತು ನಾಳೆ ಟಿವಿಯಲ್ಲಿ ಬಿಗ್ ಬಾಸ್ ನ ಸೀಸನ್ ಒಂಬತ್ತರ ಗ್ರ್ಯಾಂಡ್ ಫಿನಾಲೆ(Big Boss Grand Finale) ಪ್ರಸಾರವಾಗಲಿದೆ. ಗ್ರ್ಯಾಂಡ್ ಫಿನಾಲೆ ಬಗ್ಗೆ ಈಗಾಗಲೇ ಅಭಿಮಾನಿಗಳು ಸಾಕಷ್ಟು ಕುತೂಹಲವನ್ನು ಇಟ್ಟುಕೊಂಡಿದ್ದು, ಸಿಕ್ಕಾಪಟ್ಟೆ ಎಕ್ಸೈಟ್ ಆಗಿ ವಿನ್ನರ್ ಯಾರೆಂದು ತಿಳಿಯಲು ಕಾತರರಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಸೀಸನ್ ಒಂಬತ್ತರ ಟ್ರೋಫಿ ಯಾರ ಕೈ ಸೇರಲಿದೆ ಎನ್ನುವುದನ್ನು ತಿಳಿಯಲು ಸಖತ್ ಉತ್ಸುಕರಾಗಿದ್ದಾರೆ. ಇನ್ನು ಈ ಸೀಸನ್ ಫಿನಾಲೆಗೆ, ಮನೆಯಲ್ಲಿ ಐದು ಜನ ಸ್ಪರ್ಧಿಗಳು ಇದ್ದು, ಇವರಲ್ಲಿ ಗೆಲ್ಲೋದು ಯಾರು ಅನ್ನೋ ವಿಷಯ ನಾಳೆ ಎಲ್ಲರಿಗೂ ಗೊತ್ತಾಗುತ್ತೆ.

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಫಿನಾಲೆ ತಲುಪಿ ಟಾಪ್ ಫೈವ್ ಸ್ಪರ್ಧಿಗಳಾಗಿ ಹೊರ ಹೊಮ್ಮಿದವರು ದಿವ್ಯ ಉರುಡುಗ(Divya Uruduga), ದೀಪಿಕಾ ದಾಸ್(Deepika Das), ರೂಪೇಶ್ ಶೆಟ್ಟಿ(Roopesh Shetty), ರೂಪೇಶ್ ರಾಜಣ್ಣ(Roopesh Rajanna) ಮತ್ತು ರಾಕೇಶ್ ಅಡಿಗ(Rakesh Adiga). ಈ ಐವರಲ್ಲಿ ಟ್ರೋಫಿ ಹಿಡಿಯುವ ಕೈ ಯಾವುದು? ಸದ್ಯಕ್ಕೆ ಅದು ಉತ್ತರ ಇಲ್ಲದ ಪ್ರಶ್ನೆ. ಇನ್ನು ಫಿನಾಲೆ ಹೇಗಿರುತ್ತೆ ಅನ್ನೋದನ್ನು ವಾಹಿನಿ ತನ್ನ ಹೊಸ ಪ್ರೋಮೋ ಮೂಲಕ ಪ್ರೇಕ್ಚಕರ ಮುಂದೆ ಇಟ್ಟಿತ್ತು. ಟಿವಿಯಲ್ಲಿ ಈಗಾಗಲೇ ಗ್ರ್ಯಾಂಡ್ ಫಿನಾಲೆ ಸಂಭ್ರಮದ ಎಪಿಸೋಡ್ ಸಹಾ ಪ್ರಾರಂಭವಾಗಿದೆ.
ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರ ಗ್ರ್ಯಾಂಡ್ ಎಂಟ್ರಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈಗ ಇವೆಲ್ಲವುಗಳ ನಡುವೇ ಬಿಗ್ ಬಾಸ್ ಮನೆಯಿಂದ ಹೊಸ ಸುದ್ದಿ ಹೊರ ಬಂದಿದ್ದು, ಮನೆಯಿಂದ ಐದನೇ ಸ್ಪರ್ಧಿಯಾಗಿ ದಿವ್ಯ ಉರುಡುಗ (Divya Uruduga) ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ದಿವ್ಯ ಅವರ ಬಿಗ್ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದ್ದು, ಇನ್ನು ಮನೆಯಲ್ಲಿ ನಾಲ್ಕು ಜನ ಸ್ಪರ್ಧಿಗಳು ಮಾತ್ರವೇ ಉಳಿದಿದ್ದಾರೆ ಎನ್ನಲಾಗಿದೆ. ದಿವ್ಯ ಅವರಿಗೆ ಈ ಸೀಸನ್ ನಲ್ಲಿ ಸಹಾ ಅದೃಷ್ಟ ಅವರಿಗೆ ಕೊನೆಯ ಹಂತದಲ್ಲಿ ಕೈ ಕೊಟ್ಟಿದ್ದು, ಬಿಗ್ ಬಾಸ್ ಟ್ರೋಫಿ ಮಿಸ್ ಆಗಿದೆ.