ಈ ಲಕ್ಷಣಗಳು ಕಂಡು ಬಂದರೆ ನಿಮಗೂ ಬಿಪಿ ಅಂತ ತಿಳಿದುಕೊಳ್ಳಿ! ಈ ತಪ್ಪುಗಳಿಂದ ದೂರವಿರಿ ನಿಮ್ಮ ಬ್ಲಡ್ ಪ್ರೆಶರ್ ಹತೋಟಿಯಲ್ಲಿಡಿ!

0
15113

ರಕ್ತದೊತ್ತಡ ಎಂದರೆ ರಕ್ತನಾಳ ಗೋಡೆಗಳಿಗೆ ವಿರುದ್ದವಾಗಿ ರಕ್ತ ಪ್ರವಹಿಸುವಿಕೆ ಎಂದರ್ಥ. ಅಪಧಮನಿಗಳು ರಕ್ತನಾಳಗಳಾಗಿದ್ದು ಹೃದಯದಿಂದ ದೇಹಕ್ಕೆ ರಕ್ತವನ್ನು ಪೂರೈಸುತ್ತವೆ. ಇಡೀ ದಿನ ರಕ್ತದೊತ್ತಡದಲ್ಲಿ ಏರಿಳಿತ ಕಂಡು ಬರುತ್ತದೆ. ಆದರೆ ಸಾಮಾನ್ಯ ರಕ್ತದೊತ್ತಡವು 120ಎಂಎಂಎಚ್‍ಜಿ ಸಿಸ್ಟೋಲಿಕ್ (ಸಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಸಂಕುಚಿತವಾದಾಗ ರಕ್ತನಾಳಗಳ ಮೇಲೆ ಬೀಳುವ ಒತ್ತಡ) ಹಾಗೂ 80ಎಂಎಂಎಚ್‍ಜಿ ಡಿಸ್ಟೋಲಿಕ್ ರಕ್ತದೊತ್ತಡ (ಡಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಬಡಿತದ ನಡುವೆ ಹೃದಯ ವಿಶ್ರಮಿಸಿದಾಗ ಉಂಟಾಗುವ ಒತ್ತಡ ಎಂದರ್ಥ).ರಕ್ತದ ಒತ್ತಡದಲ್ಲಿ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಅಥವಾ ಹೈಪರ್‍ಟೆನ್ಷನ್ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡವು ಕಾರ್ಡಿಯೋವ್ಯಾಸ್ಕುಲರ್ ರೋಗಗಳು, ಮೂತ್ರಪಿಂಡ ರೋಗಗಳು ಮತ್ತು ಪಾಶ್ರ್ವವಾಯು ಗಂಡಾಂತರವನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡದ ಚಿಹ್ನೆಗಳು ಮತ್ತು ಲಕ್ಷಣ :ಅಧಿಕ ರಕ್ತದೊತ್ತಡ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಸಾಂದರ್ಭಿಕವಾಗಿ ತಲೆನೋವು ಉಂಟು ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಅಥವಾ ಮೌನ ಹಂತಕ ಎಂದು ಕರೆಯಲಾಗುತ್ತದೆ. ಯಾವುದೇ ಚಿಹ್ನೆ ಅಥವಾ ಲಕ್ಷಣಗಳು ಇಲ್ಲದೇ ಹೃದಯ, ರಕ್ತನಾಳಗಳು, ಮೂತ್ರಪಿಂಡ ಹಾಗೂ ದೇಹದ ಇತರ ಭಾಗಗಳಿಗೆ ಇದು ಹಾನಿಯನ್ನು ಮುಂದುವರೆಸುವುದರಿಂದ ಹೀಗೆ ಬಣ್ಣಿಲಾಗಿದೆ. ಬಹುತೇಕ ರಕ್ತದೊತ್ತಡದ ಪ್ರಕರಣಗಳಲ್ಲಿ ರಕ್ತದೊತ್ತಡ ಇರುವುದೇ ತಿಳಿಯದ ಕಾರಣ ಅಗಾಗ ರಕ್ತದೊತ್ತಡವನ್ನು ತಪಾಸಣೆಗೆ ಒಳಪಡಿಸುವುದು ತುಂಬಾ ಮುಖ್ಯವಾಗಿರುತ್ತದೆ.ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಗಂಡಾಂತರದ ಸಂಗತಿಗಳೆಂದರೆ

1 ) ವೃದ್ದಾಪ್ಯ: ವಯಸ್ಸಾದಂತೆ ಅಧಿಕ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿರುತ್ತದೆ. 45 ವರ್ಷ ಮೇಲ್ಪಟ್ಟ ಪುರುಷರು ಹಾಗೂ 55 ವರ್ಷ ಮೇಲ್ಪಟ್ಟ ಮಹಿಳೆಯರು ಅಧಿಕ ರಕ್ತದೊತ್ತಡಕ್ಕೆ ಒಳಗಾಗುವ ಸಂಭವ ಹೆಚ್ಚಾಗಿರುತ್ತದೆ.

2) ಅತಿಯಾದ ತೂಕ ಮತ್ತು ಬೊಜ್ಜು: ಸಾಮಾನ್ಯಕ್ಕಿಂತ ಅಧಿಕ ದೇಹ ತೂಕವಿದ್ದರೆ ಅಧಿಕ ರಕ್ತದೊತ್ತಡ ಗಂಡಾಂತರ ಹೆಚ್ಚಾಗಿರುತ್ತದೆ.

3) ಲಿಂಗ: ವಯಸ್ಕ ಮಹಿಳೆಯರಲ್ಲಿ ವಯಸ್ಕ ಪುರುಷರಿಗಿಂತ ಅಧಿಕ ರಕ್ತದೊತ್ತಡದ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಯುವತಿಯರಲ್ಲಿ ಯುವಕರಿಗಿಂತ ಅಧಿಕ ರಕ್ತದೊತ್ತಡದ ಸಾಧ್ಯತೆ ಹೆಚ್ಚಾಗಿರುತ್ತದೆ. 50 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬರುತ್ತದೆ.

4) ಅನಾರೋಗ್ಯಕರ ಜೀವನಶೈಲಿ: ಅತಿಯಾದ ಸೋಡಿಯಂ (ಉಪ್ಪು) ಆಹಾರ ಪದಾರ್ಥಗಳು, ಆಲ್ಕೋಹಾಲ್ ಸೇವನೆ, ಧೂಮಪಾನ, ಸಾಕಷ್ಟು ದೈಹಿಕ ಚಟುವಟಿಕೆಗಳು ಇಲ್ಲದಿರುವಿಕೆ, ಆಹಾರದಲ್ಲಿ ಸಾಕಷ್ಟು ಪೋಟ್ಯಾಷಿಯಂ ಬಳಸದಿರುವಿಕೆ

5 ) ಅಧಿಕ ರಕ್ತದೊತ್ತಡದ ಕೌಟುಂಬಿಕ ಹಿನ್ನಲೆ

6 ) ದೀರ್ಘಕಾಲದ ಒತ್ತಡ

ಯಾವುದೇ ಚಿಕಿತ್ಸೆಯನ್ನು ಪಡೆಯಲು ವಿಫಲವಾದರೆ ಏನು ತೊಡಕುಗಳು ಉಂಟಾಗುತ್ತವೆ ?

1 ) ಹೃದ್ರೋಗ: ಹೃದಯ ವೈಫಲ್ಯ. ದೇಹಕ್ಕೆ ಹೃದಯದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ತ ಪಂಪ್ ಮಾಡುವಲ್ಲಿ ಸಾಧ್ಯವಾಗದಿರುವಿಕೆ, ಹೃದಯಾಘಾತ.

2 ) ಪಾಶ್ರ್ವವಾಯು: ಮೆದುಳಿನ ಪ್ರದೇಶಕ್ಕೆ ರಕ್ತ ಪೂರೈಕೆ ಕುಂಠಿತವಾದಾಗ ಪಾಶ್ರ್ವವಾಯು ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಮಂದಿ ಪಾಶ್ರ್ವವಾಯುವಿಗೆ ಒಳಗಾಗುವ ಸಾಧ್ಯತೆ ನಾಲ್ಕರಿಂದ ಆರು ಪಟ್ಟು ಹೆಚ್ಚಾಗಿರುತ್ತದೆ.

3 )ಮೂತ್ರಪಿಂಡ ರೋಗ: ಮೂತ್ರಪಿಂಡ ವೈಫಲ್ಯ. ಮೂತ್ರಪಿಂಡದಲ್ಲಿನ ರಕ್ತನಾಳಗಳು ಕಿರಿದಾಗುವುದರಿಂದ ಕಿಡ್ನಿ ವಿಫಲತೆಗೆ ಕಾರಣವಾಗುತ್ತದೆ.

4 ) ನೇತ್ರ ಸಮಸ್ಯೆ: ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡದಿದ್ದರೆ ನೇತ್ರ ದೃಷ್ಟಿಗೆ ಧಕ್ಕೆಯಾಗಿ ರೆಟಿನಾದಲ್ಲಿನ ರಕ್ತನಾಳಗಳ ಹಾನಿಗೆ ಕಾರಣವಾಗುತ್ತದೆ. ಈ ದೋಷವನ್ನು ಹೈಪರ್‍ಟೆನ್‍ಸಿವ್ ರೆಟಿನೋಪಥಿ ಎಂದು ಕರೆಯುತ್ತಾರೆ.

5 ) ಅಪಧಮನಿಯ ಊದುವಿಕೆ: ಅನ್ಯೂರಿಸಮ್ ಅಥವಾ ಅಪಧಮಿನಿಯ ಊದುವಿಕೆ ಎಂದರೆ ರಕ್ತನಾಳದ ಗೋಡೆಯಲ್ಲಿನ ಅಸಾಧಾರಣ ಊತ ಮತ್ತು ಹೃದಯದಿಂದ ದೇಹಕ್ಕೆ ರಕ್ತವನ್ನು ಕೊಂಡೊಯ್ಯವ ಮುಖ್ಯ/ಅಪಧಮನಿಯು ಊದಿಕೊಳ್ಳುವಿಕೆಯ ಸಾಮಾನ್ಯ ಜಾಗವಾಗಿರುತ್ತದೆ.

ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವುದು ಹೇಗೆ?

1 ) ಆರೋಗ್ಯಕರ ಜೀವನಶೈಲಿ ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಕಾರಿ.

2) ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಇವುಗಳಲ್ಲಿ ಪೋಟ್ಯಾಷಿಯಂ ಮತ್ತು ಫೈಬರ್ ಸಮೃದ್ದವಾಗಿರುತ್ತವೆ.

3) ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟೆರಾಲ್ ಕಡಿಮೆ ಇರುವ ಅಹಾರಗಳನ್ನು ತಿನ್ನಿ. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಸೋಡಿಯಂನನ್ನು ನಿಯಂತ್ರಿಸಿ. ಅನೇಕ ಸಂಸ್ಕರಿತ ಆಹಾರಗಳು ಮತ್ತು ರೆಸ್ಟೋರೆಂಟ್ ಉಪಹಾರ-ಊಟಗಳಲ್ಲಿ ಸೋಡಿಯಂ ಸಾರಾಂಶ ಅಧಿಕವಾಗಿರುತ್ತದೆ.

4 ) ಅತಿಯಾದ ತೂಕ ಹೊಂದುವುದರಿಂದ ಅಧಿಕ ರಕ್ತದೊತ್ತಡದ ಗಂಡಾಂತರಗಳು ಹೆಚ್ಚಾಗುತ್ತವೆ. ಆದ್ದರಿಂದ ತೂಕವನ್ನು ಕಡಿಮೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದು.

5 ) ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದು.

6) ಧೂಮಪಾನ ಮಾಡಬೇಡಿ.

7) ಆಲ್ಕೋಹಾಲ್ ಸೇವನೆಯನ್ನು ಇತಿಮಿತಿಗೊಳಿಸಿ.

ಚಿಕಿತ್ಸೆ ಆಯ್ಕೆಗಳು :

1 ) ಚಿಕಿತ್ಸೆ ಗುರಿ : ವಯಸ್ಕರಲ್ಲಿ ಚಿಕಿತ್ಸೆಯ ಗುರಿಯು ರಕ್ತದೊತ್ತಡವನ್ನು 140/90 ಎಂಎಂಎಚ್‍ಜಿಗಿಂತ ಕಡಿಮೆ ಮಟ್ಟದಲ್ಲಿ ಇರಿಸುವುದಾಗಿದೆ. ಡಯಾಬಿಟಿಸ್ ಮತ್ತು ದೀರ್ಘಕಾಲದ ಮೂತ್ರಪಿಂಡ ರೋಗಗಳನ್ನು ಹೊಂದಿರುವ ವಯಸ್ಕರರು ರಕ್ತದೊತ್ತಡವನ್ನು 130/30 ಎಂಎಂಎಚ್‍ಜಿಗಿಂತ ಕಡಿಮೆ ಮಟ್ಟದಲ್ಲಿ ನಿಯಂತ್ರಿಸುವುದು ಉತ್ತಮ.

2 ) ಜೀವನಶೈಲಿ ಬದಲಾವಣೆ: ಆರೋಗ್ಯಕರ ಜೀವನಶೈಲಿ ಅಭ್ಯಾಸಗಳು ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಕಾರಿ

3 ) ಔಷಧಿಗಳು: ಇಂದಿನ ರಕ್ತದೊತ್ತಡದ ಔಷಧಿಗಳು ಬಹುತೇಕ ಮಂದಿಯ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸುರಕ್ಷಿತ ರೀತಿಯಲ್ಲಿ ನೆರವಾಗುತ್ತದೆ. ಇಂಥ ಔಷಧಿಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಅಡ್ಡಪರಿಣಾಮಗಳು ಏನೇ ಇದ್ದರೂ ಅದು ಲಘು ಪ್ರಮಾಣದ್ದಾಗಿರುತ್ತದೆ. ಈ ಔಷಧಿಗಳನ್ನು ನಿಮಗೆ ಚಿಕಿತ್ಸೆ ನೀಡುವ ವೈದ್ಯರು ಅಥವಾ ಕುಟುಂಬ ವೈದ್ಯರು ನಿರ್ಧರಿಸುತ್ತಾರೆ. ಹಾಗಾಗಿ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದರೂ ವೈದ್ಯರ ಗಮನಕ್ಕೆ ತರಬೇಕು. ರೋಗಿಗಳು ತಮಗೆ ತಾವೇ ಈ ಔಷಧಿಗಳ ಸೇವನೆಯನ್ನು ನಿಲ್ಲಿಸಬಾರದು.

ಧನ್ಯವಾದಗಳು.

LEAVE A REPLY

Please enter your comment!
Please enter your name here