ಎಕ್ಕದ ಗಿಡ ದಲ್ಲಿ ಅಡಗಿರುವ ರಹಸ್ಯದ ಬಗ್ಗೆ ನಿಮಗೆ ಗೊತ್ತಾ?
ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಎಷ್ಟು ಔಷಧಿ ತೆಗೆದುಕೊಂಡರು ಕಾಯಿಲೆ ವಾಸಿಯಾಗುವುದಿಲ್ಲ. ಕೆಲವೊಂದು ಗಿಡಗಳಲ್ಲಿ ಈ ಕಾಯಿಲೆಗಳು ವಾಸಿಯಾಗುತ್ತದೆ. ಬಿಳಿ ಎಕ್ಕದ ಗಿಡವು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ.ಗುಂಪು ಗುಂಪಾಗಿ ಸಮೃದ್ಧವಾಗಿ ಬೆಳೆಯುತ್ತದೆ ಈ ಬಿಳಿ ಎಕ್ಕದ ಗಿಡ.
ಭೂಮಿಯಲ್ಲಿ ತೇವ ಇದ್ದರೆ ಸಾಕು ಈ ಗಿಡವನ್ನು ನೆಟ್ಟರೆ ಅದು ಅಲ್ಲಿಯೇ ಸಮೃದ್ಧವಾಗಿ ಬೆಳೆಯುತ್ತದೆ.ಎಕ್ಕದ ಗಿಡ ದಲ್ಲಿ ಎರಡು ವಿಧವಾದ ಗಿಡವಿದೆ.ಒಂದು ಬಿಳಿ ಎಕ್ಕದ ಗಿಡ ಇನ್ನೊಂದು ನೀಲಿ ಎಕ್ಕದ ಗಿಡ. ಆದರೆ ಇವೆರಡರಲ್ಲಿ ಶ್ರೇಷ್ಠವಾದದ್ದು ಬಿಳಿ ಎಕ್ಕದ ಗಿಡ.
ಕಾಲಿಗೆ ಮುಳ್ಳು ಚುಚ್ಚಿಕೊಂಡು ಗಾಯವಾದರೆ ಹಿರಿಯರು ಬಿಳಿ ಎಕ್ಕದ ಗಿಡದ ಹಾಲನ್ನು ಬಿಟ್ಟು ಆ ಮುಳ್ಳನ್ನು ಹೊರಗೆ ತೆಗೆಯುತ್ತಿದ್ದರು.ಎಕ್ಕದ ಹಾಲು ತುಂಬಾನೇ ಕೆಲಸ ಮಾಡುತ್ತದೆ ಆದರೆ ಅಷ್ಟೇ ವಿಷಪೂರಿತವಾಗಿರುತ್ತದೆ. ಈ ಗಿಡದ ಹಾಲನ್ನು ಬಳಸುವಾಗ ಕಣ್ಣಿಗೆ ಯಾವುದೇ ಕಾರಣಕ್ಕೂ ಈ ಹಾಲು ಬೀಳಬಾರದು.ಬಿಳಿ ಎಕ್ಕದ ಗಿಡವನ್ನು ಕೈ ಅಥವಾ ಕುತ್ತಿಗೆ ಕಟ್ಟಿಕೊಳ್ಳುವುದರಿಂದ ಅನಾರೋಗ್ಯದ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ ಎಂದು ಹಿಂದಿನ ಕಾಲದಿಂದ ನಂಬಿಕೊಂಡು ಬಂದಿದ್ದಾರೆ.
ವೈಜ್ಞಾನಿಕವಾಗಿ ಹೇಳುವುದಾದರೆ ಮಧುಮೇಹ ಸಮಸ್ಯೆಗೆ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ನಿಮ್ಮ ಪಾದದ ಆಡಿಯಲ್ಲಿ ಹಿಮ್ಮುಖವಾಗಿ ಇಟ್ಟು ಸಾಕ್ಸ್ ಹಾಕಿ ದಿನ ಪೂರ್ತಿ ಹಾಕಿಕೊಂಡು ರಾತ್ರಿ ತೆಗೆದು ಮಲಗಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಒಂದು ವಾರ ಅಥವಾ 15 ದಿನಗಳಲ್ಲಿ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ.
ಇನ್ನು ಎಕ್ಕದ ಗಿಡದ ಹೂವುಗಳು ಶಿವನಿಗೆ ಅತ್ಯಂತ ಪ್ರಿಯವಾದದ್ದು ಆದ್ದರಿಂದ ಎಕ್ಕದ ಗಿಡದ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ ಶಿವನು ಪ್ರಸನ್ನನಾಗಿ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.ಎಕ್ಕದ ಗಿಡ ಮನೆಯ ಮುಂದೆ ಅಥವಾ ಮನೆ ಹಿಂದೆ ಇದ್ದರೆ ಶುಭ ಎಂದು ತಿಳಿಯಲಾಗುತ್ತದೆ.ಈ ಗಿಡ ಇರುವ ಕಡೆ ಸುಖ ಶಾಂತಿ ನೆಮ್ಮದಿಯನ್ನು ಕಾಣಬಹುದಾಗಿದೆ.