ಎಲ್ಲರೂ ಇವನನ್ನು ಅವಮಾನ ಮಾಡಿದರು ಕೊನೆಗೆ ಅವಮಾನ ಮಾಡಿದವರೇ ಇವನ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ!

0
1029

ಜೀವನ ಪೂರ್ತಿ ಹಾಳಾದ ಟೈರ್ ಗಳನ್ನು ಒಟ್ಟುಗೂಡಿಸಿ ಈ ಹುಡುಗ ಮಾಡಿರುವ ಕೆಲಸ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ.

ಆ ಹುಡುಗನನ್ನು ಅವನ ಸಂಬಂಧಿಕರು , ಸ್ನೇಹಿತರು , ಮನೆಯವರು ಇವನು ಉದ್ಧಾರ ಆಗುವುದಿಲ್ಲ ಎಂದು ಪ್ರತಿ ಬಾರಿ ಪ್ರತಿ ದಿನ ಇವನಿಗೆ ಅವಮಾನ ಮಾಡುತ್ತಿದ್ದರು.2 ವರ್ಷದ ನಂತರ ಇವನು ಆ ಅವಮಾನಗಳನ್ನೆಲ್ಲ ಮೀರಿ ಮಾಡಿದ ಸಾಧನೆ ಮೈ ರೋಮಾಂಚನ ಗೊಳಿಸುತ್ತದೆ.ಇನ್ನು ಯಾರ್ಯಾರು ಈತನಿಗೆ ಅವಮಾನ ಮಾಡಿ ಹೀಯಾಳಿಸಿದ್ದರೋ ಅವರೆಲ್ಲ ಈಗ ಆ ಹುಡುಗನ ಕೈ ಕೆಳಗೆ ಕೆಲಸ ಮಾಡುತ್ತಿದ್ದಾರೆ.

ಆ ಹುಡುಗನ ಹೆಸರು ಮೆಲ್ಕಮ್ , ಈತ ಆಫ್ರಿಕಾದಲ್ಲಿ ಹುಟ್ಟಿ ಬೆಳೆದಿದ್ದತುಂಬಾ ಬಡಕುಟುಂಬದವನಾಗಿದ್ದರಿಂದ ಈತನ ಮನೆಯಲ್ಲಿ ಕರೆಂಟ್ ಸಹ ಇರಲಿಲ್ಲ, ಇನ್ನು ವಿದ್ಯಾಭ್ಯಾಸ ದೂರದ ಮಾತು.ಆ ಹುಡುಗನ ಕುಟುಂಬಕ್ಕೆ ಒಂದು ಹೊತ್ತಿನ ಊಟ ಸಿಕ್ಕರೆ ಅದೇ ಅವರಿಗೆ ದಿನಪೂರ್ತಿ ಮೃಷ್ಟಾನ್ನ ಭೋಜನವಾಗಿತ್ತು.ಆದರೆ ಕೆಲವೇ ವರ್ಷಗಳಲ್ಲಿ ಮೆಲ್ಕಮ್ ತನ್ನ ಕುಟುಂಬದ ಬಡತನವನ್ನು ಮಾಯಮಾಡಿಬಿಟ್ಟ.

ಮೊದ ಮೊದಲು ಮೆಲ್ಕಮ್ ನ ಕುಟುಂಬದಲ್ಲಿ ಅಷ್ಟು ಬಡತನ ಇರಲಿಲ್ಲ ಆದರೆ ಮೆಲ್ಕಮ್ ನ ತಂದೆಯ ಜೂಜಾಟದ ಅಭ್ಯಾಸದಿಂದ ಆತನ ಕುಟುಂಬ ತೀರಾ ಬಡತನಕ್ಕಿಳಿಯಿತು ನಂತರ ಮೆಲ್ಕಮ್ ಮೇಲೆ ಜವಾಬ್ದಾರಿ ಹೆಚ್ಚಾಯಿತು.ಚಿಕ್ಕ ಪುಟ್ಟ ಕೆಲಸ ಮಾಡಿ ಕುಟುಂಬವನ್ನು ಸಂಭಾಳಿಸುತ್ತಿದ್ದ ಆದರೆ ಅದರಿಂದ ಏನು ಪ್ರಯೋಜನ ಇಲ್ಲ ಎಂದು ಮೆಲ್ಕಮ್ ಒಂದು ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಮಾಡಿ
ತಾನು ಕೂಡಿಟ್ಟ ಹಣವನ್ನೆಲ್ಲಾ ಒಟ್ಟು ಮಾಡಿ ಹಳೆ ಗಾಡಿ ಟೈರ್ ಗಳನ್ನು ಖರೀದಿ ಮಾಡಿದ.

ಈತ ಹಳೆ ಟೈರ್ ಗಳನ್ನು ತೆಗೆದುಕೊಂಡಿದ್ದನ್ನು ನೋಡಿ ಇವನ ಸ್ನೇಹಿತರು , ಸಂಬಂಧಿಕರು ಇವನನ್ನು ಹೀಯಾಳಿಸಿದರು.ಆದರೆ ಮೆಲ್ಕಮ್ ಯಾವ ಮಾತಿಗೂ ತಲೆ ಕೆಡಿಸಿಕೊಳ್ಳದೆ ತನ್ನ ಹೊಸ ಬ್ಯುಸಿನೆಸ್ ಗೆ ಏನೆಲ್ಲ ಬೇಕೋ ರೆಡಿ ಮಾಡಿಕೊಂಡು ಹಾಳಾದ ಟೈರ್ ಗಳಿಂದ ಚಪ್ಪಲಿಗಳನ್ನು ರೆಡಿ ಮಾಡಿದ.ಆ ಚಪ್ಪಲಿಗಳನ್ನು ಮಾರ್ಕೆಟ್ ಗೆ ತಂದು ಮಾರಲು ಶುರುಮಾಡಿದ.

ಇವನು ತಂದ ಚಪ್ಪಲಿಗಳೆಲ್ಲ ಸ್ವಲ್ಪ ಹೊತ್ತಲ್ಲಿ ಖಾಲಿಯಾಯ್ತು.ಹಳೆ ಟೈರ್ ಗಳಿಂದ ಚಪ್ಪಲಿಗಳನ್ನು ಮಾಡಿರುವುದರಿಂದ ಚಪ್ಪಲಿಗಳ ರೇಟ್ ತುಂಬಾ ಕಡಿಮೆ ಇದ್ದ ಕಾರಣ ಜನರು ಮೆಲ್ಕಮ್ ನ ಚಪ್ಪಲಿಗಳನ್ನು ಹೆಚ್ಚು ಹೆಚ್ಚು ಕೊಳ್ಳಲು ಶುರುಮಾಡಿದರು ಹಾಗೂ ಮೆಲ್ಕಮ್ ನ ಚಪ್ಪಲಿಗಳಿಗೆ ಬೇಡಿಕೆ ಹೆಚ್ಚಾಯಿತು
ಜೊತೆಗೆ ಕ್ರಮೇಣ ಅವನ ಆದಾಯ ಕೂಡ ಹೆಚ್ಚಾಯಿತು.

ಈ ಚಿಕ್ಕ ಬ್ಯುಸಿನೆಸನ್ನು ದೊಡ್ಡ ಬ್ಯುಸಿನೆಸನ್ನಾಗಿ ಮೆಲ್ಕಮ್ ಮಾಡಿದ.ಆಗ ಒಂದು ಕಾಲದಲ್ಲಿ ಯಾರ್ಯಾರು ಅವನನ್ನು ಹೀಯಾಳಿಸಿದರೊ ಅವರೇ ಮೆಲ್ಕಮ್ ನ ಕೆಲಸಕ್ಕೆ ಸೇರಿದರು.

ಕೆಲಸ ಯಾವುದಾದರೂ ಸರಿ ನಿಯತ್ತಿನಿಂದ ಕಷ್ಟಪಟ್ಟು ಶ್ರದ್ಧೆಯಿಂದ ಮಾಡಿದರೆ ಖಂಡಿತ ಫಲ ಸಿಗುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here