Eshani: ಬಿಗ್ ಬಾಸ್ ಮನೆಗೆ ಎಲ್ಲಾ ಥರದ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ. ಸಂಗೀತ, ನಟನೆ, ನೃತ್ಯ, ಸ್ಪೋರ್ಟ್ಸ್, ಮಾಡೆಲಿಂಗ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಈ ಶೋಗೆ ಬಂದು ತಮ್ಮ ಟ್ಯಾಲೆಂಟ್ ತೋರಿಸುವುದುಂಟು. ಪ್ರತಿ ಸೀಸನ್ ನಲ್ಲೂ ಹೀಗೆ ಸಾಧನೆ ಮಾಡಿರುವ, ಅವಕಾಶಕ್ಕಾಗಿ ಕಾಯುತ್ತಿರುವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರುತ್ತಾರೆ. ಹಾಗೆಯೇ ಕನ್ನಡ ರಾಪರ್ ಆಗಿ ಬಂದಿರುವವರು ಇಶಾನಿ..
ಕನ್ನಡದಲ್ಲಿ ಮಹಿಳಾ ರಾಪರ್ ಗಳು ತುಂಬಾ ಕಡಿಮೆ, ಹಾಗಾಗಿ ಇಷಾನಿ ಅವರು ಅಪರೂಪದ ಪ್ರತಿಭೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗಲು ಖಡಕ್ ಆಗಿ, ತಮ್ಮ ಟ್ಯಾಲೆಂಟ್ ತೋರಿಸುವ ಆತ್ಮವಿಶ್ವಾಸದಿಂದ ಎಂಟ್ರಿ ಕೊಟ್ಟಿದ್ದ ಇಷಾನಿ, ಇಷ್ಟು ದಿನ ಯಾವುದೇ ಹಾಡನ್ನು ರಾಪ್ ಮಾಡಿರಲಿಲ್ಲ. ಇನ್ನೇನು ಮೂರು ವಾರ ಕಳೆಯುತ್ತಿದೆ, ಮನೆಗೆ ಅಡ್ಜಸ್ಟ್ ಆಗುವುದು, ಮನೆಯವರ ಜೊತೆಗೆ ಹೊಂದಿಕೊಳ್ಳುವುದು..
ಟಾಸ್ಕ್ ಮಾಡುವುದು ಇದರಲ್ಲೇ ಬ್ಯುಸಿ ಇದ್ದ ಇಶಾನಿ, ಇನ್ನು ರಾಪ್ ಮಾಡಿರಲಿಲ್ಲ. ಇದೀಗ ಇಶಾನಿ ಒಳಗಿರುವ ರಾಪರ್ ಹೊರದೊಂದು ಹಾಡನ್ನು ಬರೆದಿದ್ದಾರೆ. ಮನೆಯ ಬೇರೆ ಸದಸ್ಯರು ಮಾತನಾಡುತ್ತಾ ಕುಳಿತಿದ್ದಾಗ ಪೇಪರ್ ಮತ್ತು ಪೆನ್ ಹಿಡಿದು ಕುಳಿತಿದ್ದ ಇಶಾನಿ, ಕೆಲವು ಸಾಲುಗಳನ್ನು ಬರೆದರು, ಅವರಿಗೆ ಬುಲೆಟ್ ರಕ್ಷಕ್ ಅವರ ಸಹಾಯ ಕೂಡ ಸಿಕ್ಕಿದ್ದು, ಇಶಾನಿ ಹಾಡಿಗೆ ರಕ್ಷಕ್ ಕೂಡ ಎರಡು ಸಾಲುಗಳನ್ನು ಸೇರಿಸಿದ್ದಾರೆ.
ಮನೆಯ ಸದಸ್ಯರಿಗೆ ಸಂಗೀತದ ತೋರಿಸಲು ಇಶಾನಿ ಬರೆದಿರುವ ಸಾಲುಗಳು ಇದಾಗಿದೆ, “ನಾನು ಕ್ವೀನ್ ಇಶಾನಿ.. ನಾನು ರಾಪರ್ ರಾಣಿ.. ನಾನು ಏನ್ ಅಂತ ನನಗೆ ಗೊತ್ತು. ಇದು ಬಿಗ್ ಬಾಸ್, ಐ ಆಮ್ ಲೇಡಿ ಬಾಸ್.. ಐ ಆಮ್ ಫೈಟರ್ ಲೇಡಿ, ಐ ಡೋಂಟ್ ಗಿವ್ ಎ..ಆಚೆ ನನ್ನ ಫ್ಯಾನ್ಸು, ಕೊಡ್ರಿ ಒಂದು ಚಾನ್ಸು.. ಆಗ್ತೀನ್ ನಾನು ಬೌನ್ಸು, ಇದೇ ನನ್ನ ರೂಲ್ಸು..” ಎಂದು ರಾಪ್ ಮಾಡಿದ್ದಾರೆ ಇಶಾನಿ. ಈ ರಾಪ್ ಹಾಡಿನ ಸಾಹಿತ್ಯ ಮುಂದಕ್ಕೆ ಹೋಗುತ್ತಲೇ ಇತ್ತು.
ಇದೇ ರೀತಿ ಇಶಾನಿ ಅವರು ಹೆಚ್ಚು ಮನರಂಜನೆ ನೀಡುತ್ತಾ, ಜೊತೆಗೆ ಟಾಸ್ಕ್ ಅನ್ನು ಕೂಡ ಚೆನ್ನಾಗಿ ಮಾಡುತ್ತಾ ಬಂದರೆ, ಬಿಗ್ ಬಾಸ್ ಮನೆಯೊಳಗೆ ಹೆಚ್ಚು ಸಮಯ ಉಳಿಯಬಹುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಇಶಾನಿ ಹೇಗಿರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.