ಮುಖದಲ್ಲಿನ ಬೇಡವಾದ ಕೂದಲಿಗೆ ಶಾಶ್ವತ ಪರಿಹಾರ!

0
13639

ಅನೇಕ ಮಹಿಳೆಯರ ಮುಖ ದಲ್ಲಿ ಬೇಡವಾದ ಕೂದಲುಗಳು ಇರುತ್ತವೆ ಅಂತಹ ಬೇಡವಾದ ಕೂದಲುಗಳಿಂದ ಅವರ ಸೌಂದರ್ಯಕ್ಕೆ ಅದು ಅಡ್ಡಿಯನ್ನುಂಟು ಮಾಡುತ್ತದೆ ಆದ್ದರಿಂದ ಅಂತಹ ಬೇಡವಾದ ಮತ್ತು ಮುಖದ ಅಂದ ಕೆಡಿಸುವ ಕೂದಲುಗಳನ್ನು ಹೋಗಲಾಡಿಸಲು ಮನೆಮದ್ದನ್ನು ಇಲ್ಲಿ ತಿಳಿಸಲಾಗಿದೆ.

ಮನೆಮದ್ದು

  • ಬೇಕಾಗುವ ಪದಾರ್ಥಗಳು :

ಅರ್ಧ ಸ್ಪೂನ್ ಗೋಧಿ ಹಿಟ್ಟು ಅಥವಾ ಕಡಲೆ ಹಿಟ್ಟು ಅರ್ಧ ಸ್ಪೂನ್ ಪುಡಿ ಉಪ್ಪು ,ಒಂದು ಸ್ಪೂನ್ ಅಡುಗೆ ಅರಿಶಿಣ ಮತ್ತು 2 ಸ್ಪೂನ್ ಆಕಲಿನ ಹಸಿ ಹಾಲು .

  • ಮಾಡುವ ವಿಧಾನ :

ಮೊದಲಿಗೆ 1 ಬಟ್ಟಲಿಗೆ ಅರ್ಧ ಸ್ಪೂನ್ ಗೋಧಿಹಿಟ್ಟು ಅಥವಾ ಕಡಲೆ ಹಿಟ್ಟು , 1 ಸ್ಪೂನ್ ಕಸ್ತೂರಿ ಅರಿಶಿನ ಅಥವಾ ಅಡುಗೆ ಅರಿಶಿನ ಮತ್ತು ಅರ್ಧ ಸ್ಪೂನ್ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅದಕ್ಕೆ 2 ಸ್ಪೂನ್ ಆಕಳಿನ ಹಸಿ ಹಾಲು (ಕಾಯಿಸಿರುವ ಹಾಲು ನಿಷಿದ್ಧ )ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.

  • ಬಳಸುವ ವಿಧಾನ :

ಮೊದಲಿಗೆ ಮುಖವನ್ನು ಚೆನ್ನಾಗಿ ತೊಳೆದುಕೊಂಡು ನಂತರ ಈ ಪೇಸ್ಟನ್ನು ಬೇಡವಾದ ಕೂದಲು ಇರುವ ಜಾಗದಲ್ಲಿ ಹಚ್ಚಿ 20 ನಿಮಿಷ ಒಣಗಲು ಬಿಟ್ಟು ನಂತರ ಮೇಲ್ಮುಖವಾಗಿ ಹಚ್ಚಿರುವ ಪೇಸ್ಟನ್ನು ತೆಗೆಯಿರಿ
ನಂತರ 1 ಐಸ್ ಕ್ಯೂಬ್ ಸಹಾಯದಿಂದ ಮಸಾಜ್ ಮಾಡಿಕೊಳ್ಳಿ.ಈ ಫೇಸ್ ಪ್ಯಾಕನ್ನು ವಾರದಲ್ಲಿ ಒಮ್ಮೆ ಬಳಸಿದರೆ ಸಾಕು ಕೇವಲ 1 ತಿಂಗಳಲ್ಲಿ ಬದಲಾವಣೆ ಕಾಣಬಹುದಾಗಿದೆ.ಮುಖ್ಯವಾಗಿ ಇದರಿಂದ ಯಾವುದೇ ರೀತಿಯ ದುಷ್ಪರಿಣಾಮ ಆಗುವುದಿಲ್ಲ.

ಧನ್ಯವಾದಗಳು.

LEAVE A REPLY

Please enter your comment!
Please enter your name here