Ganavi Laxman: ಕೆಂಪು ಉಡುಗೆಯಲ್ಲಿ ಕಂಗೊಳಿಸಿದ ಗಾನವಿ ಲಕ್ಷ್ಮಣ್! ನೆಟ್ಟಿಗರು ಫಿದಾ!

0 2

Ganavi Laxman: ಟಿ.ಎನ್. ಸೀತಾರಾಮ್ ಅವರ ಧಾರವಾಹಿಗಳು ಎಂದರೆ ವೀಕ್ಷಕರಿಗೆ ವಿಶೇಷ ಆಸಕ್ತಿ ಮತ್ತು ಕುತೂಹಲ ಇರುತ್ತದೆ. ಅವರ ಕಥೆ, ಸಂಭಾಷಣೆ, ಪಾತ್ರಗಳಿಗೆ ಆಯ್ಕೆ ಮಾಡುವ ಕಲಾವಿದರು ಎಲ್ಲವು ಅಚ್ಚುಕಟ್ಟಾಗಿ ಇರುತ್ತದೆ. ಸೀತಾರಾಮ್ ಅವರ ಗರಡಿಯಲ್ಲಿ ಕೆಲಸ ಮಾಡಲು ಎಲ್ಲಾ ಕಲಾವಿದರು ತುದಿ ಗಾಲಲ್ಲಿ ನಿಂತಿರುತ್ತಾರೆ. ಇವರೊಡನೆ ಕೆಲಸ ಮಾಡಿದ ಕಲಾವಿದರು ನಟನೆಯಲ್ಲಿ ಪರಿಪಕ್ವತೆ ಪಡೆಯುವುದು ಖಂಡಿತ. ಇತ್ತೀಚೆಗೆ ಸೀತಾರಾಮ್ ಅವರ ಗರಡಿಯಿಂದ ಬಂದು ಬಹಳ ಜನಪ್ರಿಯತೆ ಪಡೆದಿರುವ ಕಲಾವಿದೆ ಗಾನವಿ ಲಕ್ಷ್ಮಣ್.

ಮಗಳು ಜಾನಕಿ ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಗಾನವಿ ಲಕ್ಷ್ಮಣ್ ಮೊದಲ ಧಾರವಹಿಯಲ್ಲಿಯೇ ಗಂಭೀರವಾದ ಪಾತ್ರ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಮಗಳು ಜಾನಕಿ ಧಾರಾವಾಹಿಯಲ್ಲಿ ಗಾನವಿ ನಿರ್ವಹಿಸಿದ ಜಾನಕಿ ಪಾತ್ರ ಹಲವಾರು ತಿರುವುಗಳಿದ್ದ ಪಾತ್ರವಾಗಿತ್ತು, ಮೊದಲಿಗೆ ಮುಗ್ಧ ಹುಡುಗಿಯಾಗಿದ್ದ ಜಾನಕಿ ನಂತರ ಜೀವನ ಕಲಿಸುವ ಪಾಠಗಳ ಮೂಲಕ ದಿಟ್ಟ ಮಹಿಳೆ ಆಗುತ್ತಾಳೆ. ಪೊಲೀಸ್ ಅಧಿಕಾರಿಯಾಗುತ್ತಾಳೆ. ಈ ಧಾರವಾಹಿಯನ್ನು ಪ್ರತಿದಿನ ಕಿರುತೆರೆಯಲ್ಲಿ ವೀಕ್ಷಿಸಲು ವೀಕ್ಷಕರು ಕಾದಿರುತ್ತಿದ್ದರು.

ಮಗಳು ಜಾನಕಿ ನಂತರ ಗಾನವಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಸ್ಯಾಂಡಲ್ ವುಡ್ ನ ಬ್ರಿಲಿಯಂಟ್ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ನಟಿಸಿದ ಹೀರೋ ಸಿನಿಮಾ ಮೂಲಕ ನಾಯಕಿಯಾದರು ಗಾನವಿ. ಹೀರೋ ಸಿನಿಮಾದಲ್ಲಿ ಇವರ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಹೀರೋ ನಂತರ ಶಿವಣ್ಣ ಅವರೊಡನೆ ವೇದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು ಗಾನವಿ. ವೇದ ಸಿನಿಮಾದಲ್ಲಿ ಗಾನವಿ ಅವರ ಅಭಿನಯಕ್ಕೆ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.

ವೇದ ಸಿನಿಮಾ ಇಂದ ಇವರ ನಟನೆ ಹೇಗಿದೆ ಎನ್ನುವುದು ಸಹ ಎಲ್ಲರಿಗೂ ಗೊತ್ತಾಯಿತು..ವೇದ ಬಳಿಕ ಗಾನವಿ ಅವರು ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದರೆ ಗಾನವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಬಗ್ಗೆ ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಗಾನವಿ ಅವರು ಶೇರ್ ಮಾಡಿರುವ ಸುಂದರವಾದ ಫೋಟೋಗಳು ವೈರಲ್ ಆಗಿದೆ.

ಗಾನವಿ ಅವರು ಕೆಂಪು ಬಣ್ಣದ ಸುಂದರವಾದ ಡ್ರೆಸ್ ಧರಿಸಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಮತ್ತು ರೀಲ್ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಇದೀಗ ಈ ಫೋಟೋಸ್ ವೈರಲ್ ಆಗಿದೆ. ಗಾನವಿ ಅವರ ಫೋಟೋಸ್ ನೋಡಿದ ನೆಟ್ಟಿಗರು ಫಿದಾ ಆಗಿದ್ದು, ಸುಂದರವಾಗಿ ಕಾಣುತ್ತಿದ್ದೀರಿ, ಬೇಗ ಹೊಸ ಸಿನಿಮಾ ಮಾಡಿ ಎಂದು ಕೇಳುತ್ತಿದ್ದಾರೆ, ಹಾಗೆಯೇ ಕಮೆಂಟ್ಸ್ ನಲ್ಲಿ ರೆಡ್ ಹಾರ್ಟ್ ಹಾಕುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.