Garuda Purana: ಜನರನ್ನು ಸ್ವರ್ಗ ಅಥವಾ ನರಕದವರು ಎಂದು ಗುರುತಿಸುವುದು ಹೇಗೆ ಗೊತ್ತಾ?

0 3

Garuda Purana: ಗರುಡ ಪುರಾಣ ಇದು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಒಂದು. ಮನುಷ್ಯರ ಬದುಕಿನ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿಸಿರುವ ಗರುಡ ಪುರಾಣವು, ಒಬ್ಬ ವ್ಯಕ್ತಿಯ ಜನನದಿಂದ ಹಿಡಿದು, ಮರಣದ ವರೆಗು ನಡೆಯಬಹುದಾದ ಎಲ್ಲಾ ವಿಚಾರವನ್ನು ತಿಳಿಸಲಾಗಿದೆ. ಹುಟ್ಟುವ ಪ್ರತಿ ವ್ಯಕ್ತಿಯು ಮರಣ ಹೊಂದಿದ ನಂತರ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತಾನೆ. ಮನುಷ್ಯನ ರೂಪದಲ್ಲಿ ಹುಟ್ಟಿಬರುವ ಪ್ರತಿ ವ್ಯಕ್ತಿಯು ಮೋಕ್ಷ ಪಡೆಯಲು ಏನು ಮಾಡಬೇಕು ಗೊತ್ತಾ?

ಗರುಡ ಪುರಾಣದಲ್ಲಿ ಇರುವ ವಿಚಾರ ಏನು ಎಂದರೆ ಭಗವಾನ್ ವಿಷ್ಣು ಈ ಬೋಧನೆಯನ್ನು ತನ್ನ ವಾಹನವಾದ ಗರುಡನಿಗೆ ಹೇಳುತ್ತಾರೆ. ಈ ಒಂದು ಗ್ರಂಥದಲ್ಲಿ ಮನುಷ್ಯರ ಬದುಕಿಗೆ ಬೇಕಾಗುವ ಎಲ್ಲಾ ಅಂಶಗಳು ಕೂಡ ಅಡಗಿದೆ ಎಂದು ಹೇಳಿದರೆ ತಪ್ಪಲ್ಲ. ಹಾಗೆಯೇ ಬದುಕಿನಲ್ಲಿ ಮೋಕ್ಷವನ್ನು ಪಡೆಯಲು ಒಬ್ಬ ವ್ಯಕ್ತಿ ಏನು ಮಾಡಬೇಕು ಎನ್ನುವುದನ್ನು ಕೂಡ ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಯನ್ನು ಗುರುತಿಸುವುದು ಹೇಗೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

ಇದರ ಅರ್ಥ ಒಬ್ಬ ವ್ಯಕ್ತಿ ನರಕದಿಂದ ಬಂದಿದ್ದಾನಾ ಅಥವಾ ಸ್ವರ್ಗದಿಂದ ಬಂದಿದ್ದಾನಾ ಎನ್ನುವುದನ್ನು ಗುರುತಿಸುವ ಶಕ್ತಿ ಆಗಿರುತ್ತದೆ. ನರಕದಿಂದ ಬಂದಿರುವ ವ್ಯಕ್ತಿಗಳ ನಡತೆ ಹೇಗಿರುತ್ತದೆ ಎಂದು ಮೊದಲು ತಿಳಿಯೋಣ.. ಇನ್ನೊಬ್ಬರನ್ನು ಹೀಯಾಳಿಸುವುದು, ಇನ್ನೊಬ್ಬರಿಗೆ ತೊಂದರೆ ಕೊಟ್ಟು ಅವರ ಮನಸ್ಸಿಗೆ ನೋವಾಗುವ ಹಾಗೆ ನಡೆದುಕೊಳ್ಳುತ್ತಾರೆ. ಈ ಸ್ವಭಾವ ಇರುವವರು ನರಕದಿಂದ ಬಂದವರು ಎಂದು ಹೇಳುತ್ತಾರೆ. ಇಂಥವರು ಹೊಡೆದಾಡುತ್ತಾರೆ, ಇನ್ನೊಬ್ಬರ ಆಸ್ತಿಯ ಬಗ್ಗೆ ಆಸ್ತಿ ಪಡುವುದು, ಮದ್ಯಪಾನ ಸೇವನೆ ಮಾಡುತ್ತಾರೆ. ಬೇರೆಯವರ ಬಗ್ಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ, ಈ ರೀತಿಯ ಜನರು ನರಕದಲ್ಲಿ ಕಷ್ಟಪಟ್ಟವರು ಎಂದು ಹೇಳುತ್ತಾರೆ..

ಸ್ವರ್ಗದಿಂದ ಬಂದವರು ಹೇಗಿರುತ್ತಾರೆ ಎಂದು ಹೇಳುವುದಾದರೆ..
ಇವರ ಬಳಿ ಒಳ್ಳೆಯ ಗುಣ ಇರುತ್ತದೆ, ಎಲ್ಲರನ್ನು ಪ್ರೀತಿಸುತ್ತಾರೆ, ಬೇರೆಯವರ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಇವರು ಯಾವಾಗಲೂ ಸತ್ಯ ಮಾರ್ಗದಲ್ಲಿ ಯೋಚಿಸಿ, ಇನ್ನೊಬ್ಬರ ಒಳಿತಿನ ಬಗ್ಗೆ ಯೋಚಿಸುತ್ತಾರೆ. ಇವರು ವೇದದ ಅಧ್ಯಯನ ಮಾಡುತ್ತಾರೆ, ಗುರುಗಳು ಹೇಳುವ ಮಾತುಗಳನ್ನು ಕೇಳುತ್ತಾರೆ, ಈ ಥರದ ಗುಣವನ್ನು ಹೊಂದಿರುವವರು ಸ್ವರ್ಗದಿಂದ ಬಂದವರು ಎಂದು ಹೇಳುತ್ತಾರೆ.

Leave A Reply

Your email address will not be published.