ಇತ್ತೀಚಿನ ವರ್ಷಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಜಾಸ್ಟ್ಜ್ ಆಗಿರುವುದರಿಂದ ಸಾಮಾನ್ಯ ಜನರಿಗೆ ಗ್ಯಾಸ್ ಸಿಲಿಂಡರ್ ಕೊಂಡುಕೊಳ್ಳುವುದು ಬಹಳ ಕಷ್ಟವಾಗಿದೆ. ಹಣದುಬ್ಬರ ಮತ್ತು ಇನ್ನಿತರ ಕಾರಣಗಳಿಗೆ ದಿನನಿತ್ಯ ಬಳಸುವಂಥ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಏರಿಕೆ ಆಗಿ ಜನ ಸಾಮಾನ್ಯರಿಗೆ ತೊಂದರೆ ಆಗಿದೆ. ಆದರೆ ಈಗ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಆಗಿದ್ದು, ಈ ಬಗ್ಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ..
ಕೇಂದ್ರ ಸರ್ಕಾರವು ಉಜ್ವಲ ಯೋಜನೆಯ ಮೂಲಕ ಬಡತನದಲ್ಲಿ ಇರುವವರಿಗೆ ಗ್ಯಾಸ್ ಸಿಲಿಂಡರ್ ಗಳನ್ನು ನೀಡಿತ್ತು, ಈ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಪಡೆದಿರುವವರಿಗೆ ಈಗ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಉಜ್ವಲ ಯೋಜನೆ ಇಂದ ಸಿಗುವ ಸಬ್ಸಿಡಿ ಹಣವನ್ನು 100 ರೂಪಾಯಿ ಜಾಸ್ತಿ ಮಾಡಲಾಗಿದೆ. 200 ರೂಪಾಯಿ ಇರುತ್ತಿದ್ದ ಸಬ್ಸಿಡಿ ಹಣ ಈಗ 300 ರೂಪಾಯಿಗೆ ಏರಿಕೆ ಆಗಿದ್ದು, ಇದರಿಂದಾಗಿ 14.2 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್ 600 ರೂಪಾಯಿಗೆ ಸಿಗುತ್ತದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬುಧವಾರ ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮದ ಎದುರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ 14.2ಕೆಜಿ ಸಿಲಿಂಡರ್ ನ ಮಾರ್ಕೆಟ್ ಬೆಲೆ 905.50 ರೂಪಾಯಿಗಳು, ಆದರೆ ಅದು 705.50 ರೂಪಾಯಿಗೆ ಸಿಗುತ್ತಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧರಿಸಿದ ನಂತರ 605.50 ರೂಪಾಯಿಗೆ ಸಿಲಿಂಡರ್ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಆಗಸ್ಟ್ ನಲ್ಲಿ ಗೃಹಬಳಕೆಯ ಸಿಲಿಂಡರ್ ನ ಬೆಲೆಯನ್ನು ಇಳಿಕೆ ಮಾಡಲಾಗಿತ್ತು, ಆಗಸ್ಟ್ ನಲ್ಲಿ 200 ರೂಪಾಯಿ ಕಡಿಮೆ ಆಗಿತ್ತು. ಈಗ ಹೊಸದಾಗಿ ಸಬ್ಸಿಡಿ ಇರುವುದರಿಂದ 2023-24ನೇ ವರ್ಷದಲ್ಲಿ ಸರ್ಕಾರಕ್ಕೆ 7,680 ಕೋಟಿ ರೂಪಾಯಿ ಹಣ ಹೆಚ್ಚು ಖರ್ಚು ಬೀಳೆತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಶುರುವಾಗಿದ್ದು 2016ರಲ್ಲಿ, ಹಳ್ಳಿಗಳ ಜನರಿಗೆ ಗ್ಯಾಸ್ ಸಿಲಿಂಡರ್ ನ ಉಪಯೋಗ ಸಿಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಶುರು ಮಾಡಲಾಯಿತು.
ಬಡತನದಲ್ಲಿರಿವ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು, SC/ST ಸಮುದಾಯದವರು, ಪ್ರಧಾನಮಂತ್ರಿ ಆವಾಸ್ ಯೋಜನೆ, ಅಂತ್ಯೋದಯ ಅನ್ನ ಯೋಜನೆ, ಅರಣ್ಯವಾಸಿಗಳು ಹಾಗೂ ಇನ್ನಿತರರು ಈ ಯೋಜನೆಯ ಸೌಲಭ್ಯ ಪಡೆಯಬಹುದು. 2025-26 ರ ಸಾಲಿನ ವರ್ಷದವರೆಗೂ ಈ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಸರ್ಕಾರ ನಿರ್ಧಾರ ಮಾಡಿದೆ. ಈ ಯೋಜನೆಯ ಟಾರ್ಗೆಟ್ 3 ವರ್ಷಗಳಲ್ಲಿ 75 ಲಕ್ಷ ಮನೆಗಳಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡುವುದಾಗಿತ್ತು.
ಆದರೆ ಈಗ ಫಲಾನುಭವಿಗಳ ಸಂಖ್ಯೆ 10.35 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ವಿಧಾನಸಭಾ ಚುನಾವಣೆ ಇನ್ನು 5 ರಾಜ್ಯಗಳಲ್ಲಿ ನಡೆಯಬೇಕಿದ್ದು, ಇದು ನಡೆಯುವುದಕ್ಕಿಂತ ಮೊದಲು ಸರ್ಕಾರವು ಸಬ್ಸಿಡಿ ಹಣವನ್ನು ಹೆಚ್ಚಿಸಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.