Gayatri about Annamalai ತಮಿಳುನಾಡಿನ(Tamilnadu) ರಾಜ್ಯ ರಾಜಕೀಯದಲ್ಲಿ ಒಂದು ಹೊಸ ಸಂಚಲನವು ಈಗ ದೇಶದ ಗಮನವನ್ನು ಸೆಳೆದಿದೆ. ತಮಿಳು ನಾಡಿನ ಬಿಜೆಪಿಯಲ್ಲಿ ಅಸಮಾಧಾನ ಮತ್ತು ಅಸಹನೆಗಳು ಹೊರ ಹೊಮ್ಮಿದೆ. ಬಿಜೆಪಿ ಯಲ್ಲಿ ಇದ್ದಂತಹ ತಮಿಳು ನಟಿ ಗಾಯತ್ರಿ ರಘುರಾಮ್(Gayatri Raghuram) ಅವರು ಬಿಜೆಪಿಗೆ ರಾಜೀನಾಮೆಯನ್ನು ನೀಡಿದ್ದು ಮಾತ್ರವೇ ಅಲ್ಲದೇ ಅವರು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ(Annamalai) ಅವರ ಮೇಲೆ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ನಟಿಯು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಬಿಜೆಪಿ ಅಧ್ಯಕ್ಷರ ಬಗ್ಗೆ ತಮ್ಮ ಬೇಸರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
ತುಳು ನಾಡಿನವರು ಹೆಣ್ಣಿಗೆ ಗೌರವ ಕೊಡ್ತಾರೆ: ಸಾನ್ಯಾ ಜೊತೆಗಿನ ಘಟನೆ ಬಗ್ಗೆ ರೂಪೇಶ್ ಶೆಟ್ಟಿ ಸ್ಪಷ್ಟನೆ

Gayatri about Annamalai ಗಾಯತ್ರಿ ರಘುರಾಮ್(Gayatri RaghuRam) ಅವರು ಬಿಜೆಪಿ ಯಿಂದ ಸುಮಾರು 6 ತಿಂಗಳ ಕಾಲ ಅಮಾನತ್ತುಗೊಂಡಿದ್ದರು. ಆದರೆ ಇದೀಗ ಗಾಯಿತ್ರಿ ಅವರು ತನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಪಕ್ಷದಿಂದ ಅಮಾನತು ಮಾಡಲಾಗಿತ್ತು ಆದ್ದರಿಂದ ತಾನು ಬೇಸತ್ತು ಗಾಯತ್ರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಗಾಯತ್ರಿ ಅವರು ಬಿಜೆಪಿ ಮಹಿಳಾ ಘಟಕದ ನಾಯಕಿಯಾಗಿದ್ದರು. ಆದರೆ ಈಗ ನಟಿ ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.ಪಕ್ಷದಲ್ಲಿ ಸಮಾನ ಅವಾಕಾಶ ಇಲ್ಲ ಅಸಮಾಧಾನ ಹೊರ ಹಾಕಿದ್ದಾರೆ.
Gayatri about Annamalai ಅಲ್ಲದೇ ನಟಿಯು ಅಣ್ಣಾಮಲೈ(Annamalai) ಒಬ್ಬ ಸುಳ್ಳುಗಾರ, ಆತ ಸುಳ್ಳು ಆರೋಪ ಮಾಡುವ ಮೂಲಕ ನನ್ನನ್ನು ಅಮಾನತು ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಹಿಂದೆ ಸೂರ್ಯ ಶಿವ-ಡೈಸಿ ಆಡಿಯೋ ವೈರಲ್ ಆದ ಸಂದರ್ಭದಲ್ಲಿ ನನ್ನ ಮೇಲೆ ಕ್ರಮ ಕೈಗೊಂಡಿದ್ದರು. ಮತ್ತೊಂದು ಸಂದರ್ಭದಲ್ಲಿ ನಾನು ಸಿಎಂ ಸ್ಟಾಲಿನ್(Stalin) ಅಳಿಯ ಶಬರೇಶನ್ ಭೇಟಿ ಮಾಡಿದ್ದಕ್ಕೆ ನನ್ನ ಮೇಲೆ ಮತ್ತೊಮ್ಮೆ ಕ್ರಮ ಕೈಗೊಂಡರು. ನಾನು ಮತ್ತು ಶಬರೇಶನ್ ಇಬ್ಬರು ಒಳ್ಳೆಯ ಫ್ರೆಂಡ್ಸ್ ,ನಾವು ಸಮಾರಂಭವೊಂದರಲ್ಲಿ ಭೇಟಿಯಾಗಿದ್ದಕ್ಕೆ ಈ ರೀತಿ ನನ್ನನ್ನು ಗುರಿಯಾಗಿಸಿದ್ದಾರೆ.
ತುಳು ನಾಡಿನವರು ಹೆಣ್ಣಿಗೆ ಗೌರವ ಕೊಡ್ತಾರೆ: ಸಾನ್ಯಾ ಜೊತೆಗಿನ ಘಟನೆ ಬಗ್ಗೆ ರೂಪೇಶ್ ಶೆಟ್ಟಿ ಸ್ಪಷ್ಟನೆ
ನಟಿಯು ತಮ್ಮ ಟ್ವೀಟ್ ನಲ್ಲಿ, ತಮಿಳುನಾಡಿನ ಬಿಜೆಪಿ ಸರ್ಕಾರದಲ್ಲಿ ಸರಿಯಾದ ಗೌರವ ಮತ್ತು ಸಮಾನ ಅವಕಾಶಗಳು ದೊರೆಯುತ್ತಿಲ್ಲ. ಇದರಿಂದಾಗಿ ನಾನು ಬೇಸತ್ತು ಆತುರದ ನಿರ್ಧಾರವನ್ನು ಮಾಡುತ್ತಿದ್ದೇನೆ. ನಾನು ಪಕ್ಷಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದು, ಇದಕ್ಕೆ ಕಾರಣವೇ ಅಣ್ಣಾಮಲೈ ಎಂದು ಟ್ವೀಟ್ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಗಾಯಿತ್ರಿ ಅವರು ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ.