Ghost: ಶಿವಣ್ಣ ಅವರ ಘೋಸ್ಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

Written by Pooja Siddaraj

Published on:

Ghost: ಕನ್ನಡದ ಬಹುನಿರೀಕ್ಷಿತ ಸಿನಿಮಾ ಘೋಸ್ಟ್, ಈ ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಆಕ್ಟೊಬರ್ 19ರಂದು ಬಿಡುಗಡೆ ಆಗಿದೆ. ಶಿವಣ್ಣ ಮತ್ತು ಶ್ರೀನಿ ಕಾಂಬಿನೇಷನ್ ನ ಈ ಸಿನಿಮಾ ಭಾರಿ ನಿರೀಕ್ಷೆ ಸೃಷ್ಟಿ ಮಾಡಿತ್ತು. ಅದಕ್ಕೆ ತಕ್ಕ ಹಾಗೆಯೇ ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡಿದೆ. ಅಭಿಮಾನಿಗಳು ಶಿವಣ್ಣ ಅವರನ್ನು ನೋಡಿ ಫುಲ್ ಖುಷಿಯಾಗಿದ್ದಾರೆ. ಘೋಸ್ಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಘೋಸ್ಟ್ ಸಿನಿಮಾ ಕನ್ನಡದಲ್ಲಿ ಒಂದು ಹೊಸ ರೀತಿಯ ಪ್ರಯತ್ನ ಎಂದು ಹೇಳಿದರೆ ತಪ್ಪಲ್ಲ. ಹೈಜ್ಯಾಕ್ ಸಿನಿಮಾಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ, ಆದರೆ ಈ ರೀತಿಯ ಸ್ಕ್ರೀನ್ ಪ್ಲೇ ಮತ್ತು ಮೇಕಿಂಗ್ ಇದೇ ಮೊದಲು ಎಂದು ಹೇಳಬಹುದು. ಶಿವಣ್ಣ ಅವರ ಮಾಸ್ ಆಕ್ಷನ್ ಮತ್ತು ಸ್ವಾಗ್ ಅಭಿಮಾನಿಗಳಿಗೆ ಫುಲ್ ವೀಲ್ಸ್ ರೀತಿಯಲ್ಲಿ ಸಿಕ್ಕಿದೆ ಎಂದು ಹೇಳಿದರೆ ತಪ್ಪಲ್ಲ. ಅಭಿಮಾನಿಗಳು ಶಿವಣ್ಣ ಅವರ ಅಭಿನಯ ನೋಡಿ ಫಿದಾ ಆಗಿದ್ದಾರೆ.

ನಿನ್ನೆ ಘೋಸ್ಟ್ ಸಿನಿಮಾ ಆಗಿ, ಮಧ್ಯ ರಾತ್ರಿ ಇಂದಲೇ ಶೋಗಳು ಶುರುವಾಗಿದ್ದು, ಸುಮಾರು 375 ಥಿಯೇಟರ್ ಗಳಲ್ಲಿ 1500 ಕ್ಕಿಂತ ಹೆಚ್ಚು ಶೋಗಳಲ್ಲಿ ಮೊದಲ ದಿನವೇ ಪ್ರದರ್ಶನವಾಗಿದೆ. ಇನ್ನು ಮೊದಲ ದಿನ ಘೋಸ್ಟ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂದು ರಿಪೋರ್ಟ್ ಬಂದಿದ್ದು, ಮೊದಲ ದಿನವೇ ಕರ್ನಾಟಕದಲ್ಲಿ ಘೋಸ್ಟ್ ಸಿನಿಮಾ 2ಕೋಟಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಎರಡನೇ ದಿನ ಕೂಡ ಘೋಸ್ಟ್ ಅಬ್ಬರ ನಿಂತಿಲ್ಲ.

ಇಂದು ಘೋಸ್ಟ್ ಸಿನಿಮಾದ ಕಲೆಕ್ಷನ್ ಸುಮಾರು 1.5 ಕೋಟಿ ಎಂದು ಮಾಹಿತಿ ಸಿಕ್ಕಿದೆ. ಈ ವಾರ ದಸರಾ ಹಬ್ಬ ಸೇರಿದಂತೆ ಸಾಲು ಸಾಲು ರಜೆಗಳಿದ್ದು, ಈ ಕಾರಣಕ್ಕೆ ಘೋಸ್ಟ್ ಸಿನಿಮಾ ಗಳಿಕೆ ಇನ್ನು ಜಾಸ್ತಿ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅಭಿಮಾನಿಗಳು ಘೋಸ್ಟ್ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದು, ಇನ್ನು ಹೆಚ್ಚಿನ ಅಭಿಮಾನಿಗಳು ನೋಡಿ ಅನಂದಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಘೋಸ್ಟ್ ಸಿನಿಮಾ ಈ ವಾರ ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲಿ, ತಮಿಳು ನಾಡಿನಲ್ಲಿ ತಮಿಳು ಭಾಷೆಯಲ್ಲಿ ಕೂಡ ಬಿಡುಗಡೆ ಆಗಿದ್ದು, ಮುಂದಿನ ವಾರ ತೆಲುಗು ಭಾಷೆಯಲ್ಲಿ ಆಂಧ್ರಪ್ರದೇಶದಲ್ಲಿ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಆಗಲಿದೆ. ಇನ್ನು ಕರ್ನಾಟಕದಲ್ಲಿ ಘೋಸ್ಟ್ ಸಿನಿಮಾದ ಹವಾ ನಿಲ್ಲಿಸಲು ಸಾಧ್ಯವಿಲ್ಲ.

Leave a Comment