Girija Lokesh:ಪಿತೃಪಕ್ಷಕ್ಕೆ ಅಣ್ಣಾವ್ರು, ಅಪ್ಪು, ಚಿರು ಫೋಟೋ ಇಟ್ಟು ಪೂಜಿಸಿದ ಗಿರಿಜಾ ಲೋಕೇಶ್, ವಿಷ್ಣುದಾದ ಶಂಕ್ರಣ್ಣನ ಫೋಟೋ ಯಾಕಿಲ್ಲ?

Written by Pooja Siddaraj

Published on:

Girija Lokesh: ಪಿತೃಪಕ್ಷ ಮಾಸ, ಮಹಾಲಯ ಅಮಾವಾಸ್ಯೆ ಬಂತು ಎಂದರೆ ಎಲ್ಲರ ಮನೆಯಲ್ಲಿ ಪೂಜೆ ಮಾಡಿ, ತಮ್ಮ ಪೂರ್ವಿಕರಿಗೆ ತರ್ಪಣ ಬಿಡುತ್ತಾರೆ. ಈ ಮೂಲಕ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಅನಾದಿ ಕಾಲದಿಂದ ಇದು ನಡೆದುಕೊಂಡು ಬಂದಿರುವ ಸಂಪ್ರದಾಯ. ಸಾಮಾನ್ಯ ಜನರು ಸೆಲೆಬ್ರಿಟಿಗಳು ಎಲ್ಲರೂ ಕೂಡ ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯ ಆಚರಣೆ ಮಾಡುತ್ತಾರೆ. ಅದೇ ರೀತಿ ನಟ ಸೃಜನ್ ಲೋಕೇಶ್ ಅವರ ಮನೆಯಲ್ಲಿ ಕೂಡ ಪಿತೃಪಕ್ಷದ ಆಚರಣೆ ನಡೆದಿದೆ.

ಸುಮಾರು 130 ಜನರಿಗೆ ಅವರ ಮನೆಯಲ್ಲಿ ತರ್ಪಣ ಬಿಟ್ಟಿದ್ದಾರೆ. ಮಹಾಲಯ ಅಮಾವಾಸ್ಯೆ ಆಚರಣೆಯ ವಿಡಿಯೋ ಒಂದನ್ನು ಸೃಜನ್ ಲೋಕೇಶ್ ಅವರು ಶೇರ್ ಮಾಡಿಕೊಂಡಿದ್ದಾರೆ. ಕೆಲವರು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಅಣ್ಣಾವ್ರು, ಅಪ್ಪು, ಚಿರು, ಜಯಂತಿ ಅವರ ಫೋಟೋ ಇದೆ, ವಿಷ್ಣುವರ್ಧನ್ ಶಂಕರ್ ನಾಗ್ ಅವರ ಫೋಟೋ ಯಾಕಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ..

ಜನರಲ್ಲಿ ಮೂಡಿದ್ದ ಈ ಪ್ರಶ್ನೆಗೆ ಖುದ್ದು ಗಿರಿಜಾ ಲೋಕೇಶ್ ಅವರೇ ಉತ್ತರ ನೀಡಿದ್ದಾರೆ. ಲೋಕೇಶ್ ಅವರು ಇಹಲೋಕ ತ್ಯಜಿಸಿದ್ದು 2004ರ ಆಕ್ಟೊಬರ್ 14ರಂದು, ಅದೇ ದಿನ ಮಹಾಲಯ ಅಮಾವಾಸ್ಯೆ ಕೂಡ ಬಂದಿದ್ದು, ಸೃಜನ್ ಲೋಕೇಶ್ ಅವರ ಮನೆಯಲ್ಲಿ ವಿಶೇಷ ಪೂಜೆ ಮಾಡಿ, 130 ಜನರಿಗೆ ತರ್ಪಣ ಬಿಡಲಾಗಿದೆ. “ನಮ್ಮ ಮನೆಗೆ ಆಪ್ತವಾಗಿರುವವರ ಫೋಟೋವನ್ನು ಇಟ್ಟು ಪೂಜೆ ಮಾಡುತ್ತಿದ್ದೇವೆ.. ಬಹಳ ಹಿಂದಿನಿಂದ ನಾವು ಪೂಜೆ ಮಾಡುತ್ತಿರುವುದು ಇದೇ ರೀತಿ.

ನಮ್ಮ ಯಜಮಾನರು ಲೋಕೇಶ್ ಅವರ ತಂದೆ ಸುಬ್ಬಯ್ಯ ನಾಯ್ಡು ಅವರ ನಾಟಕದ ಕಂಪನಿಯಲ್ಲಿ ಡಾ.ರಾಜ್ ಕುಮಾರ್ ಅವರು ಕೆಲಸ ಮಾಡ್ತಿದ್ರು, ಆ ಕಾರಣಕ್ಕೆ ಅವರ ಕುಟುಂಬ ನಮಗೆ ತುಂಬಾ ಆಪ್ತ. ಅಪ್ಪು ಮತ್ತು ಚಿರು ನನ್ನ ಮಕ್ಕಳಿಗೆ ತುಂಬಾ ಕ್ಲೋಸ್ ಆಗಿದ್ದರು. ಜಯಂತಿ ಅವರು ನನಗೆ ತುಂಬಾ ಕ್ಲೋಸ್. ಈ ರೀತಿ ನಮ್ಮ ಮನೆಯವರಿಗೆ ಆಪ್ತವಾಗಿದ್ದವರ ಫೋಟೋಗಳನ್ನು ಇಟ್ಟಿದ್ದೇವೆ. ಹಾಗೆ ಹೇಳೋದಾದರೆ ತೂಗುದೀಪ ಶ್ರೀನಿವಾಸ್ ಅವರು ನನಗೆ ಸಂಬಂಧಿ ಆಗಬೇಕು.

ಅವರ ಜೊತೆಗೆ ನಮ್ಮ ಮಾವನವರು, ಚಿಕ್ಕಪ್ಪ ಮತ್ತು ಇನ್ನಿತರ ಫೋಟೋಗಳಿವೆ. ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ಅವರ ಸಿನಿಮಾಗಳಲ್ಲಿ ಅವರ ಜೊತೆಯಾಗಿ ನಟಿಸಿದ್ದೇವೆ, ಅವರು ನಮ್ಮ ಕೋ ಸ್ಟಾರ್ ಗಳು. ಈ ದಿನ ನಾವು 130 ಜನರಿಗೆ ತರ್ಪಣ ನೀಡುತ್ತೇವೆ. ಆ ರೀತಿ ನೀವು ಹೇಳುವುದಾದರೆ, ಪಾರ್ವತಮ್ಮನವರ ಫೋಟೋ ಕೂಡ ಇಡಬೇಕಿತ್ತು ಅಲ್ವಾ? ಇಲ್ಲಿ ನಾವು ಇಹಲೋಕ ತ್ಯಜಿಸಿರುವ ಕನ್ನಡದ ಎಲ್ಲಾ ಕಲಾವಿದರ ಫೋಟೋ ಇಟ್ಟು ಪೂಜೆ ಮಾಡುತ್ತಿಲ್ಲ.

ನಮ್ಮ ಮನೆಗೆ ಆಪ್ತವಾಗಿರುವವರ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದೇವೆ. ಪೂಜೆ ಮಾಡೋಕೆ ಬರುವ ಪುರೋಹಿತರು 130 ಹೆಸರು ಹೇಳಿ, ತರ್ಪಣ ಬಿಡಲು 3 ರಿಂದ 4 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಎಲ್ಲರ ಫೋಟೋ ಇಡೋದಕ್ಕೆ ಜಾಗ ಕೂಡ ಇಲ್ಲ. ಲೋಕೇಶ್ ಅವರು ಇರುವಾಗಲೇ ಕೇಳಿ ಕೆಲವು ಫೋಟೋಗಳನ್ನು ಇಟ್ಟಿದ್ದೆ, ರಾಜರಾಮ್ ಅವರು ನಮ್ಮ ಮನೆಗೆ ತುಂಬಾ ಆಪ್ತರು ಅವರ ಫೋಟೋ ಇಟ್ಟಿಲ್ಲ ಅಂದ್ರೆ ಅವರನ್ನ ಮರೆತಿದ್ದೀವಿ ಅಂತ ಅರ್ಥ ಅಲ್ಲ..” ಎಂದು ಹೇಳಿದ್ದಾರೆ ಗಿರಿಜಾ ಲೋಕೇಶ್.

Leave a Comment