ಕನಸಲ್ಲಿ ಏನು ಕಂಡರೆ ಶುಭ!
Good luck if you see anything in your dream :ನಿದ್ರಿಸುವ ಪ್ರತಿ ವ್ಯಕ್ತಿಗೂ ಕನಸುಗಳು ಬರುತ್ತವೆ. ಕೆಲವು ಕನಸುಗಳು ಮುಂಬರುವ ಜೀವನದಲ್ಲಿ ಹೊಳೆತು ಕೆಡುಕುಗಳ ಸಂಕೇತಗಳು ಆಗಿರುತ್ತವೆ.ಯಾವ ಕನಸು ಬಂದರೆ ಒಳ್ಳೆಯದು ಆಗುತ್ತದೆ ಮತ್ತು ಯಾವ ಕನಸು ಧನಂತ್ಮಕ ಕ್ಷಣಗಳನ್ನು ತಂದು ಜೀವನವನ್ನು ಬದಲಾಯಿಸುತ್ತದೆ ಮತ್ತು ಇನ್ನು ಕೆಲವು ಕನಸುಗಳು ಜೀವನದಲ್ಲಿ ಮುಂದೆ ಆಗುವ ಕೆಡುಕಿನ ಸೂಚನೆಯನ್ನು ತಿಳಿಸಿಕೊಡುತ್ತವೆ. ಪ್ರತಿ ಮನುಷ್ಯನಿಗೂ ಕನಸು ಬಂದೆ ಬರುತ್ತವೆ. ಕೆಲ ಕನಸುಗಳು ಭಾವನಾತ್ಮಕವಾಗಿ ಇದ್ದರೆ ಇನ್ನು ಕೆಲವು ಕನಸುಗಳು ಸಂತಸವನ್ನು ವ್ಯಕ್ತಪಡಿಸುತ್ತವೆ.
ಗಂಡು ಮಕ್ಕಳಿಗೆ ಕನಸಿನಲ್ಲಿ ಕಪ್ಪೆ ಬಂದರೆ ಶುಭ ಸಂದೇಶ ಎಂದು ಹೇಳಲಾಗುತ್ತದೆ.ಮುಂಬರುವ ದಿನಗಳಲ್ಲಿ ಧನಾತ್ಮಕ ಯೋಗ ಕೂಡಿ ಬರುತ್ತದೆ. ಅತೀ ಶೀಘ್ರದಲ್ಲಿ ನೀವು ಶ್ರೀಮಂತರಾಗುತ್ತೀರಿ. ಮುಂಬರುವ ದಿನಗಳಲ್ಲಿ ಒಳ್ಳೆಯ ದಿನ ಶುರು ಆಗುತ್ತದೇ ಎಂದು ಅರ್ಥ. ಇನ್ನು ಮದುವೆ ಆಗದೆ ಇರುವ ಹೆಣ್ಣು ಮಕ್ಕಳಿಗೆ ಕಪ್ಪೆ ಕನಸಿನಲ್ಲಿ ಬಂದರೆ ಅಂತವರಿಗೆ ಒಳ್ಳೆಯ ಮನೆತನದಲ್ಲಿ ಮದುವೆ ಆಗಲಿದೆ ಎಂದು ಸೂಚಿಸುತ್ತದೆ.
ಇನ್ನು ಮದುವೆ ಆಗಿರುವ ಹೆಣ್ಣು ಮಕ್ಕಳಿಗೆ ಕನಸಿನಲ್ಲಿ ಕಪ್ಪೆ ಕಂಡರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಆಗಮನವಾಗಲಿದೆ ಎಂದು ನೀವು ಭಾವಿಸಬೇಕು. ಕನಸಿನಲ್ಲಿ ಕಪ್ಪೆ ಶುಭ ಸಂಕೇತ ಎಂದು ನೀವು ಭಾವಿಸಿ.
ಇನ್ನು ಕನಸಿನಲ್ಲಿ ದೇವರ ಪೂಜೆ ಮಾಡಿದ ಹಾಗೆ ಕನಸು ಕಂಡರೆ ಇದು ಕೂಡ ಶುಭಕರ ಕನಸು ಭಾವಿಸಬೇಕು. ನಿಮ್ಮ ಬದುಕು ಬೆಳಕಿನ ಕಡೆ ಸಾಗಲಿದೆ ಎಂದು ಸೂಚಿಸುತ್ತದೆ. ನೀವು ಮಾಡುವ ಪೂಜೆ ಮತ್ತು ನಿಮ್ಮ ಭಕ್ತಿಗೆ ದೇವರು ಪ್ರಸನ್ನಾಗಿದ್ದಾನೆ ಎಂದು ಅರ್ಥ.
ಇನ್ನು ಹೆಣ್ಣು ಮಕ್ಕಳಿಗೆ ಪೂಜಿಸುವ ದೇವರು ಬಂದರೆ ಅವರ ಕಷ್ಟಗಳು ದೂರ ಆಗಲಿವೆ. ಮನೆಯಲ್ಲಿ ಧನಂತ್ಮಕದ ಅರಿವು ಹೆಚ್ಚಾಗುತ್ತದೆ ಎಂದು ಸ್ವಪ್ನ ಶಾಸ್ತ್ರದ ಉಲ್ಲೇಖಗಳನ್ನು ನಾವು ಅರ್ಥೈಸಿಕೊಳ್ಳಬೇಕು.
ಇನ್ನು ಕನಸಿನಲ್ಲಿ ಶವ ಯಾತ್ರೆ ಬಂದರು ಕೂಡ ಶುಭಕರವೇ. ಯಾಕಂದ್ರೆ ಕನಸಲ್ಲಿ ಶವ ಯಾತ್ರೆ ಬಂದರೆ ಭಯ ಆಗುತ್ತಾದೇ. ಭಯದ ಯೋಚನೆಯಲ್ಲಿ ಇರುತ್ತೇವೆ ಮತ್ತು ಆಧಾರ ಲಾಭ ಏನು ಎನ್ನುವುದು ಯಾರು ಸಹ ತಿಳಿದುಕೊಳ್ಳುವುದಿಲ್ಲ.ಒಂದು ವೇಳೆ ಶವ ಯಾತ್ರೆ ಕನಸು ಬಂದರೆ ನೀವು ಅಂದುಕೊಂಡಿದ್ದು ನೆರವೇರುತ್ತದೆ ಎಂದು ಅರ್ಥ. ನಿಮ್ಮ ಮನೆಯಲ್ಲಿ ಎಲ್ಲಾರು ಒಟ್ಟಾಗಿ ಇದ್ದು ಕುಟುಂಬದ ಮಂಗಳಕಾರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗುತ್ತೀರಾ ಅನ್ನುವ ಸಂಕೇತ ಇದಾಗಿರುತ್ತದೆ.