ನಟ ಶಾರೂಖ್ ಖಾನ್(Shah Rukh Khan) ತಮ್ಮ ಹೊಸ ಸಿನಿಮಾಗಳು ಬಂದಾಗಲೆಲ್ಲಾ ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ನೀಡುತ್ತಿದ್ದರು. ಬೇರೆ ಬೇರೆ ನಗರಗಳಿಗೆ ಭೇಟಿ ನೀಡಿ ಪ್ರಚಾರವನ್ನು ಮಾಡುತ್ತಿದ್ದರು. ಆದರೆ ಈ ಬಾರಿ ಅವರು ಬೇರೆಯದೇ ತಂತ್ರವನ್ನು ಬಳಸಿದಂತೆ ಕಾಣುತ್ತಿದೆ. ಪಠಾಣ್(Pathan) ಸಿನಿಮಾ ಬಿಡುಗಡೆಗೆ ಮೊದಲು ಎಬ್ಬಿಸಿದ ವಿ ವಾ ದ ದ ಗಳಿಂದಾಗಿ ನಟ ಯಾವುದೇ ಮಾದ್ಯಮದ ಮುಂದೆ ಬಂದಿರಲಿಲ್ಲ, ಸಿನಿಮಾ ಕುರಿತಾಗಿ ಮಾತನಾಡಿರಲಿಲ್ಲ. ಆದರೆ ಈಗ ಸಿನಿಮಾ ಬಿಡುಗಡೆ ನಂತರ ಅವರು ಮಾದ್ಯಮಗಳ ಮುಂದೆ ಬಂದಿದ್ದಾರೆ. ಪಠಾಣ್ ಚಿತ್ರತಂಡ ಮಾದ್ಯಮಗಳ ಮುಂದೆ ಸಂಭ್ರಮವನ್ನು ಶೇರ್ ಮಾಡಿಕೊಂಡಿದೆ.

ಯಶಸ್ಸಿನ ನಗೆ ಬೀರಿ ಮಾದ್ಯಮಗಳ ಮುಂದೆ ಬಂದ ನಟ ಶಾರೂಖ್ ಖಾನ್ ಬಾಯ್ಕಾಟ್(Boycott Pathan) ವಿಚಾರವಾಗಿ ಮಾತನಾಡಿದ್ದಾರೆ. ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ಸಾಕಷ್ಟು ವಿ ವಾ ದವನ್ನು ಸೃಷ್ಟಿಸಿತ್ತು. ದೀಪಿಕಾ(Deepika Padukone) ಈ ಹಾಡಿನಲ್ಲಿ ಧರಿಸಿದ್ದ ಕೇಸರಿ ಬಣ್ಣದ ಬಿ ಕಿ ನಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅದರಿಂದಲೇ ಸಿನಿಮಾ ಬಾಯ್ಕಾಟ್ ಮಾಡಬೇಕೆನ್ನುವ ಕೂಗು ದೊಡ್ಡದಾಗಿತ್ತು. ಆದರೆ ಈಗ ಸಿನಿಮಾ ಬಿಡುಗಡೆ ಆಗಿದೆ, ಯಶಸ್ಸನ್ನು ಕಂಡಿದೆ. ಈಗ ಶಾರೂಖ್ ಖಾನ್ ಬಾ ಯ್ಕಾ ಟ್ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಹೌದು, ಬಾಯ್ಕಾಟ್ ವಿಚಾರವಾಗಿ ಮಾತನಾಡಿದ ನಟ ಶಾರುಖ್, “ಕೆಟ್ಟ ಕೆಲಸ (ಸಿನಿಮಾ) ಅಥವಾ ಒಳ್ಳೆಯ ಕೆಲಸ ಮಾಡಲಿ, ಸಿನಿಮಾ ಮಾಡುವವರ ಉದ್ದೇಶ ಯಾವಾಗಲೂ ಮನರಂಜನೆಯನ್ನು ನೀಡುವುದೇ ಆಗಿರುತ್ತದೆ” ಎನ್ನುವ ಮಾತನ್ನು ಹೇಳಿದ್ದಾರೆ. ಮುಖ್ಯವಾದ ವಿಷಯ ಏನೆಂದರೆ ನಾವು ಸಿನಿಮಾವನ್ನು ಮಾಡುವುದು ಖುಷಿಯನ್ನು ಹಂಚಲು.
ನಾವು ತಪ್ಪನ್ನು ಮಾಡುತ್ತೇವೆ, ಆದರೆ ಅದರ ಹಿಂದಿನ ಉದ್ದೇಶ ನಮಗೆ ಸ್ಪಷ್ಟವಾಗಿದೆ. ಸಿನಿಮಾದಲ್ಲಿ ಕೆಟ್ಟ ವ್ಯಕ್ತಿಯಾಗಿ ಕಾಣಿಸಿಕೊಂಡರೂಖುಷಿ, ಪ್ರೀತಿ, ದಯೆ ಮತ್ತು ಸಹೋದರತ್ವವನ್ನು ಹರಡುವುದು ನಮ್ಮ ಉದ್ದೇಶ ಆಗಿರುತ್ತದೆ.
ನಾವು ಯಾರೂ ಸಹಾ ಕೆಟ್ಟವರಲ್ಲ. ಎಲ್ಲರನ್ನೂ ಖುಷಿ ಪಡಿಸಲು ನಾವು ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತೇವೆ. ಸಿನಿಮಾ ಮೂಲಕ ಯಾರ ಭಾವನೆಯನ್ನೂ ಸಹಾ ನೋ ಯಿ ಸುವ ಉದ್ದೇಶ ನಮಗಿರುವುದಿಲ್ಲ. ದೀಪಿಕಾ ಪಡುಕೋಣೆ ಅವರು ಅಮರ್, ನಾನು ಅಕ್ಬರ್, ಜಾನ್ ಅಬ್ರಾಹಂ ಅವರು ಆ್ಯಂಥೋನಿ. ಇದು ಅಮರ್, ಅಕ್ಬರ್ ಆ್ಯಂಥೋನಿ ಎನ್ನುವ ಮೂಲಕ ಶಾರೂಖ್ ಖಾನ್ ನಾವೆಲ್ಲವರೂ ಒಂದೇ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಸಿನಿಮಾಗಳ ಮೇಲೆ ನೀವು ತೋರುವ ಪ್ರೀತಿಗಿಂತ ಉತ್ತಮವಾದುದು ಯಾವುದೂ ಇಲ್ಲ ಎಂದಿದ್ದಾರೆ.