Gouthami Jadhav: ಸತ್ಯ ಧಾರವಾಹಿ ನಟಿ ಗೌತಮಿ ಜಾಧವ್ ಅವರ ರಿಯಲ್ ಲೈಫ್ ಗಂಡ ಯಾರು ಗೊತ್ತಾ?

0 32

Gouthami Jadhav: ಕಿರುತೆರೆ ಧಾರಾವಾಹಿಗಳು ಮನೆಯಲ್ಲಿ ಕುಳಿತಿರುವ ವೀಕ್ಷಕರಿಗೆ ಒಳ್ಳೆಯ ಮನರಂಜನೆ ನೀಡುತ್ತದೆ. ದಿನವೆಲ್ಲ ಕೆಲಸ ಮಾಡಿ ಸಂಜೆ ಕುಳಿತು ಧಾರಾವಾಹಿ ವೀಕ್ಷಿಸುವುದು ಮನೆಯಲ್ಲಿರುವ ಮಹಿಳೆಯರಿಗೆ ಮತ್ತು ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇಬ್ಬರಿಗೂ ಒಳ್ಳೆಯ ಟೈಮ್ ಪಾಸ್. ಸಂಜೆ ಸಮಯದಲ್ಲಿ ಟಿವಿ ನೋಡಲು ಕುಳಿತಾಗ ಮನಸ್ಸಿಗೆ ಇಷ್ಟವಾಗುವಂತಹ ಕಥೆ ಇರುವ ಧಾರಾವಾಹಿ ಇದ್ದರೆ ನೋಡಲು ಸಂತೋಷವಾಗುತ್ತದೆ. ಇದೆ ರೀತಿ ಆರಂಭವಾಗಿ ವೀಕ್ಷಕರಿಂದ ಮೆಚ್ಚುಗೆ ಪಡೆದಿರುವ ಧಾರಾವಾಹಿಗಳಲ್ಲಿ ಒಂದು ಸತ್ಯ.

ಜೀಕನ್ನಡ ವಾಹಿನಿಯ ಸತ್ಯ, ಅಪ್ಪಟ ಮಹಿಳಾ ಪ್ರಧಾನವಾಗಿರುವ ಧಾರಾವಾಹಿ. ಅನ್ಯಾಯದ ವಿರುದ್ಧ ಸಿಡಿದೇಳುವ ಹುಡುಗಿ ಸತ್ಯ. ಆರಂಭದಲ್ಲಿ ಸತ್ಯ ಹೇರ್ ಸ್ಟೈಲ್ ಹುಡುಗರಂತೆ ಇತ್ತು ಹಾಗೂ ಬಟ್ಟೆ ಧರಿಸುವುದು ಕೂಡ ಹುಡುಗನ ಹಾಗೆ. ಗಂಡಿನ ಹಾಗೆ ದುಡಿದು ತಂದು ಮನೆಯ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದಳು. ಈಗ ತಾನು ಇಷ್ಟಪಟ್ಟ ಅಮುಲ್ ಬೇಬಿ ಜೊತೆಗೆ ಮದುವೆಯಾಗಿ, ಹೊಸ ಚಾಲೆಂಜ್ ಗಳನ್ನು ಫೇಸ್ ಮಾಡುತ್ತಿದ್ದಾಳೆ. ಸತ್ಯ ಧಾರಾವಾಹಿಯಲ್ಲಿ ಹಲವಾರು ಗೌರವಾನ್ವಿತ ಕಲಾವಿದರ ದಂಡೆ ಇದೆ.

ಸತ್ಯ ಧಾರಾವಾಹಿಯ ಮೂಲಕ ನಟಿ ಗೌತಮಿ ಜಾಧವ್ ಅವರು ಕೆಲ ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಗೆ ಬಂದಿದ್ದಾರೆ. 2012 ರಲ್ಲಿ ಪ್ರಸಾರವಾಗಿದ್ದ ನಾಗಪಂಚಮಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಂತರ ಆದ್ಯ, ಕಿನಾರೆ ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ, ತಮಿಳು ಸಿನಿಮಾ ಒಂದರಲ್ಲಿ ಕೂಡ ಗೌತಮಿ ಜಾಧವ್ ನಟಿಸಿದ್ದಾರೆ. ಇದೀಗ ಸತ್ಯ ಧಾರವಾಹಿ ಮೂಲಕ ಒಂದು ಗ್ಯಾಪ್ ನಂತರ ಕಿರುತೆರೆಗೆ ವಾಪಸ್ ಬಂದಿದ್ದಾರೆ ಗೌತಮಿ.

ಸತ್ಯ ಧಾರಾವಾಹಿಯ ಮೂಲಕ ಇವರು ಕಿರುತೆರೆಯ ಸೆನ್ಸೇಷನ್ ಆಗಿದ್ದಂತೂ ತಪ್ಪಲ್ಲ. ಗೌತಮಿ ಅವರು ನಟಿಯಾಗಿ ಹೆಸರು ಮಾಡಿದ್ದಾರೆ. ಆದರೆ ಇವರ ಪರ್ಸನಲ್ ಲೈಫ್ ಬಗ್ಗೆ ಗೊತ್ತಾ? ಗೌತಮಿ ಅವರಿಗೆ ಮದುವೆಯಾಗಿ ಪತಿ ಜೊತೆ ಸಂತೋಷವಾದ ಜೀವನ ನಡೆಸುತ್ತಿದ್ದಾರೆ. ಇವರ ಪತಿಯ ಹೆಸರು ಅಭಿಷೇಕ್ ಕಾಸರಗೋಡ್. ಅಭಿಷೇಕ್ ಕಾಸರಗೋಡ್ ಅವರು ಕೆಲವು ಕನ್ನಡ ಸಿನಿಮಾಗಳಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.

ಕನ್ನಡದ ಮಾಯಾಬಜಾರ್ , ಗ್ರಾಮ, ಆಪರೇಷನ್ ಅಲಮೇಲಮ್ಮ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಅಭಿಷೇಕ್ ಕಾಸರಗೋಡ್. ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್ ಅವರೊಡನೆ ಕೆಲಸ ಮಾಡಿದ್ದಾರೆ.

Leave A Reply

Your email address will not be published.