ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಭಾಗ್ಯಲಕ್ಷ್ಮಿ, ಈ ಧಾರವಾಹಿ ಜನರು ಬಹಳ ಇಷ್ಟಪಟ್ಟು ನಡೆಸುತ್ತಿದ್ದಾರೆ. ಈಗ ಭಾಗ್ಯ ಓದುವುದಕ್ಕೆ ಶಾಲೆಗೆ ಸೇರಿದ್ದು, ಮೊದಲಿದ್ದ ಹಾಗೆ ವೀಕ್ ಆಗಿಲ್ಲ ಗಂಡನ ಬಳಿ ಧೈರ್ಯವಾಗಿ ಮಾತನಾಡುತ್ತಿದ್ದಾಳೆ, ಈ ಟ್ವಿಸ್ಟ್ ಅನ್ನು ಜನರು ಕೂಡ ಇಷ್ಟಪಡುತ್ತಿದ್ದಾರೆ. ಇಷ್ಟು ದಿವಸಗಳ ಭಾಗ್ಯ ಎಲ್ಲವನ್ನು ಸಹಿಸಿಕೊಂಡಿದ್ದಳು, ಆದರೆ ಈಗ ಭಾಗ್ಯ ಪಾತ್ರದಲ್ಲಿ ಬದಲಾವಣೆ ಕಂಡುಬರುತ್ತಿದೆ.
ಧಾರವಾಹಿ ಈಗ ಒಳ್ಳೆಯ ಹಂತದಲ್ಲಿ ಸಾಗುತ್ತಿದೆ. ಭಾಗ್ಯಲಕ್ಷ್ಮಿ ಧಾರವಾಹಿಯ ಮುಖ್ಯಪಾತ್ರಗಳು ಭಾಗ್ಯ, ತಾಂಡವ್, ಕುಸುಮ ಮತ್ತು ಶ್ರೇಷ್ಠ ಪಾತ್ರ. ತಾಂಡವ್ ಗೆ ಮದವೆಯಾಗಿ ಇಬ್ಬರು ಮಕ್ಕಳಿದ್ದರು ಕೂಡ ಅವನನ್ನು ಪ್ರೀತಿಸಿ, ಅವನ ಜೊತೆಗೆ ಮದುವೆ ಆಗಬೇಕು ಎನ್ನುವ ಹುಡುಗಿ ಶ್ರೇಷ್ಠ. ಇತ್ತ ತಾಂಡವ್ ಗೆ ಕೂಡ ಹೆಂಡತಿ ಭಾಗ್ಯಳನ್ನು ಕಂಡರೆ ಇಷ್ಟವಿಲ್ಲ, ಶ್ರೇಷ್ಠ ಳ ಮೇಲೆ ಅವನಿಗೆ ಪ್ರೀತಿ ಇದ್ದು, ಹೇಗಾದರು ಮಾಡಿ ಶ್ರೇಷ್ಠಳನ್ನು ಮದುವೆ ಆಗಬೇಕು ಎಂದು ತಾಂಡವ್ ಕೂಡ ಅಂದುಕೊಂಡಿರುತ್ತಾನೆ.
ಇತ್ತ ಭಾಗ್ಯಳಿಗೆ ತನ್ನ ಗಂಡ ಮತ್ತೊಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಆಕೆಯ ಜೊತೆಗೆ ಮದುವೆ ಆಗಬೇಕು ಎಂದುಕೊಂಡಿದ್ದಾನೆ ಎನ್ನುವುದು ಗೊತ್ತಿಲ್ಲ. ಧಾರವಾಹಿಯಲ್ಲಿ ಒಂದು ರೀತಿ ಶ್ರೇಷ್ಠ ಪಾತ್ರ ವಿಲ್ಲನ್ ರೀತಿ ಇದೆ ಎಂದರೆ ತಪ್ಪಲ್ಲ. ಈ ಪಾತ್ರದಲ್ಲಿ ಮೊದಲಿಗೆ ನಟಿಸುತ್ತಿದ್ದವರು ಗೌತಮಿ, ಇವರನ್ನು ಜನರು ಕೂಡ ಮೆಚ್ಚಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ಗೌತಮಿ ಅವರು ಭಾಗ್ಯಲಕ್ಷ್ಮಿ ಧಾರವಾಹಿಯಿಂದ ಹೊರಬಂದಿದ್ದರು..
ಇದೀಗ ಗೌತಮಿ ಅವರು ತಾವು ಭಾಗ್ಯಲಕ್ಷ್ಮಿ ಧಾರವಾಹಿ ಇಂದ ಹೊರಬಂದಿದ್ದು ಯಾಕೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಗೌತಮಿ ಅವರು ಈಗ ತುಂಬು ಗರ್ಭಿಣಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ಸ್ಟಾಗ್ರಾಮ್ ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ಶೇರ್ ಮಾಡಿ, ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಬಳಿಕ ಗೌತಮಿ ಅವರು ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ.
ಅವುಗಳಲ್ಲಿ ತಾವು ಧಾರವಾಹಿ ಇಂದ ಹೊರಬರುವುದಕ್ಕೆ ನಿಜವಾದ ಕಾರಣ ಏನು ಎಂದು ತಿಳಿಸಿದ್ದು, ಮಗುವಿನ ಪ್ಲಾನ್ ಇದ್ದ ಕಾರಣದಿಂದಲೇ ಗೌತಮಿ ಅವರು ಭಾಗ್ಯಲಕ್ಷ್ಮಿ ಧಾರವಾಹಿ ಇಂದ ಹೊರಬಂದಿದ್ದರು ಎನ್ನುವುದನ್ನು ತಿಳಿಸಿದ್ದಾರೆ. ಇತ್ತ ಅಭಿಮಾನಿಗಳು ಗೌತಮಿ ಅವರು ಹಂಚಿಕೊಂಡಿರುವ ಗುಡ್ ನ್ಯೂಸ್ ಗೆ ಅವರಿಗೆ ಶುಭಾಶಯ ತಿಳಿಸುತ್ತಿದ್ದು, ತಾಯ್ತನವನ್ನು ಎಂಜಾಯ್ ಮಾಡಿ ಎಂದು ಹೇಳುತ್ತಿದ್ದಾರೆ.
ಇನ್ನು ಗೌತಮಿ ಅವರ ಬಗ್ಗೆ ಹೇಳುವುದಾದರೆ, ಇವರು ಬಹಳ ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಚಿ ಸೌ ಸಾವಿತ್ರಿ ಧಾರವಾಹಿ ಮೂಲಕ ಗೌತಮಿ ಅವರು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 3ನಲ್ಲಿ ಸಹ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸದ್ದು ಮಾಡಿದ್ದರು. ಇತ್ತೀಚೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ ಇಂದಲೂ ಕಿರುತೆರೆಯಲ್ಲಿ ಹೆಸರು ಮಾಡಿದ್ದರು.