Gowthami Gowda: ಭಾಗ್ಯಲಕ್ಷ್ಮಿ ಧಾರವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಗೊತ್ತಾ?

0 17

Gowthami Gowda: ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಭಾಗ್ಯಲಕ್ಷ್ಮಿ, ಈ ಧಾರವಾಹಿ ಜನರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಈ ಧಾರವಾಹಿಯಲ್ಲಿ ಒಂದು ರೀತಿ ಶ್ರೇಷ್ಠ ಪಾತ್ರ ವಿಲ್ಲನ್ ರೀತಿ ಇದೆ ಎಂದರೆ ತಪ್ಪಲ್ಲ. ಶ್ರೇಷ್ಟ ಪಾತ್ರದಲ್ಲಿ ಮೊದಲಿಗೆ ನಟಿಸುತ್ತಿದ್ದವರು ಗೌತಮಿ, ಇವರನ್ನು ಜನರು ಕೂಡ ಮೆಚ್ಚಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ಗೌತಮಿ ಅವರು ಭಾಗ್ಯಲಕ್ಷ್ಮಿ ಧಾರವಾಹಿಯಿಂದ ಹೊರಬಂದಿದ್ದರು.

ಗೌತಮಿ ಅವರು ಮಗುವಿನ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದ ಕಾರಣ ಧಾರವಾಹಿ ಇಂದ ಹೊರಬಂದಿರುವುದಾಗಿ ತಿಳಿಸಿದ್ದರು. ಇತ್ತೀಚೆಗೆ ಈಗ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ, ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಗೌತಮಿ ಅವರು ಹಂಚಿಕೊಂಡ ಗುಡ್ ನ್ಯೂಸ್ ಗೆ ಅವರಿಗೆ ಶುಭಾಶಯ ತಿಳಿಸಿ, ತಾಯ್ತನವನ್ನು ಎಂಜಾಯ್ ಮಾಡಿ ಎಂದು ಹೇಳಿದ್ದರು.

ಒಂದೆರಡು ತಿಂಗಳ ಹಿಂದೆ ಗೌತಮಿ ಗೌಡ ಅವರು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಈಗ ಮಗುವಿನ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಗೌತಮಿ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು ಚಿ ಸೌ ಸಾವಿತ್ರಿ ಧಾರವಾಹಿ ಮೂಲಕ, ಇವರು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ಮಾಡಿದ್ದಾರೆ. ಹಾಗೆಯೇ ಇವರು ಕಾರ್ಪೊರೇಟ್ ಕಂಪನಿಯಲ್ಲಿ 7 ವರ್ಷಗಳ ಕಾಲ ಕೆಲಸ ಕೂಡ ಮಾಡಿದ್ದಾರೆ.

3 ವರ್ಷಗಳ ಕಾಲ ಮಲೇಷ್ಯಾದಲ್ಲಿದ್ದು, ಕೋವಿಡ್ 2ನೇ ಅಲೆ ವೇಳೆ ಇವರು ಮತ್ತೆ ಬೆಂಗಳೂರಿಗೆ ವಾಪಸ್ ಬಂದರು. ಬಳಿಕ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಗೌತಮಿ ಅವರು ಈಗ ಅಮೆಜಾನ್ ನಲ್ಲಿ ಮಿಡ್ ಸೀನಿಯರ್ ಲೆವೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ಕೆಲಸ ಮಾಡುತ್ತಲೇ ಗೌತಮಿ ಅವರು ಕಂಪನಿಯಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

Leave A Reply

Your email address will not be published.