GunturuKaaram: ಅಂದು ಐಟಂ ಸಾಂಗ್ ಗೆ ಜೊತೆಯಾಗಿ ಹೆಜ್ಜೆ ಹಾಕಿದ್ದ ಜೋಡಿ ಇಂದು ತಾಯಿ ಮಗ! ಸಿಕ್ಕಾಪಟ್ಟೆ ಟ್ರೋಲ್!

Written by Pooja Siddaraj

Published on:

GunturuKaaram: ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರ ಕಾಂಬಿನೇಶನ್ ನ ಗುಂಟೂರು ಕಾರಮ್ ಸಿನಿಮಾ ಜನವರಿ 12ರಂದು ತೆರೆಕಂಡಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಈ ಸಿನಿಮಾ ತರೆಕಂಡಿದ್ದು, ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಇದೀಗ ಈ ಸಿನಿಮಾದಲ್ಲಿ ಒಂದು ವಿಷಯ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದೆ.

ಅದೇನು ಎಂದರೆ, ಗುಂಟೂರು ಕಾರಮ್ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ರಮ್ಯಾ ಕೃಷ್ಣನ್ ಅವರು ತಾಯಿಯಾಗಿ ನಟಿಸಿದ್ದಾರೆ. ರಮ್ಯಾ ಕೃಷ್ಣನ್ ಅವರು ಈಗ ಹೆಚ್ಚಾಗಿ ತಾಯಿ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಕೂಡ ರಮ್ಯಾ ಕೃಷ್ಣನ್ ಅವರ ಪಾತ್ರ ಚೆನ್ನಾಗಿದೆ. ಆದರೆ ಇಲ್ಲಿ ಮತ್ತೊಂದು ವಿಚಾರ ಟ್ರೋಲ್ ಆಗುತ್ತಿದೆ. ಅದು ಈ ಹಿಂದಿನ ಒಂದು ಹಾಡಿನ ಬಗ್ಗೆ..

ಬಹಳ ವರ್ಷಗಳ ಹಿಂದೆ ತೆರೆಕಂಡಿದ್ದ ನಾನಿ ಎನ್ನುವ ಸಿನಿಮಾದಲ್ಲಿ ಮಹೇಶ್ ಬಾಬು ಹಾಗೂ ರಮ್ಯಾ ಕೃಷ್ಣನ್ ಇಬ್ಬರು ಒಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದರು. ಆಗ ಜೋಡಿಯಾಗಿ ನಟಿಸಿದ್ದರು. ಈಗ ಅದೇ ನಟಿ ಮಹೇಶ್ ಬಾಬು ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ನೆಟ್ಟಿಗರು ಇವರಿಬ್ಬರ ಪಾತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ಅಂದು ಐಟಂ ಹಾಡಿಗೆ ಹಾಟ್ ಆಗಿ ಹೆಜ್ಜೆ ಹಾಕಿದ್ದರು..

ಇವರಿಬ್ಬರನ್ನು ತಾಯಿ ಮಗನಾಗಿ ತೋರಿಸಿರೋ ನಿರ್ದೇಶಕರಿಗೆ ಬುದ್ಧಿ ಇಲ್ಲವೇ ಎಂದು ಟ್ರೋಲ್ ಮಾಡಲಾಗುತ್ತಿದ್ದು, ನಿರ್ದೇಶಕರಿಗೆ ಬುದ್ಧಿ ಇಲ್ಲ ಎಂದು ತ್ರಿವಿಕ್ರಮ್ ಶ್ರೀನಿವಾಸ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

Leave a Comment