Hairfall Tips: ಕೂದಲು ಉದುರುವಿಕೆ ಸಮಸ್ಯೆಗೆ ರಾಮಬಾಣ ಬಾಳೆಹಣ್ಣು! ಈ ವಿಧಾನ ಟ್ರೈ ಮಾಡಿ

0 1

Hairfall Tips: ಈಗಿನ ಕಾಲದಲ್ಲಿ ಬದಲಾಗುತ್ತಿರುವ ಬ್ಯುಸಿ ಜೀವನ ಶೈಲಿ, ಅನಾರೋಗ್ಯಕರ ತಿಂಡಿಗಳು ಮತ್ತು ಇನ್ನಿತರ ಕಾರಣಗಳಿಗೆ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ನೈಸರ್ಗಿಕವಾದ ಹಣ್ಣುಗಳು ಸಹಾಯ ಮಾಡುತ್ತದೆ. ಬಾಳೆಹಣ್ಣು ಇದಕ್ಕೆ ಒಳ್ಳೆಯ ಮಾರ್ಗ ಎಂದು ಹೇಳಬಹುದು. ಹೌದು, ಬಾಳೆಹಣ್ಣನಲ್ಲಿ ಜೀವಸತ್ವಗಳು, ಮೆಗ್ನಿಶಿಯಂ, ಪೊಟ್ಯಾಶಿಯಂ, ಸಿಲಿಕಾನ್ ಮತ್ತು ಇನ್ನಿತರ ಪೋಷಕಾಂಶಗಳಿವೆ..

ಈ ಎಲ್ಲಾ ಅಂಶಗಳು ವೀಕ್ ಆಗಿರುವ ಕೂದಲುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಹೇರ್ ಮಾಸ್ಕ್ ಮಾಡುವುದರಿಂದ ಅದು ಕೂದಲಿಗೆ ನ್ಯಾಚುರಲ್ ಹೇರ್ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ. ಆಂಟಿ ಮೈಕ್ರೊಬಿಯಲ್ ಅಂಶ ಸಹ ಇರುವುದರಿಂದ ಡ್ಯಾಂಡ್ರಫ್ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.

ಸಾಮಾನ್ಯವಾಗಿ ಈಗಿನ ಯುವಕ ಯುವತಿಯರು ಹೇರ್ ಕಲರ್ ಮಡಿಕೊಳ್ಳುವ ಕ್ರೇಜ್ ಇರುತ್ತದೆ. ಆದರೆ ಇದನ್ನು ತಯಾರಿಸಲು ಕೆಮಿಕಲ್ ಗಳನ್ನು ಬಳಸುವ ಕಾರಣ, ಅವುಗಳನ್ನು ಕೂದಲಿಗೆ ಹಚ್ಚಿದರೆ, ಕೂದಲು ಉದುರುವಿಕೆ ಜಾಸ್ತಿಯಾಗುತ್ತದೆ. ಹಾಗಾಗಿ ಹೇರ್ ಕಲರ್ ನ ಯಾವ ಪ್ರಾಡಕ್ಟ್ ಬಳಸುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ಕೂದಲು ಆರೋಗ್ಯಕರವಾಗಿ ಇರಬೇಕು ಎಂದರೆ ಬಾಳೆಹಣ್ಣಿನ ಫೇಸ್ ಮಾಸ್ಕ್ ಬಳಸಿ.

ಬಾಳೆಹಣ್ಣಿನ ಫೇಸ್ ಮಾಸ್ಕ್ ತಯಾರಿಸುವುದು ಹೇಗೆ ಎಂದರೆ.. ಒಂದು ಬಾಳೆಹಣ್ಣಿಗೆ ಒಂದು ಸ್ಪೂನ್ ಅಲೋವೆರ ಜೆಲ್, 1 ಸ್ಪೂನ್ ಆಲಿವ್ ಆಯ್ಲ್, ಇಷ್ಟು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಅಪ್ಲೈ ಮಾಡಿ, 20 ನಿಮಿಷಗಳವರೆಗು ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲೋ ವಾಶ್ ಮಾಡಿ. 15 ದಿನಕ್ಕೆ ಒಂದು ಸಾರಿ ಈ ರೀತಿ ಮಾಡಿ.

ಕೂದಲು ಡ್ರೈ ಆಗಿದ್ದು, ಸುಕ್ಕು ಆಗಿದ್ದರೆ ಅದಕ್ಕೆ ಒಂದು ಪರಿಹಾರ ಇದೆ, ಒಂದು ಸ್ಪೂನ್ ಕಂಡೀಶನರ್ ಗೆ ಅರ್ಧ ಬಾಳೆಹಣ್ಣು ಮಿಕ್ಸ್ ಮಾಡಿ, ಇದಕ್ಕ ಒಂದು ಕಪ್ ಲೆಮೆನ್, ಒಂದು ಸ್ಪೂನ್ ಆಲಿವ್ ಆಯ್ಲ್, 2 ಟೇಬಲ್ ಸ್ಪೂನ್ ಮೊಸರು, ಇದಿಷ್ಟನ್ನು ಮಿಕ್ಸ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ, 20 ನಿಮಿಷ ಬಿಟ್ಟು ವಾಶ್ ಮಾಡಿ.

Leave A Reply

Your email address will not be published.