Health Tips: ದೇಹದ ತೂಕವನ್ನು ಬೇಗ ಇಳಿಸಿಕೊಳ್ಳಲು ತಪ್ಪದೇ ಈ ಒಂದು ಕೆಲಸ ಮಾಡಿ

Written by Pooja Siddaraj

Published on:

Health Tips: ಈಗಿನ ಕಾಲದಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಕೆಲಸದ ಒತ್ತಡ ಮತ್ತು ಇನ್ನಿತರ ಹಲವು ಕಾರಣಗಳಿಂದ ಜನರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ದೇಹದ ತೂಕ ಇದ್ದಕ್ಕಿದ್ದ ಹಾಗೆ ಹೆಚ್ಚಾಗುತ್ತದೆ. ಒಂದು ವೇಳೆ ನಿಮಗೂ ಈ ಸಮಸ್ಯೆ ಇದ್ದರೆ, ಇಂದು ನಾವು ತಿಳಿಸುವ ಕೆಲವು ಕ್ರಮಗಳನ್ನು ಅನುಸರಿಸಿ ಸಾಕು, ಬಹಳ ಬೇಗ ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ. ನೀವು ಮಾಡಬೇಕಿರುವುದು ಒಂದೇ, ಅಪರಾಜಿತಾ ಹೂವಿನ ಚಹಾ ಸೇವಿಸುವುದು.

ಹೌದು, ಅಪರಾಜಿತಾ ಹೂವಿನ ಚಹಾ ಕುಡಿಯುವುದರಿಂದ ಸಾಕಷ್ಟು ಪ್ರಯೋಜನವಿದೆ. ಇದರಿಂದ ದೇಹದ ತೂಕ ಕಡಿಮೆ ಆಗುತ್ತದೆ, ನಿಮ್ಮ ಮಗುವಿಗೆ ಜ್ಞಾಪಕ ಶಕ್ತಿ ಸಮಸ್ಯೆ ಇದ್ದರೆ, ಅದು ಕೂಡ ಕಡಿಮೆ ಆಗುತ್ತದೆ. ಹೀಗೆ ಹಲವು ಸಮಸ್ಯೆಗೆ ಪರಿಹಾರ ಆಗಿರುವ ಅಪರಾಜಿತಾ ಹೂವಿನ ಚಹಾದಿಂದ ನಿಮಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸಿಕೊಡುತ್ತೇವೆ ನೋಡಿ..

*ಅಪರಾಜಿತಾ ಹೂವಿನ ಚಹಾ ಕುಡಿಯುವುದರಿಂದ ಬಹಳ ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಬಹುದು. ಈ ಹೂವಿನಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಉತ್ಕರ್ಷಣ ವಿರೋಧಕ ಶಕ್ತಿ, ಡಯಾಬಿಟಿಸ್ ಅನ್ನು ತಡೆಯುವ ಗುಣಗಳು, ಹೀಗೆ ಸಾಕಷ್ಟು ಪ್ರಯೋಜನ ಇರುವುದರಿಂದ ಈ ಹೂವು ಆರೋಗ್ಯಕ್ಕೆ ಒಳ್ಳೆಯದು.

*ಅಪರಾಜಿತಾ ಹೂವಿನ ಚಹಾ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಈ ಕ್ರಿಯೆಯಿಂದ ನಿಮ್ಮ ದೇಹದ ಪ್ರತಿರಕ್ಷಣಾ ಸಮಸ್ಯೆ ಕೂಡ ಪರಿಹಾರ ಆಗುತ್ತದೆ. ದೇಹದ ತೂಕ ಕೂಡ ಸುಲಭವಾಗಿ ಇಳಿಕೆ ಆಗುತ್ತದೆ. ಈ ಹೂವಿನಿಂದ ಟೀ ತಯಾರಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

*ಒಂದು ಪಾತ್ರೆಗೆ ನೀರು ಹಾಕಿ, ನಾಲ್ಕರಿಂದ ಐದು ಅಪರಾಜಿತಾ ಹೂವುಗಳನ್ನು ಹಾಕಿ ಚೆನ್ನಾಗಿ ಕುದಿಸಿ, ನಂತರ ಗಾಜಿನ ಗ್ಲಾಸ್ ನಲ್ಲಿ ಇದನ್ನು ಫಿಲ್ಟರ್ ಮಾಡಿ.. ಒಂದು ವೇಳೆ ಕೊಲೆಸ್ಟ್ರಾಲ್ ಇದ್ದರೆ, ಅದನ್ನು ಕಡಿಮೆ ಮಾಡುವುದಕ್ಕೆ ಈ ಹೂವಿನ ಟೀ ಸಹಾಯ ಮಾಡುತ್ತದೆ..ಇದರಿಂದ ನಿಮ್ಮ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಸಾಗುತ್ತದೆ.ಈ ಹೂವಿನ ಚಹಾ ಸೇವಿಸುವುದರಿಂದ ನಿಮಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ.

*ಮುಟ್ಟಿನ ಸಮಸ್ಯೆ ಇರುವವರಿಗೆ ಕೂಡ ಇದು ಸಹಾಯ ಆಗುವ ಸಮಸ್ಯೆ ಆಗಿರುತ್ತದೆ. ವಯಸ್ಸಾಗಿ ಬ್ಯೂಟಿ ಕಳೆದುಕೊಳ್ಳುತ್ತಿರುವ ಭಾವನೆ ಇರುವವರಿಗೆ ಕೂಡ ಇದು ಒಳ್ಳೆಯ ಪರಿಹಾರ ಆಗಿರುತ್ತದೆ. ಮುಖದಲ್ಲಿರುವ ಸುಕ್ಕುಗಳನ್ನು ತೆಗೆದು ಹಾಕಲು, ರೇಖೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಮುಖಕ್ಕೆ ಗ್ಲೋ ಬರುತ್ತದೆ. ಇಷ್ಟು ಪ್ರಯೋಜನ ಇರುವುದರಿಂದ ಈ ಹೂವಿನ ಚಹಾ ಸೇವೆನೆ ಮಾಡುವುದು ಒಳ್ಳೆಯದು.

Leave a Comment