Health Tips: ಮನೆಯಲ್ಲಿದ್ದಾಗ ಕೂಡ ಸನ್ ಸ್ಕ್ರೀನ್ ಹಚ್ಚುವ ಆ ಅವಶ್ಯಕತೆ ಇದೆಯಾ?

0 129

Health Tips: ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಿಂದ ಹೊರಬಂದಾಗ ಸನ್ ಸ್ಕ್ರೀನ್ ಹಚ್ಚುತ್ತಾರೆ. ಇದು ತುಂಬಾ ಕಾಮನ್, ಆದರೆ ಮನೆಯ ಒಳಗಿದ್ದಾಗ ಕೂಡ ಸನ್ ಸ್ಕ್ರೀನ್ ಹಚ್ಚಬೇಕಾ? ಈ ಪ್ರಶ್ನೆ ಕಾಮನ್ ಆಗಿ ಎಲ್ಲರಲ್ಲೂ ಇರುತ್ತದೆ, ಇದಕ್ಕೆ ಉತ್ತರ ಕೊಡಬೇಕು ಎಂದರೆ ಕಾಮನ್ ಆಗಿ ಹೌದು.. ಮನೆಯಲ್ಲಿ ಇದ್ದಾಗಲು ಕೂಡ ಸನ್ ಸ್ಕ್ರೀನ್ ಹಚ್ಚುವುದು ಒಳ್ಳೆಯದು. ಅದಕ್ಕೆ ಹಲವು ಕಾರಣಗಳಿವೆ.. ಅವುಗಳು ಏನೇನು ಎಂದು ತಿಳಿಯೋಣ..

*ಮನೆಯಲ್ಲಿ ಕಿಟಕಿಗಳು ತೆರೆದಿರುತ್ತದೆ. ಅಲ್ಲಿಂದ UVA ಕಿರಣಗಳು ಹೊರಬರುತ್ತದೆ. ಅದರಿಂದ ಸನ್ ಬರ್ನ್ ಆಗುವುದಿಲ್ಲ, ಆದರೆ ಚರ್ಮದ ಜೀವಕೋಶಗಳಿಗೆ ತೊಂದರೆ ಆಗುತ್ತದೆ, ನಿಮ್ಮ ಚರ್ಮ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯಲ್ಲಿ ಇದ್ದಾಗಲು ಸಹ ಸನ್ ಸ್ಕ್ರೀನ್ ಹಚ್ಚಿ.
*UVA ಕಿರಣಗಳು ನಿಮ್ಮ ಚರ್ಮದ ಒಳಗೆ ಹೊಕ್ಕು ನಾಶ ಮಾಡುವ ಪ್ರಯತ್ನ ಮಾಡುವ ಕಾರಣ, ಅದರಿಂದ ಮುಖದಲ್ಲಿ ಸುಕ್ಕು ಮೂಡುವುದಕ್ಕೆ ಶುರುವಾಗುತ್ತದೆ.

*UVA Rays ಕಾರ್ ನ ಕಿಟಕಿ ಅಥವಾ ಮನೆಯ ಕಿಟಕಿ ಮೂಲಕ ಚರ್ಮದ ಮೇಲೆ ಬಿದ್ದು, ಅದರಿಂದ ನಿಮ್ಮ ಚರ್ಮ ಕೆಂಪಾಗುವುದು, ಉರಿಯುವುದಕ್ಕೆ ಶುರುವಾಗುವುದು ಇದೆಲ್ಲವೂ ನಡೆಯುತ್ತದೆ. ಕೊನೆಗೆ ಇದು ಕ್ಯಾನ್ಸರ್ ಗೆ ತಿರುಗಬಹುದು.
*ನೀವು ಹೆಚ್ಚಾಗಿ, ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ನೋಡುವುದರಿಂದ ಅದರಿಂದ ಹೊರಬರುವ ಬ್ಲೂ ಲೈಟ್, ನಿಮ್ಮ ಚರ್ಮದ ಮೇಲೆ ಪ್ರಭಾವ ಮೂಡಿಸುತ್ತದೆ. ಇದರಿಂದ Ageing ಬೇಗ ಆಗುತ್ತದೆ, ಚರ್ಮ ಡಲ್ ಆಗುತ್ತದೆ.

*ತ್ವಚೆಯ ಕ್ಲೆನ್ಸರ್ ತೆಗೆದುಕೊಳ್ಳಲು ಮೊದಲಿಗೆ ನೀವು ಮುಖಕ್ಕೆ ಕ್ಲೆನ್ಸರ್, ಟೋನರ್, ಇವುಗಳನ್ನು ಹಚ್ಚಿ ಬಳಿಕ ಸನ್ ಸ್ಕ್ರೀನ್ ಹಚ್ಚಬಹುದು.
*ಒಳ್ಳೆಯ ಕ್ವಾಲಿಟಿ ಸನ್ ಸ್ಕ್ರೀನ್ ಹಚ್ಚಿದರೆ, ನಿಮ್ಮ ಮುಖದ ತೇವಾಂಶವನ್ನು ಪ್ರೊಟೆಕ್ಟ್ ಮಾಡುತ್ತದೆ.
*ಮನೆಯಲ್ಲಿದ್ದಾಗ ಪ್ರತಿ 4 ರಿಂದ 6 ಗಂಟೆಗಳ ಸಮಯಕ್ಕೆ ಸನ್ ಸ್ಕ್ರೀನ್ ಹಚ್ಚಿ. ಇದರಿಂದ ಬೇರೆ ಕಿರಣಗಳಿಂದ ನಿಮ್ಮ DNA ಗೆ ಆಗುವ ಹಾನಿ ತಪ್ಪುತ್ತದೆ.

Leave A Reply

Your email address will not be published.