Health Tips: ಸೇಬು ಹಣ್ಣು ಸೇವಿಸುವುದರಿಂದ ರಕ್ತದೊತ್ತಡ ಕಡಿಮೆ ಮಾಡುವುದು ಈ ರೀತಿ!

0 1

Health Tips: ರಕ್ತದ ಒತ್ತಡ ಈಗ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ ಆಗಿದೆ. ಈಗಿನ ಲೈಫ್ ಸ್ಟೈಲ್ ಇದಕ್ಕೆ ಮುಖ್ಯ ಕಾರಣ ಎಂದರೆ ತಪ್ಪಲ್ಲ. ಒಂದು ವೇಳೆ ನೀವು ರಕ್ತದೊತ್ತಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ, ಆಪಲ್ ಸೇವನೆ ಇಂದ ರಕ್ತದೊತ್ತಡ ಕಡಿಮೆ ಮಾಡುವುದು ಹೇಗೆ ಎನ್ನುವುದನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ..

ಆಪಲ್ ಇದು ಎಲ್ಲರೂ ಇಷ್ಟಪಟ್ಟು ಸೇವಿಸುವ ಹಣ್ಣು ಎಂದರೆ ತಪ್ಪಲ್ಲ. ಸ್ವಲ್ಪ ಒಳ್ಳೆಯ ಗಾತ್ರದಲ್ಲಿ ಇರುವ ಆಪಲ್ ನಲ್ಲಿ 60 ಕ್ಯಾಲೋರಿ ಇರುತ್ತದೆ, ಹಾಗಾಗಿ ಆಪಲ್ ಸೇವಿಸುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ ಹಾಗೆಯೇ ಆಪಲ್ ನಲ್ಲಿ ಸಕ್ಕರೆಯ ಪ್ರಮಾಣ ಕೂಡ ಕಡಿಮೆ ಕಡಿಮೆ ಇರುತ್ತದೆ.

ಸೇಬಿನಲ್ಲಿ ಜ್ಯುಸ್ ಮಾಡಿ ಸೇವಿಸುತ್ತಾರೆ, ಇದು ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ಜ್ಯುಸ್ ಸೇವಿಸುವುದರಿಂದ ದೇಹದ ಶಕ್ರಿ ಜಾಸ್ತಿಯಾಗುತ್ತದೆ. ಸೇಬು ಹಣ್ಣಿನಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಇದು ನಿಮಗೆ ಜಾಸ್ತಿ ಹಸಿವಾಗದ ಹಾಗೆ ನೋಡಿಕೊಳ್ಳುತ್ತದೆ ಜೊತೆಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಕೂಡ ಸಿಗುತ್ತದೆ.

ಸೇಬು ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುತ್ತದೆ. ಇದರಿಂದಾಗಿ ನಿಮ್ಮ ದೇಹಕ್ಕೆ ಬಹಳ ಸಮಯದಿಂದ ತೊಂದರೆ ಕೊಡುತ್ತಿರುವ ಆರೋಗ್ಯ ಸಮಸ್ಯೆಗಳು ಕಡಿಮೆ ಆಗುತ್ತದೆ. ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಸಕ್ಕರೆ ಖಾಯಿಲೆ ಇರುವವರಿಗೆ ಇದು ಒಳ್ಳೆಯ ಪರಿಹಾರ ಆಗಿರುತ್ತದೆ. ಗ್ಲುಕೋಸ್ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.

ಸೇಬು ಹಣ್ಣಿನಲ್ಲಿ ದೇಹದ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಅಂಶವಿದೆ. ಸೇಬು ತಿನ್ನುವುದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೆ ಸೇಬುಗಳು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಹಾಗೆಯೇ ಹೈದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

Leave A Reply

Your email address will not be published.