Health Tips: ಇಷ್ಟ ಅಂತ ಅತಿಯಾಗಿ ಬಾದಾಮಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

Written by Pooja Siddaraj

Published on:

Health Tips: ಎಲ್ಲರೂ ಇಷ್ಟಪಡುವ ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಕೂಡ ಒಂದು. ಬಹಳಷ್ಟು ಜನರು ವಿವಿಧ ರೀತಿಗಳಲ್ಲಿ ಬಾದಾಮಿ ಸೇವಿಸುತ್ತಾರೆ. ಆದರೆ ನಿಮಗೆ ಬಾದಾಮಿ ಇಷ್ಟ ಎಂದು ಅತಿಯಾಗಿ ಸೇವಿಸಿದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಿತಮಿತವಾಗಿ ಸೇವಿಸುವುದು ಒಳ್ಳೆಯದು. ಅತಿಯಾದ ಬಾದಾಮಿ ಸೇವನೆ ಇಂದ ಏನಾಗಬಹುದು ಎಂದು ತಿಳಿಸುತ್ತೇವೆ ನೋಡಿ..

*ಬಾದಾಮಿಯಲ್ಲಿ ವಿಟಮಿನ್ ಇ ಹೇರಳವಾಗಿರುತ್ತದೆ. ಹಾಗಾಗಿ ಒಂದು ವೇಳೆ ನೀವು ವಿಟಮಿನ್ ಇ ಗಾಗಿ ಬೇರೆ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಮತ್ತೆ ಹೆಚ್ಚಾಗಿ ಬಾದಾಮಿ ಸೇವನೆ ಮಾಡಿದರೆ, ಇದು ನಿಮ್ಮ ಆರೋಗ್ಯದ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ.

*ಬಾದಾಮಿಯಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಅತಿಯಾಗಿ ಬಾದಾಮಿ ಸೇವನೆ ಮಾಡುವುದರಿಂದ ನಿಮಗೆ ಗ್ಯಾಸ್ ಆಗುತ್ತದೆ, ಜೊತೆಗೆ ಕಿಡ್ನಿ ಸ್ಟೋನ್ ಸಮಸ್ಯೆ ಕೂಡ ಶುರುವಾಗುವ ಸೂಚನೆ ಇರುತ್ತದೆ. ಹಾಗಾಗಿ ಅತಿಯಾದ ಸೇವನೆ ಒಳ್ಳೆಯದಲ್ಲ.

*ಇದಷ್ಟೇ ಅಲ್ಲ, ಅತಿಯಾದ ಬಾದಾಮಿ ಸೇವನೆ ಇಂದ ನಿಮಗೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೊಟ್ಟೆ ನೋವು, ಅತಿಸಾರ, ವಾಕರಿಕೆ, ಮಲಬದ್ಧತೆ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

*ಅತಿಯಾದ ಬಾದಾಮಿ ಸೇವನೆ ಮಾಡಿದರೆ ನಿಮ್ಮ ದೇಹದ ತೂಕ ಜಾಸ್ತಿಯಾಗುತ್ತದೆ. ಜೊತೆಗೆ ಬೊಜ್ಜು ಶುರುವಾಗುತ್ತದೆ. ಇಷ್ಟು ಸಮಸ್ಯೆ ಇದ್ದರು ಹಲ್ಲುಗಳ ಆರೋಗ್ಯಕ್ಕೆ ಬಾದಾಮಿ ಒಳ್ಳೆಯದು. ಆದರೆ ಜಾಸ್ತಿಯಾಗಿ ಬಾದಾಮಿ ಸೇವಿಸಿದರೆ ಅಲರ್ಜಿ ಶುರುವಾಗಬಹುದು. ಈ ಕಾರಣಗಳಿಂದ ಬಾದಾಮಿಯನ್ನು ಹಿತಮಿತವಾಗಿ ಸೇವಿಸುವುದು ಒಳ್ಳೆಯದು.

Leave a Comment