Health Tips: ಚಳಿಗಾಲದಲ್ಲಿ ಜಾಸ್ತಿಯಾಗುವ ಹೃದಯಾಘಾತ ಸಮಸ್ಯೆಯನ್ನು ತಡೆಯಲು ಈ ರೀತಿ ಮಾಡಿ!

0 2

Health Tips: ಈಗ ಚಳಿಗಾಲ ಶುರುವಾಗಿದೆ, ಈ ಕಾಲದಲ್ಲಿ ಶಿಥಿಲ ಹೆಚ್ಚಾಗಿರುತ್ತದೆ. ಈ ಚಳಿಯಲ್ಲಿ ಹೃದಯಕ್ಕೆ ಸಂಬಂಧಿಸಿದ ಹೃದಯಾಘಾತ ಸಂಭವಿಸುವ ಚಾನ್ಸ್ ಜಾಸ್ತಿ ಇರುತ್ತದೆ. ಹಾಗಾಗಿ ಈ ವೇಳೆ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಹಾಗಿದ್ರೆ ಹೃದಯಾಘಾತ ಆಗದಂತೆ ತಡೆಯಲು ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸುತ್ತೇವೆ ನೋಡಿ..

*ಪ್ರತಿದಿನ ವ್ಯಾಯಾಮ ಮಾಡಿ :- ಪ್ರತಿದಿನ ವ್ಯಾಯಾಮ ಮಾಡಬೇಕು, ಚಳಿಗಾಲದಲ್ಲಿ ಸೋಮಾರಿತನ ಹೆಚ್ಚು. ಆದರೆ ಅದನ್ನು ತಲೆಗೆ ಹಾಕಿಕೊಳ್ಳದೆ, ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

*ಆರೋಗ್ಯಕರ ಆಹಾರ :- ಚಳಿಗಾಲದಲ್ಲಿ ಆಹಾರದ ಬಗ್ಗೆ ಕೂಡ ಹೆಚ್ಚಿನ ಗಮನ ಕೊಡಬೇಕು. ಆಹಾರ ಉತ್ತಮವಾಗಿದ್ದರೆ ಅದರಿಂದ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಆಗುವುದಿಲ್ಲ. ಹಾಗಾಗಿ ಎಣ್ಣೆ ಕಡಿಮೆ ಇರುವ ಪದಾರ್ಥ, ಹಣ್ಣುಗಳು, ತರಕಾರಿ, ಹಾಲು ಇವುಗಳನ್ನು ಸೇವಿಸಬೇಕು. ಅನಾರೋಗ್ಯಕರ ಆಹಾರ ಸೇವನೆ ಮಾಡಬಾರದು.

*ಒತ್ತಡದಿಂದ ದೂರವಿರಿ :- ಹೃದಯಕ್ಕೆ ಒತ್ತಡ ಜಾಸ್ತಿಯಾದರೆ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಒತ್ತಡದಿಂದ ದೂರ ಇರುವುದಕ್ಕೆ, ಧ್ಯಾನ ಯೋಗ ಇದೆಲ್ಲವೂ ಒತ್ತಡದಿಂದ ದೂರವಿರಲು ಸಹಾಯ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸಂತೋಷವಾಗಿರಲು ಟ್ರೈ ಮಾಡಿ.

*ಆರೋಗ್ಯ ತಪಾಸಣೆ ಮಾಡಿಸಿ :- ಈ ಸಮಯದಲ್ಲಿ ನೀವು ಆಗಾಗ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಕೂಡ ಒಳ್ಳೆಯದು. ಇದರಿಂದ ಆರೋಗ್ಯದ ಬಗ್ಗೆ ನಿಮಗೆ ತಿಳಿದಿರುತ್ತದೆ. ನಿಮ್ಮ ದೇಹಸ್ತಿತಿಗೆ ತಕ್ಕ ಹಾಗೆ ನೀವು ಹುಷಾರಾಗಿ ಇರಬಹುದು.

*ಧೂಮಪಾನ ಮದ್ಯಪಾನದಿಂದ ದೂರವಿರಿ :- ಈ ವೇಳೆ ನೀವು ಧೂಮಪಾನ ಮತ್ತು ಮದ್ಯಪಾನದಿಂದ ದೂರ ಇರುವುದು ಒಳ್ಳೆಯದು. ಇವು ಹೃದಯದ ಆರೋಗ್ಯವನ್ನು ಇನ್ನಷ್ಟು ಹಾಳು ಮಾಡುತ್ತದೆ. ಹಾಗಾಗಿ ಇವುಗಳಿಂದ ದೂರವಿರಿ.

Leave A Reply

Your email address will not be published.