Health Tips: ಪ್ರತಿದಿನ ಸೀಬೆಹಣ್ಣು ತಿನ್ನುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

Written by Pooja Siddaraj

Published on:

Health Tips: ಸೆಬೇಕಾಯಿ ಮತ್ತು ಸೀಬೆ ಹಣ್ಣು ಇವೆರಡು ಕೂಡ ಚಳಿಗಾಲದಲ್ಲಿ ಹೆಚ್ಚಾಗಿ ಲಭ್ಯವಿರುತ್ತದೆ. ಈ ಕಾಲದಲ್ಲಿ ಕಾಣಿಸಿಕೊಳ್ಳುವುದು ಕೂಡ ಜಾಸ್ತಿಯೇ. ಈ ಹಣ್ಣನ್ನು ಪ್ರತಿದಿನ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಿದೆ. ಅವುಗಳು ಏನು ಎಂದು ತಿಳಿಸುತೇವೆ ನೋಡಿ..

*ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಇದನ್ನು ತಿನ್ನುವುದರಿಂದ ದೇಹದಲ್ಲಿ ಇಮ್ಯುನಿಟಿ ಜಾಸ್ತಿಯಾಗುತ್ತದೆ. ಇಮ್ಯುನಿಟಿ ಸಮಸ್ಯೆ ಇರುವವರು ಸೀಬೆ ಹಣ್ಣನ್ನು ತಿನ್ನುವುದರಿಂದ ಇಮ್ಯುನಿಟಿ ಹೆಚ್ಚಿಸಿಕೊಳ್ಳಬಹುದು.

*ಸೀಬೆ ಹಣ್ಣು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ. ಹಾಗೆಯೇ ಫೈಬರ್ ಅಂಶ ಜಾಸ್ತಿ ಇದೆ. ಈ ಕಾರಣಕ್ಕೆ ಸೀಬೆ ಹಣ್ಣು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯ ಅಂಶ ಜಾಸ್ತಿ ಆಗುವುದಿಲ್ಲ.

*ಸೀಬೆ ಹಣ್ಣಿನಲ್ಲಿ ಫೈಬರ್ ಅಂಶ ಜಾಸ್ತಿ ಇದೆ, ಹಾಗೆಯೇ ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆ ಸುಗಮವಾಗಿ ಆಗುವ ಹಾಗೆ ಮಾಡುತ್ತದೆ.

*ಸೀಬೆ ಹಣ್ಣಿನಲ್ಲಿ ಮೆಗ್ನಿಶಿಯಂ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಹೆಚ್ಚು ಒತ್ತಡ ಆಗುವುದಿಲ್ಲ. ಹಾಗಾಗಿ ಈ ಹಣ್ಣನ್ನು ತಿನ್ನಬೇಕು ಎಂದು ವೈದ್ಯರು ಕೂಡ ಹೇಳುತ್ತಾರೆ.

Leave a Comment