Hema Choudhari: ಹಿರಿಯ ನಟಿ ಹೇಮಾ ಚೌಧರಿ ಅವರ ಆರೋಗ್ಯ ಸ್ಥಿತಿ ಗಂಭೀರ! ಐಸಿಯುನಲ್ಲಿ ಚಿಕಿತ್ಸೆ!

Written by Pooja Siddaraj

Published on:

Hema Choudhari: ಕನ್ನಡ ಚಿತ್ರರಂಗಕ್ಕೆ ಒಂದಾದ ನಂತರ ಒಂದು ಶಾಕ್ ಗಳು ಎದುರಾಗುತ್ತಿವೆ. ಇತ್ತೀಚೆಗೆ ಕನ್ನಡದ ಹಿರಿಯನಟಿ ಲೀಲಾವತಿ ಅವರು ವಿಧಿವಶರಾದರು. ಅವರ 11ನೇ ದಿನದ ಕಾರ್ಯ ಕೂಡ ನಡೆಯಿತು. ಅದರ ಬೆನ್ನಲ್ಲೇ ನಟಿ ಹೇಮಾ ಚೌಧರಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ಮಾಹಿತಿ ಸಿಕ್ಕಿದೆ. 3 ದಿನಗಳ ಹಿಂದೆ ಅವರಿಗೆ ಬ್ರೇನ್ ಹ್ಯಾಮೊರೆಜ್ ಆಗಿದ್ದು ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ಹೇಮಾ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆಯಂತೆ. ಇತ್ತೀಚೆಗೆ ಇವರು ಲೀಲಾವತಿ ಅವರ 11ನೇ ದಿನದ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆಗ ವಿನೋದ್ ರಾಜ್ ಅವರೊಡನೆ ಮಾತನಾಡಿ, ಸಮಾಧಾನ ಮಾಡಿದ್ದರು. ಆದರೆ ಅಲ್ಲಿಂದ ಬಂದ ನಂತರ ಇದ್ದಕ್ಕಿದ್ದ ಹಾಗೆ ಹೇಮಾ ಚೌಧರಿ ಅವರಿಗೆ ಬ್ರೇನ್ ಹ್ಯಾಮೊರೇಜ್ ಆಗಿದೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಈಗ ಅವರಿಗೆ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೇಮಾ ಚೌಧರಿ ಅವರ ಮಗ ಐರ್ಲೆಂಡ್ ನಲ್ಲಿದ್ದು, ಅವರು ಕೂಡ ಈಗಾಗಲೇ ಭಾರತಕ್ಕೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Comment