Hibisucus Benifits :ದಾಸವಾಳ ಗಿಡ ನಿಮ್ಮ ಮನೆಯಲ್ಲಿ ಇದ್ದರೆ ತಪ್ಪದೆ ನೋಡಲೇ ಬೇಕಾದ ಮಾಹಿತಿ!
Hibisucus Benifits :ಸಂಜೀವಿನಿಯನ್ನು ಸೇವಿಸಿದರೆ ಯಾವುದೇ ರೀತಿಯ ಅನಾರೋಗ್ಯ ಕಾಡುವುದಿಲ್ಲ. ಆದರೆ ಸಂಜೀವನ ಕಾರ್ಯನಿರ್ವಹಿಸಬಲ್ಲ ಹಲವಾರು ರೀತಿಯ ಔಷಧಿ ಗುಣಗಳನ್ನು ಹೊಂದಿರುವ ಸಸ್ಯಗಳು ಮತ್ತು ಗಿಡಗಳು ಇವೇ. ಅದರಲ್ಲಿ ದಾಸವಾಳ ಸಸ್ಯವು ಕೂಡ ಒಂದು. ಸಾಮಾನ್ಯವಾಗಿ ಈ ಹೂವಿನ ಗಿಡವನ್ನು ಪೂಜೆಗೆ ಬಳಸಲಾಗುತ್ತದೆ.ಆದರೆ ಈ ಗಿಡದಿಂದ ಆರೋಗ್ಯಕ್ಕೆ ತುಂಬಾನೆ ಪ್ರಯೋಜನವಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಶುಗರ್ ಮತ್ತು ಬಿಪಿ ಸಮಸ್ಯೆ ಇದ್ದೇ ಇರುತ್ತದೆ. ಇಂಥವರಿಗೆ ದಾಸವಾಳದ ಹೂವು ತುಂಬಾ ಪ್ರಯೋಜನವಾಗಿರುತ್ತದೆ. ಈ ದಾಸವಾಳದ ಹೂವಿನಿಂದ ಚಹವನ್ನು ತಯಾರು ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ದಾಸವಾಳ ಹೂವಿನಿಂದ ತಯಾರು ಮಾಡಿದ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಕಲ್ಮಶಗಳು ಹೋಗುತ್ತವೆ. ಅಷ್ಟೇ ಅಲ್ಲದೆ ಬಿಪಿ ಕೂಡ ಕಡಿಮೆಯಾಗುತ್ತದೆ ಮತ್ತು ಸಕ್ಕರೆ ಕಾಯಿಲೆ ಅಧಿಕವಾಗಿದ್ದರೆ ರಕ್ತದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರಿಂದ ಸಕ್ಕರೆ ಕಾಯಿಲೆ ಕೂಡಾ ನಿವಾರಣೆಯಾಗುತ್ತದೆ.
ಇನ್ನು ಬಿಳಿ ದಾಸವಾಳವನ್ನು ಔಷಧಿಗೆ ಹೆಚ್ಚು ಬಳಕೆ ಮಾಡಲಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಕಬ್ಬಿಣದ ಅಂಶವು ಆರೋಗ್ಯವನ್ನು ಸುಧಾರಿಸುತ್ತದೆ. ಮೊದಲು ಒಂದು ಪಾತ್ರೆಗೆ ಎರಡು ಲೋಟ ಹಾಕಿ ಚೆನ್ನಾಗಿ ಕುದಿಸಿ ನಂತರ ದಾಸವಾಳದ ಹೂವನ್ನು ನೀರಿಗೆ ಹಾಕಿ 10 ನಿಮಿಷ ಚೆನ್ನಾಗಿ ಕುದಿಸಿ. ನಂತರ ಶೋದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದನ್ನು ಕುಡಿಯುವುದರಿಂದ ನಿಮ್ಮ ಮಾನಸಿಕ ಒತ್ತಡವು ಕೂಡ ಕಡಿಮೆ ಆಗುತ್ತದೆ. ನೀವು ಇಡೀ ದಿನ ಚೈತನ್ಯದಿಂದ ಇರಬಹುದು.
ಇನ್ನು ಉರಿಮೂತ್ರ ಸಮಸ್ಸೆ ಇರುವವರು ಈ ಬಿಳಿ ದಾಸವಾಳ ಹೂವಿನ ರಸಕ್ಕೆ ಕಲ್ಲು ಸಕ್ಕರೆ ಮತ್ತು ಹಾಲು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರದ ಸಮಸ್ಯೆ ಕಡಿಮೆಯಾಗುತ್ತದೆ. ಇನ್ನೂ ರಕ್ತಹೀನತೆ ಸಮಸ್ಯೆ ಇದ್ದವರಿಗೂ ಕೂಡ ತುಂಬಾನೇ ಒಳ್ಳೆಯದು. ಕೆಂಪು ದಾಸಳ ವನ್ನು ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ ಮತ್ತು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ದೂರವಾಗುತ್ತದೆ. ಇನ್ನು ತಲೆಹೊಟ್ಟಿನ ಸಮಸ್ಯೆ ಮತ್ತು ಕೂದಲು ಉದುರುವ ಸಮಸ್ಸೆ ಇದ್ದಾರೆ ದಾಸವಾಳ ತುಂಬಾನೇ ಉಪಯೋಗಕಾರಿ. ದಾಸವಾಳದ ಹೂವನ್ನು ಕೊಬ್ಬರಿ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಿ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.ಜೊತೆಗೆ ತಲೆಹೊಟ್ಟಿನ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ.Hibisucus Benifits