ಹಿಂದೂ ಧರ್ಮದ ಪ್ರಕಾರ ಹಣೆಗೆ ಕುಂಕುಮ ಯಾಕೆ ಇಡಬೇಕು ಗೊತ್ತಾ?
ನಮ್ಮ ಭಾರತೀಯ ಪರಂಪರೆಯಲ್ಲಿ ಕುಂಕುಮ , ಗಂಧ , ತಿಲಕ , ನಾಮ ಇತ್ಯಾದಿ ಗಳನ್ನು ಹಚ್ಚಿ ರೂಢಿಸಿಕೊಂಡು ಬಂದಿರುರುವುದು ಯಾಕೆ ಎಂದು ನೋಡುವುದಾದರೆ ನಮಗೆ ಹಲವಾರು ಉತ್ತರಗಳು ಸಿಗುತ್ತವೆ.
ಇನ್ನು ನಮ್ಮ ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಮಹತ್ವವಿದೆ.ಅದೇ ರೀತಿ ಹಣೆಯಲ್ಲಿ ಕುಂಕುಮ ಇಡುವುದಕ್ಕೂ ಸಹ ಒಂದು ಮುಖ್ಯವಾದ ಬಲವಾದ ಕಾರಣವಿದೆ.
ಅದೇನೆಂದರೆ ಷಡ್ ಚಕ್ರದಲ್ಲಿ ಒಂದಾದ ಆಜ್ಞಾ ಚಕ್ರ 2 ಹುಬ್ಬುಗಳ ಮಧ್ಯೆ ಸ್ಥಿತವಾಗಿರುತ್ತದೆ.
ಈ ಆಜ್ಞಾ ಚಕ್ರವು ಜಾಗೃತಿಗೊಳ್ಳಲು ಅಂದರೆ ಆಜ್ಞೆಯನ್ನು ಮಾಡಲು ಹಣೆಗೆ ಇಟ್ಟ ಕುಂಕುಮ ಅಥವಾ ಇನ್ನಾವುದೇ ತಿಲಕವು ಪ್ರೇರೇಪಿಸುತ್ತದೆ.ಒಟ್ಟಾರೆಯಾಗಿ ಮನಸ್ಸು , ಮೆದುಳು ಯಾವುದೇ ಕಠಿಣ ಪರಿಸ್ಥಿತಿಯಲ್ಲೂ , ಕಠಿಣವಾದ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಈ ಆಜ್ಞಾ ಚಕ್ರವು ಜಾಗೃತಗೊಂಡಿದ್ದರೆ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿದೆ
ಹಾಗಾಗಿ ಆಜ್ಞಾ ಚಕ್ರವನ್ನು ಜಾಗೃತಗೊಳಿಸಲು ಕೆಲವರು ಕುಂಕುಮ , ಗಂಧ , ನಾಮ , ತಿಲಕ ಇತ್ಯಾದಿಗಳನ್ನು ಇಡಲಾಗುತ್ತದೆ.
ಧನ್ಯವಾದಗಳು.