ಹೊಂಬಾಳೆ ಫಿಲ್ಮ್ಸ್ ನಿಂದ ಸಾವಿರಾರು ಕೋಟಿ ಹೂಡಿಕೆ: ಶುಭ ಹಾರೈಸಿದ ನಟ ಪ್ರಭಾಸ್! ವೈರಲ್ ಆಯ್ತು ಪೋಸ್ಟ್

0
35

Hombale Films :ಕೆಜಿಎಫ್(KGF) ಮತ್ತು ಕಾಂತರಾ(Kantara) ಸಿನಿಮಾ ಗಳ ಮೂಲಕ ಇಡೀ ದೇಶದಲ್ಲಿ ಹೆಸರನ್ನು ಮಾಡುತ್ತಾ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್(Hombale films) ಈಗಾಗಲೇ ಕನ್ನಡ ಮಾತ್ರವೇ ಅಲ್ಲದೇ ದಕ್ಷಿಣದ ನಾಲ್ಕು ಭಾಷೆಗಳಲ್ಲೂ ಸಹಾ ಸಿನಿಮಾ ನಿರ್ಮಾಣವನ್ನು ಮಾಡುವ ಮೂಲಕ ಪ್ರಮುಖ ಸಿನಿಮಾ‌ ನಿರ್ಮಾಣ ಸಂಸ್ಥೆಯಾಗಿ ಹೊರ ಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಫಿಲ್ಮ್ಸ್ ನ ಮುಖ್ಯಸ್ಥರಾದ ವಿಜಯ ಕಿರಂಗದೂರು(Vijay Kirangadur) ಅವರು ಹೊಸ

ಕೊಲ್ಲೋ ದೈವಕ್ಕೆ, ಮನಃ ಪರಿವರ್ತಿಸೋ ಶಕ್ತಿ ಇಲ್ವೇ? ದೈವದ ಬಗ್ಗೆ ಕಾಂತಾರ ನಟನ ಪ್ರಶ್ನೆ

ಕೆಜಿಎಫ್ ಸರಣಿ(KGF Series) ಸೂಪರ್ ಹಿಟ್ ಆದ ಮೇಲೇ ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿರುವ ವಿಜಯ್ ಕಿರಂಗದೂರು(Vijay Kirangadur) ಅವರು ಚಿತ್ರರಂಗದಲ್ಲಿ ತಮ್ಮ ನಿರ್ಮಾಣ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಮೂರು ಸಾವಿರ ಕೋಟಿ ರೂಪಾಯಿಗಳ ಹೂಡಿಕೆ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಸಿನಿಮಾದಿಂದ ಬಂದ ಲಾಭವನ್ನು ಸಿನಿಮಾ ರಂಗದಲ್ಲೇ ತೊಡಗಿಸುವ ಘೋಷಣೆಯನ್ನು ಮಾಡಿದ್ದಾರೆ. ಅಂದರೆ ಮುಂದಿನ ದಿನಗಳಲ್ಲಿ ಭಾರೀ ಬಜೆಟ್ ಸಿನಿಮಾಗಳ ನಿರ್ಮಾಣ ಆಗಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ ವಿಜಯ್ ಕಿರಂಗದೂರು ಅವರು.

ಹೊಂಬಾಳೆ ಫಿಲ್ಮ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದ್ದು, ಇದಕ್ಕೆ ಬಹಳಷ್ಟು ಮೆಚ್ಚುಗೆಗಳು ಹರಿದು ಬಂದಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ಮಾಡಿದ ಘೋಷಣೆಯನ್ನು ನೋಡಿದ ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್(Prabhas) ಅವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದು, ಹೊಂಬಾಳೆ ಫಿಲ್ಮ್ಸ್ ಮಾಡಿರುವ ನಿರ್ಧಾರಕ್ಕೆ ತಮ್ಮ ಮೆಚ್ಚುಗೆಯನ್ನು ನೋಡಿ, ಸಿನಿಮಾ ನಿರ್ಮಾಣ ಸಂಸ್ಥೆಗೆ ತಮ್ಮ ಕಡೆಯಿಂದ ಶುಭವನ್ನು ಕೋರುತ್ತಾ, ಅಭಿನಂದನೆಗಳನ್ನು ತಿಳಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.‌

ಕೊಲ್ಲೋ ದೈವಕ್ಕೆ, ಮನಃ ಪರಿವರ್ತಿಸೋ ಶಕ್ತಿ ಇಲ್ವೇ? ದೈವದ ಬಗ್ಗೆ ಕಾಂತಾರ ನಟನ ಪ್ರಶ್ನೆ

LEAVE A REPLY

Please enter your comment!
Please enter your name here