Honey singh about Urfi Javed ನಟಿ ಉರ್ಫಿ ಜಾವೇದ್(Urfi Javed) ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯ ಆಗಿರುವವರಿಗೆ ತಿಳಿದಿರುವ ಹೆಸರಾಗಿದೆ. ಹಿಂದಿಯ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಉರ್ಫಿ ಅನಂತರ ತನ್ನ ಚಿತ್ರ ವಿಚಿತ್ರ ತುಂಡುಡುಗೆಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಉರ್ಫಿ(Urfi) ಸಾರ್ವಜನಿಕ ಸ್ಥಳಗಳಲ್ಲೇ ತೀರಾ ಕಡಿಮೆ ಬಟ್ಡೆಗಳನ್ನು ಧರಿಸಿ ಕ್ಯಾಮರಾ ಮುಂದೆ ನಿಂತು ಪೋಸ್ ಗಳನ್ನು ನೀಡುವುದು ತೀರಾ ಸಾಮಾನ್ಯವಾದ ವಿಚಾರವಾಗಿದೆ. ಉರ್ಫಿ ಧರಿಸುವ ಡ್ರೆಸ್ ಗಳಿಂದಾಗಿ ನಟಿಯ ಮೇಲೆ ದೂರುಗಳು ಸಹಾ ದಾಖಲಾಗಿದೆ.
ತೂಕವನ್ನು ಈ ವಿಧಾನಗಳಲ್ಲಿ ಕಡಿಮೆ ಮಾಡಿ, ಕೆಲವೇ ದಿನಗಳಲ್ಲಿ ನೀವು ಸ್ಲಿಮ್ ಆಗಿ ಕಾಣುತ್ತೀರಿ

ಹೀಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಜನರ ಮುಂದೆ ಬರುವ ಉರ್ಫಿಯನ್ನು(Urfi troll) ಸಾಕಷ್ಟು ಟ್ರೋಲ್ ಮಾಡಲಾಗುತ್ತದೆ. ಅಲ್ಲದೇ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೆಟ್ಟ ಶಬ್ದಗಳನ್ನು ಬಳಸಿ ನಟಿಯನ್ನು ನಿಂದನೆ ಮಾಡುತ್ತಾರೆ. ಆದರೆ ಉರ್ಫಿ ಮಾತ್ರ ಇದ್ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಂಡಿಲ್ಲ. ಟ್ರೋಲ್ ಆದಷ್ಟು ಹೆಚ್ಚಾಗಿಯೇ ನಟಿಯು ತುಂಡು ಉಡುಗೆ ತೊಟ್ಟು ಜನರ ಮುಂದೆ ಬರುತ್ತಿದ್ದಾರೆ. ಆದರೆ ಈಗ ಇವೆಲ್ಲವುಗಳ ನಡುವೆ ರ್ಯಾಪರ್ ಹನಿ ಸಿಂಗ್ (Honey Singh) ಉರ್ಫಿಯನ್ನು ಹಾಡಿ ಹೊಗಳಿ ಎಲ್ಲರಿಗೂ ಶಾಕ್ ನೀಡಿದ್ದಾರೆ. Honey singh about Urfi Javed
ದಿನವಿಡೀ ನಾವೇನು ಡ್ರಗ್ಸ್ ತಗೊಳ್ಳಲ್ಲ: ಬಾಲಿವುಡ್ ಉಳಿಸಿ ಎಂದು ಯೋಗಿ ಮೊರೆ ಹೋದ ಸುನೀಲ್ ಶೆಟ್ಟಿ
ಹೌದು, ಹನಿಸಿಂಗ್(Honey Singh) ಅವರು, “ನಾನು ಆ ಮಗುವನ್ನು ನಿಜವಾಗಿಯೂ ಇಷ್ಟಪಟ್ಟಿದ್ದೇನೆ (ಉರ್ಫಿ). ಅವಳು ತುಂಬಾ ಧೈರ್ಯಶಾಲಿ ಮತ್ತು ಬೋಲ್ಡ್ ಹುಡುಗಿಯಾಗಿದ್ದಾಳೆ. ಆಕೆ ತನ್ನ ಜೀವನವನ್ನು ತನ್ನ ಇಷ್ಟದಂತೆ ಬದುಕಲು ಬಯಸುತ್ತಾಳೆ. ನಮ್ಮ ದೇಶದ ಪ್ರತಿಯೊಬ್ಬ ಹುಡುಗಿಯರು ಅವಳಿಂದ ಏನನ್ನಾದರೂ ಕಲಿಯಬೇಕು ಎಂದು ನಾನು ಭಾವಿಸುತ್ತೇನೆ ” ಎಂದು ಹೇಳಿದ್ಸಾರೆ. ಹನಿಸಿಂಗ್ ಹೇಳಿಕೆ ಈಗ ವೈರಲ್ ಆಗಿದ್ದು, ನೆಟ್ಟಿಗರು ಹನಿಸಿಂಗ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಆರಂಭಿಸಿದ್ದು, ಟೀಕೆ ಸಹಾ ಮಾಡುತ್ತಿದ್ದಾರೆ.