Horoscope: 700 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಈ ವಿಶೇಷ ರಾಜಯೋಗ! 4 ರಾಶಿಗಳಿಗೆ ಅದೃಷ್ಟ ಶುರು!

Written by Pooja Siddaraj

Published on:

Horoscope: ಗ್ರಹಗಳ ಸ್ಥಾನ ಬದಲಾವಣೆ ಇಂದ ಹಲವು ರಾಜಯೋಗಗಳ ಸೃಷ್ಟಿಯಾಗುತ್ತದೆ. 2023ರ ನವೆಂಬರ್ 29ರಂದು ಶುಕ್ರ ಸಂಕ್ರಮಣ ಸಂಭವಿಸಲಿದೆ. ಜೊತೆಗೆ ರಾಕ್ಷಸ ಗುರು ಶುಕ್ರಾಚಾರ್ಯ ಹಾಗೂ ದೇವಗುರು ಆಗಿರುವ ಬೃಹಸ್ಪತಿ ಇವರಿಬ್ಬರು ಕೂಡ ಎದುರಾಗಲಿದ್ದು, ಈ ಕಾರಣಕ್ಕೆ 5 ರಾಜಯೋಗಗಳು ಸೃಷ್ಟಿಯಾಗಲಿದೆ. 700 ವರ್ಷಗಳ ಬಳಿಕ ಈ ರೀತಿ ನಡೆಯುತ್ತಿರುವ ಕಾರಣ 5 ರಾಜಯೋಗಗಳು ಸಂಭವಿಸಲಿದೆ, ಶಶ, ಕೇಂದ್ರ, ತ್ರಿಕೋನ, ಮಾಲವ್ಯ, ನವಪಂಚಮ ಮತ್ತು ರುಚಕ ರಾಜಯೋಗ ಸೃಷ್ಟಿಯಾಗಲಿದೆ. ಇದರಿಂದ 4 ರಾಶಿಗಳ ಬದುಕೇ ಬದಲಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ರಾಜಯೋಗಗಳ ಕಾರಣ ಇವರಿಗೆ ಹೊರದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಇವರಿಗೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಹೊಸ ಕೆಲಸ ಸಿಗುವ ಸಂಭವವಿದೆ. ಈ ವೇಳೆ ದಿಢೀರ್ ಧನಲಾಭ ಸಿಗುತ್ತದೆ. ದಾಂಪತ್ಯ ಜೀವನ ಸುಂದರವಾಗಿರುತ್ತದೆ.

ಕನ್ಯಾ ರಾಶಿ :- 5 ರಾಜಯೋಗಗಳ ಕಾರಣದಿಂದ ಡಿಸೆಂಬರ್ ತಿಂಗಳು ಈ ರಾಶಿಯವರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಮತ್ತು ಕೆಲಸ ಇರುವವರಿಗೆ ಬಡ್ತಿ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಲಾಭ ಸಿಗುತ್ತದೆ, ಬ್ಯುಸಿನೆಸ್ ನಲ್ಲೂ ಲಾಭ ಸಿಗುತ್ತದೆ.

ಧನು ರಾಶಿ :- ಈ ಸಮಯದಲ್ಲಿ ಧನು ರಾಶಿ ಅವರಿಗೆ 2 ಮಹಾಪುರುಷ ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರಿಂದ ಈ ರಾಶಿಯವರಿಗೆ ಹೆಚ್ಚಿನ ಅನುಕೂಲಗಳು ಸಿಗಲಿದೆ. ಹೊರದೇಶಕ್ಕೆ ಹೋಗಬೇಕು ಎಂದುಕೊಂಡಿರುವ ಕನಸುಗಳು ನನಸಾಗಬಹುದು. ನಿಮ್ಮ ಎಲ್ಲಾ ದೊಡ್ಡ ದೊಡ್ಡ ಆಸೆಗಳು ಈ ವೇಳೆ ಈಡೇರುತ್ತದೆ.

ಮಕರ ರಾಶಿ :- ರಾಜಯೋಗವು ಇವರ ಉದ್ಯೋಗದ ವಿಚಾರದಲ್ಲಿ ಹೆಚ್ಚಿನ ಲಾಭ ತಂದುಕೊಡುತ್ತದೆ. ಜೊತೆಗೆ ಹಣಕಾಸಿನ ವಿಚಾರದಲ್ಲೂ ಅನುಕೂಲ ಆಗಲಿದೆ. ಹೊಸ ಜವಾಬ್ದಾರಿಗಳು ಸಿಗಲಿದ್ದು, ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ.

Leave a Comment