Horoscope: ಈ ರಾಶಿಯ ಜನರಿಗೆ ಮೂಗಿನ ತುದಿಯಲ್ಲೇ ಕೋಪ, ಇವರ ಜೊತೆ ಹುಷಾರಾಗಿರಿ!

Written by Pooja Siddaraj

Published on:

Horoscope: ಕೋಪ ಅನ್ನೋದು ಒಳ್ಳೆಯದಲ್ಲ, ಕೆಲವೊಮ್ಮೆ ಅತಿಯಾದ ಕೋಪದಿಂದ ತೊಂದರೆಗಳು ಆಗುತ್ತದೆ. ಆದರೆ ಕೆಲವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅವರ ಕೋಪ ಕಡಿಮೆ ಆಗುವುದೇ ಇಲ್ಲ. ಇದು ರಾಶಿಯ ಮೇಲು ಡಿಪೆಂಡ್ ಆಗಿರುತ್ತದೆ. ಕೆಲವು ರಾಶಿಗಳಿಗೆ ಮೂಗಿನ ತುದಿಯಲ್ಲೇ ಕೋಪ ಇರುತ್ತದೆ. ಇಂಥವರ ಜೊತೆಗೆ ಬದುಕುವುದೇ ಕಷ್ಟ ಎಂದು ಅನ್ನಿಸದೇ ಇರದು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಅತಿಯಾದ ಕೋಪ, ಜನರ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ. ಅವರು ಜೊತೆಗಿದ್ದಾಗ ಕೋಪ ವ್ಯಕ್ತಪಡಿಸುವುದಿಲ್ಲ. ಆದರೆ ಮನಸ್ಸಲ್ಲಿ ಕೋಪದ ಜ್ವಾಲೆ ಉರಿಯುತ್ತಲೇ ಇರುತ್ತದೆ.

ಸಿಂಹ ರಾಶಿ :- ಈ ರಾಶಿಯವರ ಕೋಪ ಸಿಂಹದ ಥರವೇ ಇರುತ್ತದೆ. ಇವರ ಕೋಪ ಎಷ್ಟು ಕೆಟ್ಟದ್ದು ಎಂದರೆ, ಇವರ ಕೋಪ ನೋಡಿದ ಯಾರೇ ಅದರಿಂದ ಬಚಾವ್ ಆಗಬೇಕು ಎಂದು ಬಯಸುತ್ತಾರೆ.

ಕನ್ಯಾ ರಾಶಿ :- ಈ ರಾಶಿಯವರಿಗೆ ಕೋಪ ಜಾಸ್ತಿ, ಆದರೆ ಇವರು ತಮ್ಮ ಕೋಪವನ್ನು ಇನ್ನೊಬ್ಬರ ಮೇಲೆ ತೋರಿಸಿಕೊಳ್ಳುವುದಿಲ್ಲ. ಬದಲಾಗಿ ತಮ್ಮ ಮೇಲೆ ತಾವೇ ಕೋಪವನ್ನು ತೋರಿಸಿಕೊಳ್ಳುತ್ತಾರೆ..

Leave a Comment